ETV Bharat / entertainment

'ಆ ಹುಡುಗಿಯಾದರೂ ಸಂತೋಷವಾಗಿರಲಿ': ನಾಗ ಚೈತನ್ಯ - ಶೋಭಿತಾ ಡೇಟಿಂಗ್​ ವದಂತಿಗೆ ಸಮಂತಾ ಪ್ರತಿಕ್ರಿಯೆ - ಸಮಂತಾ ಶಾಕುಂತಲಂ

ಶಾಕುಂತಲಂ ಪ್ರಚಾರದ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತು ​ನಟಿ ಸಮಂತಾ ರುತ್ ಪ್ರಭು ಮಾತನಾಡಿದ್ದಾರೆ.

Naga Chaitanya Sobhita Dhulipala dating
ನಾಗ ಚೈತನ್ಯ ಶೋಭಿತಾ ಡೇಟಿಂಗ್​ ವದಂತಿ
author img

By

Published : Apr 4, 2023, 12:23 PM IST

ದಕ್ಷಿಣ ಚಿತ್ರರಂಗದ ಟಾಪ್​ ನಟಿ ಸಮಂತಾ ರುತ್ ಪ್ರಭು ಅವರು ತಮ್ಮ ಮುಂಬರುವ ಬಹುನಿರೀಕ್ಷಿತ ಪೌರಾಣಿಕ ಆಧಾರಿತ ಚಿತ್ರ 'ಶಾಕುಂತಲಂ' ಪ್ರಚಾರವನ್ನು ಜೋರಾಗಿಯೇ ನಡೆಸುತ್ತಿದ್ದಾರೆ. ಸಿನಿಮಾ ಪ್ರಮೋಶನ್​​ ಸಮಯದಲ್ಲಿ, ಸಮಂತಾ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡುತ್ತಾ ಸದ್ಯ ಸಖತ್ ಸುದ್ದಿಯಲ್ಲಿದ್ದಾರೆ.

ತಮ್ಮ ಜೀವನದ ಕರಾಳ ಹಂತ, ವಿಚ್ಛೇದನ, ಮಯೋಸಿಟಿಸ್‌ನೊಂದಿಗಿನ ಹೋರಾಟ ಮತ್ತು ಶೋಭಿತಾ ಧುಲಿಪಾಲ (Sobhita Dhulipala) ಜೊತೆ ಮತ್ತೆ ಪ್ರೀತಿಯನ್ನು ಕಂಡುಕೊಂಡ ಮಾಜಿ ಪತಿ ನಾಗ ಚೈತನ್ಯ ಬಗ್ಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅವರ ವೈಯಕ್ತಿಕ ಜೀವನವು ಹೆಚ್ಚು ಸೌಂಡ್​ ಮಾಡುತ್ತಿದೆ.

ನಾಗ ಚೈತನ್ಯ ಜೊತೆಗಿನ ಸಂಬಂಧ ವಿಫಲವಾಗಿರುವ ಬಗ್ಗೆ ಸಮಂತಾ ದನಿ ಎತ್ತಿದ್ದಾರೆ. ಪ್ರೀತಿ, ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಶೇ. 100ರಷ್ಟು ತನ್ನ ಕರ್ತವ್ಯ ನಿಭಾಯಿಸಿದೆ. ದುರಾದೃಷ್ಟವಶಾತ್ ಅದು ಕೆಲಸ ಮಾಡಲಿಲ್ಲ. ಈ ಹಿನ್ನೆಲೆ, ತಾನಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ನಟಿ ಹೇಳಿದ್ದಾರೆ. ಮತ್ತೊಂದೆಡೆ, ನಟ, ವಿಚ್ಛೇದಿತ ಪತಿ ನಾಗ ಚೈತನ್ಯ ಮೇಲ್ನೋಟಕ್ಕೆ ಜೀವನದಲ್ಲಿ ಮುಂದುವರೆದಿದ್ದಾರೆ. ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.

'ತಲೆಕೆಡಿಸಿಕೊಳ್ಳುವುದಿಲ್ಲ'.... ಶಾಕುಂತಲಂ ಚಿತ್ರ ಪ್ರಚಾರದ ಸಂದರ್ಶನವೊಂದರಲ್ಲಿ, ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್​ ವದಂತಿಗಳಿಗೆ ಸಮಂತಾ ಪ್ರತಿಕ್ರಿಯಿಸಿದ್ದಾರೆ. ಯಾರು ಯಾರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಯಾರ ಹೆಸರನ್ನೂ ಉಲ್ಲೇಖಿಸದ ಸಮಂತಾ, ಪ್ರೀತಿಯ ಮೌಲ್ಯವನ್ನು ತಿಳಿದಿಲ್ಲದವರು "ಎಷ್ಟು ಜನರೊಂದಿಗೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ" ಎಂದು ಹೇಳಿದರು. "ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು, ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು ಆ ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು" ಎಂದು ಹೇಳಿದರು.

ನಾಗ ಚೈತನ್ಯ ಮತ್ತು ಶೋಭಿತಾ ಅವರ ಇತ್ತೀಚಿನ ಫೋಟೋವೊಂದು ಆನ್​ಲೈನ್​ನಲ್ಲಿ ವೈರಲ್​ ಆಗಿದೆ. ಲಂಡನ್ ರೆಸ್ಟೋರೆಂಟ್‌ನಿಂದ ಬಂದ ಫೋಟೋ ಅದು. ಈ ಇಬ್ಬರೂ ತಮ್ಮ ಸಂಬಂಧವನ್ನು ಇನ್ನೂ ಅಧಿಕೃತಗೊಳಿಸದಿದ್ದರೂ, ಶೋಭಿತಾ ಮತ್ತು ನಾಗ ಚೈತನ್ಯ ಡೇಟಿಂಗ್​ನಲ್ಲಿದ್ದಾರೆ ಎಂಬ ಊಹಾಪೋಹ ಜೋರಾಗಿಯೇ ಹರಡಿದೆ. ಅವರು ಒಟ್ಟಿಗಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸೌಂಡ್ ಮಾಡಿದೆ.

ಇದನ್ನೂ ಓದಿ: ಮಾಡದ ಅಪರಾಧಕ್ಕೆ ನಾನೇಕೆ ನರಳಬೇಕು?: ವಿಚ್ಛೇದನದ ಬಗ್ಗೆ ಮೌನ ಮುರಿದ ಸಮಂತಾ

ಮತ್ತೊಂದು ಸಂದರ್ಶನದಲ್ಲಿ ಮಾತನಾಡಿದ್ದ ನಟಿ ಸಮಂತಾ, ಅದೆಷ್ಟೋ ಸಂಕಟಗಳುಳ್ಳ ದಿನಗಳನ್ನು ಕಂಡಿದ್ದೇನೆ. ಕೆಟ್ಟ ಆಲೋಚನೆಗಳು ನನ್ನ ತಲೆಯಲ್ಲಿ ಬರುತ್ತಿದ್ದವು. ಆದರೆ ಅವುಗಳು ನನ್ನನ್ನು ನಾಶ ಮಾಡಬಾರದು ಎಂದು ಅಂದುಕೊಳ್ಳುತ್ತಿದ್ದೆ. ಹಾಗಾಗಿ ಸಿನಿಮಾಗೆ ಕಮ್​ ಬ್ಯಾಕ್​ ಮಾಡಿದೆ. ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: 'ವಿಚ್ಛೇದನ'ವೆಂಬ ಕರಾಳ ಕ್ಷಣ-ನೋವಿನಿಂದ ಚೇತರಿಸಿಕೊಂಡಿಲ್ಲವೆಂದ ನಟಿ ಸಮಂತಾ

ನಟ ದೇವ್ ಮೋಹನ್​ ಜೊತೆ ನಟಿ ಸಮಂತಾ ರುತ್ ಪ್ರಭು ಸ್ಕ್ರೀನ್​ ಶೇರ್ ಮಾಡಿರುವ ಈ ಶಾಕುತಲಂ ಚಿತ್ರ ಇದೇ ಏಪ್ರಿಲ್​ 14ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಬಹುನಿರೀಕ್ಷಿತ ಚಿತ್ರ ತೆಲುಗು, ಕನ್ನಡ, ತಮಿಳು, ಮಲಯಾಳಂ, ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಪ್ರೇಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ. ಈ ಹಿನ್ನೆಲೆ ನಟಿ ಬ್ಯಾಕ್​ ಟು ಬ್ಯಾಕ್​ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಬಗೆಬಗೆಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಪ್ರಚಾರದ ವೇಳೆ ವೈಯಕ್ತಿಕ ಜೀವನದ ಕೆಲ ವಿಷಯಗಳು ಕೂಡಾ ಹೊರಬರುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.