ವಿಕ್ಕಿ ಕೌಶಲ್ ಮುಖ್ಯಭೂಮಿಕೆಯ 'ಸ್ಯಾಮ್ ಬಹದ್ದೂರ್' ಸಿನಿಮಾ ಇಂದು ತೆರೆಗಪ್ಪಳಿಸಿದೆ. ಭಾರತೀಯ ಸೇನೆಯ ಮಾಜಿ ಸೇನಾ ಮುಖ್ಯಸ್ಥ ಸ್ಯಾಮ್ ಮಾಣೆಕ್ ಶಾ ಅವರ ಜೀವನಾಧಾರಿತ ಕಥೆಗೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಸರಿಸುಮಾರು 1,03,192 ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಅಂದರೆ ಮೊದಲ ದಿನದ ಶೋಗಳು 3.05 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಇದು ಆನ್ಲೈನ್ ವ್ಯವಹಾರದ ಮಾಹಿತಿ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಭಾರತೀಯ ಬಾಕ್ಸ್ ಆಫಿಸ್ನಲ್ಲಿ 'ಸ್ಯಾಮ್ ಬಹದ್ದೂರ್' ಮೊದಲ ದಿನ 6 ಕೋಟಿ ರೂ. ಗಳಿಸಬಹುದು. ಮೇಘನಾ ಗುಲ್ಜಾರ್ ನಿರ್ದೇಶನದ ಈ ಸಿನಿಮಾ 55 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದು, 50 ಕೋಟಿ ದಾಟಿದರೆ ಸಿನಿಮಾ ಯಶಸ್ವಿ ಆಗಲಿದೆ.
-
‘SAM BAHADUR’ ADVANCE BOOKINGS MUCH BETTER THAN VICKY KAUSHAL’S EARLIER FILMS… *DAY 1* AT NATIONAL CHAINS…
— taran adarsh (@taran_adarsh) December 1, 2023 " class="align-text-top noRightClick twitterSection" data="
⭐️ #SamBahadur: 51,000
⭐️#ZaraHatkeZaraBachke: 22,000
⭐️ #TheGreatIndianFamily: 1,000 pic.twitter.com/kiFlw9u5uK
">‘SAM BAHADUR’ ADVANCE BOOKINGS MUCH BETTER THAN VICKY KAUSHAL’S EARLIER FILMS… *DAY 1* AT NATIONAL CHAINS…
— taran adarsh (@taran_adarsh) December 1, 2023
⭐️ #SamBahadur: 51,000
⭐️#ZaraHatkeZaraBachke: 22,000
⭐️ #TheGreatIndianFamily: 1,000 pic.twitter.com/kiFlw9u5uK‘SAM BAHADUR’ ADVANCE BOOKINGS MUCH BETTER THAN VICKY KAUSHAL’S EARLIER FILMS… *DAY 1* AT NATIONAL CHAINS…
— taran adarsh (@taran_adarsh) December 1, 2023
⭐️ #SamBahadur: 51,000
⭐️#ZaraHatkeZaraBachke: 22,000
⭐️ #TheGreatIndianFamily: 1,000 pic.twitter.com/kiFlw9u5uK
ಥಿಯೇಟರ್ಗಳಲ್ಲಿ ಆಕ್ಯುಪೆನ್ಸಿ ರೇಟ್ ಗಮನಿಸಿದ್ರೆ, ದೆಹಲಿಯಲ್ಲಿ ಶೇ. 22, ತಮಿಳುನಾಡಿನಲ್ಲಿ ಶೇ. 20, ಅಸ್ಸೋಂ , ಕೇರಳ ಮತ್ತು ತೆಲಂಗಾಣಗಳಲ್ಲಿ ಶೇ. 16 ರಷ್ಟಿದೆ. ಇನ್ನೂ ಇಂದೇ ತೆರೆಕಂಡಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಅನಿಮಲ್ ಮೊದಲ ದಿನ ಪಂಚ ಭಾಷೆಗಳೂ ಸೇರಿ ಭಾರತ ಮತ್ತು ಜಾಗತಿಕವಾಗಿ ಒಟ್ಟು ಬರೋಬ್ಬರಿ 100 ಕೋಟಿ ರೂ. ವ್ಯವಹಾರ ನಡೆಸಲಿದೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.
- " class="align-text-top noRightClick twitterSection" data="">
ಸ್ಯಾಮ್ ಬಹದ್ದೂರ್ ಸಿನಿಮಾದ ಅಂಕಿಅಂಶಗಳು ನಿರ್ದಿಷ್ಟ ರಾಜ್ಯಗಳಲ್ಲಿ ಸಿನಿಮಾ ಮೇಲಿನ ಆಸಕ್ತಿ, ಉತ್ಸಾಹವನ್ನು ಸೂಚಿಸುತ್ತವೆ. ಸಿಕ್ಕಿಂನಲ್ಲಿ ಸಿನಿಮಾ ಮೇಲೆ ಕಿಂಚಿತ್ತೂ ಆಸಕ್ತಿ ವ್ಯಕ್ತವಾಗಿಲ್ಲ. ಆಂಧ್ರ ಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಆಕ್ಯುಪೆನ್ಸಿ ರೇಟ್ ಕೇವಲ ಶೇ. 3ರಷ್ಟಿದೆ.
ಇದನ್ನೂ ಓದಿ: 100 ಕೋಟಿಯತ್ತ ರಶ್ಮಿಕಾ ಸಿನಿಮಾ: ರಣ್ಬೀರ್ ವೃತ್ತಿಜೀವನದಲ್ಲಿ ಹೊಸ ದಾಖಲೆ ಸೃಷ್ಟಿಗೆ 'ಅನಿಮಲ್' ಸಜ್ಜು!
ಮುಂಗಡ ಟಿಕೆಟ್ ಬುಕಿಂಗ್ ಪ್ರೊಸೆಸ್ ಗಮನಿಸಿದ್ರೆ, ದೆಹಲಿಯೊಂದರಲ್ಲೇ 82.16 ಲಕ್ಷ ರೂ.ನ ವ್ಯವಹಾರ ನಡೆದಿದೆ. ಮಹಾರಾಷ್ಟ್ರದಲ್ಲಿ 74.72 ಲಕ್ಷ ರೂ. ಮತ್ತು ಕರ್ನಾಟಕದಲ್ಲಿ 36.65 ಲಕ್ಷ ರೂ., ಗುಜರಾತ್ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ 15.94 ಲಕ್ಷ ರೂ. ಮತ್ತು 17.65 ಲಕ್ಷ ರೂ.ನ ವ್ಯವಹಾರ ನಡೆದಿದೆ. ಆರ್‌ಎಸ್‌ವಿಪಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸ್ಯಾಮ್ ಬಹದ್ದೂರ್ ಚಿತ್ರವನ್ನು ರೋನಿ ಸ್ಕ್ರಿವಾಲಾ ನಿರ್ಮಿಸಿದ್ದಾರೆ. ವಿಕ್ಕಿ ಕೌಶಲ್ ಜೊತೆಗೆ ಚಿತ್ರದಲ್ಲಿ ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 3,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಯಾಮ್ ಬಹದ್ದೂರ್ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: 'ಸ್ಯಾಮ್ ಬಹದ್ದೂರ್': ಪ್ರೇಕ್ಷಕರಿಗೆ ರೋಮಾಂಚಕ ಅನುಭವ ನೀಡಿದ ದೇಶದ ಮೊದಲ ಫೀಲ್ಡ್ ಮಾರ್ಷಲ್ ಕಹಾನಿ
ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ವಿಕ್ಕಿ ಕೌಶಲ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ ಸ್ಯಾಮ್ ಬಹದ್ದೂರ್ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ನಲ್ಲಿ ಗಮನಾರ್ಹ ಸುಧಾರಣೆ ಆಗಿದೆ. ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ಶ್ಲಾಘಿಸಿದ್ದಾರೆ.