ETV Bharat / entertainment

ಸಲ್ಮಾನ್​ ಖಾನ್​​ ಈದ್‌ ಗಿಫ್ಟ್​: ಅಭಿಮಾನಿಗಳಿಗೆ ದುಬೈನಲ್ಲಿ ಸಮಯ ಮೀಸಲು - salman khan latest news

ಸಲ್ಮಾನ್ ಖಾನ್ ದುಬೈನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಮಯ ಕಳೆಯಲಿದ್ದಾರೆ.

salman khan
ಸಲ್ಮಾನ್​ ಖಾನ್
author img

By

Published : Apr 16, 2023, 5:30 PM IST

ದಬಾಂಗ್ ನಟ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರದ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಚಿತ್ರತಂಡ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಸಾಕಷ್ಟು ಬ್ಯುಸಿ ಶೆಡ್ಯೂಲ್​ ನಡುವೆ ನಟನ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಇದೆ.

ಈ ಈದ್‌ ಸಂದರ್ಭ ಸಲ್ಮಾನ್ ಖಾನ್ ದುಬೈನಲ್ಲಿ ತಮ್ಮ ಅಭಿಮಾನಿಗಳಿಗಾಗಿ ಸಮಯ ಮೀಸಲಿಡಲಿದ್ದಾರೆ. ಅಭಿಮಾನಿಗಳೊಂದಿಗೆ ಸಮಯ ಕಳೆಯಲಿದ್ದಾರೆ. ಈ ಬಗ್ಗೆ ಸ್ವತಃ ನಟ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ 'ಕಿಕ್‌' ಏರಿಸಿದ್ದಾರೆ. ಏಪ್ರಿಲ್ 24ರಂದು ದುಬೈನ ಫ್ಲೋಟ್ ಕ್ಲಬ್‌ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಪಾರ್ಟಿ ಮಾಡುವುದಾಗಿ ಸಲ್ಮಾನ್​ ತಿಳಿಸಿದ್ದಾರೆ.

ಸಲ್ಲು ಅವರ ಬಹು ನಿರೀಕ್ಷಿತ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಬಿಡುಗಡೆಗೆ ಸಿದ್ಧವಾಗಿದೆ. ಈದ್​ ಸಂದರ್ಭ (ಏಪ್ರಿಲ್ 21) ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು, ಅಭಿಮಾನಿಗಳಿಗಾಗಿ ತಮ್ಮ ಇನ್ಸ್​​ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. 'ನಾವು ಏಪ್ರಿಲ್ 24ರಂದು ದುಬೈನಲ್ಲಿ ಭೇಟಿಯಾಗೋಣ' ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ಹಂಚಿಕೊಂಡಿಎಉವ ಪೋಸ್ಟರ್​​ನಲ್ಲಿ ಲೈವ್ ಎಂದು ಬರೆದಿದ್ದು, ಸಾಕಷ್ಟು ಕುತೂಹಲ ಮೂಡಿದೆ. ಇದರೊಂದಿಗೆ ಸಾಮಾನ್ಯ ಟಿಕೆಟ್, ಭೇಟಿ, ಟೇಬಲ್ ಬುಕಿಂಗ್ ಎಂದು ಸಂಪರ್ಕ ಸಂಖ್ಯೆಗಳನ್ನೂ ಪೋಸ್ಟರ್‌ನಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ WWW.VKREVENTS.COMಗೆ ಸಂಪರ್ಕಿಸಬುದು. ಸಲ್ಮಾನ್​ ಖಾನ್​ ಇನ್ಸ್​​ಟಾಗ್ರಾಮ್ ಪೋಸ್ಟರ್​ನಲ್ಲಿ ಸಂಪೂರ್ಣ ಮಾಹಿತಿ ಇದೆ. ನೀವು ಸಲ್ಮಾನ್​ ಖಾನ್​ ಅಭಿಮಾನಿಗಳೇ?, ನೀವೂ ಭೇಟಿಯಾಗುವ ಆಲೋಚನೆಯಲ್ಲಿದ್ದೀರೇ? ಮತ್ಯಾಕೆ ತಡ ಟಿಕೆಟ್​ ಬುಕ್​ ಮಾಡಿ.

ಫರ್ಹಾದ್ ಸಾಮ್ಜಿ ಆ್ಯಕ್ಷನ್​ ಕಟ್​ ಹೇಳಿರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಕನ್ನಡತಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಶೆಹನಾಜ್ ಗಿಲ್, ರಾಘವ್, ವೆಂಕಟೇಶ್ ದಗ್ಗುಬಾಟಿ ಮತ್ತು ಭೂಮಿಕಾ ಚಾವ್ಲಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕತ್ರಿನಾ ಕೈಫ್ ಅವರೊಂದಿಗೆ ಟೈಗರ್ 3ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಶಾರುಖ್​ ಖಾನ್ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ತಿಂಗಳಲ್ಲಿ ಎಸ್​ಆರ್​ಕೆ ಮತ್ತು ಸಲ್ಲು ಅವರ ಭರ್ಜರಿ ಆ್ಯಕ್ಷನ್​ ಸೀನ್​​ ಶೂಟಿಂಗ್​ ನಡೆಯಲಿದೆ. ಇಮ್ರಾನ್​ ಹಶ್ಮಿ ಕೂಡ ಅಭಿನಯಿಸಿದ್ದು, ದೀಪಾವಳಿ ಸಂದರ್ಭ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಟೈಗರ್​ 3 ತೆರೆ ಕಾಣಲಿದೆ.

ಇದನ್ನೂ ಓದಿ: 'ಶಾಕುಂತಲಂ': ಎರಡು ದಿನದ ಸಂಪಾದನೆ ಎಷ್ಟು ಗೊತ್ತಾ?

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಪ್ರಚಾರದ ಸಲುವಾಗಿ ಸಲ್ಮಾನ್​ ಅವರು ಸೋನಿ ಎಂಟರ್​​ಟೈನ್​ಮೆಂಟ್ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಪಿಲ್​ ಶರ್ಮಾ ಶೋನಲ್ಲಿ ಭಾಗಿಯಾಗಿ ಹಲವು ಸಂಗತಿಗಳನ್ನು ಶೇರ್ ಮಾಡಿದ್ದಾರೆ. ನಿನ್ನೆ ರಾತ್ರಿ ಒಂದು ಎಪಿಸೋಡ್​ ಪ್ರಸಾರವಾಗಿದ್ದು, ಇಂದು ರಾತ್ರಿ ಮತ್ತೊಂದು ಸಂಚಿಕೆಯಲ್ಲಿ ನಟ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಜೀವನ ಕೊಟ್ಟ 'ಎರಡನೇ ತಾಯಿ'ಯನ್ನು ಭೇಟಿಯಾದ ಡಾಲಿ: ಧನಂಜಯ್​ ಭೂಮಿ ಮೇಲಿರಲು ಇವರೇ ಕಾರಣ

ಈ ಕಾರ್ಯಕ್ರಮದಲ್ಲಿ, ವಿದ್ಯಾಭ್ಯಾಸದ ಸಂದರ್ಭ ಟ್ಯಾಕ್ಸಿ ಡ್ರೈವರ್​ಗೆ ಕೊಡಲು ಹಣವಿಲ್ಲದೇ ಓಡಿ ಹೋಗಿದ್ದೆ. ಸಂಪಾದಿಸಲು ಪ್ರಾರಂಭಿಸಿದಾಗ ಬಡ್ಡಿ ಸಮೇತ ಆ ಹಣವನ್ನು ಹಿಂತಿರುಗಿಸಿದ್ದೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ಜಾನ್​ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೊದಲು ಜಾನ್​ ಎನ್ನುತ್ತಾರೆ ನಂತರ ಜೀವ ತೆಗೆಯುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದರು. ಸಲ್ಮಾನ್​ ಅವರ ಈ ಜಾನ್​ ಹೇಳಿಕೆ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.