'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಪ್ರಭಾಸ್ ಕಾಂಬೋದಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾ 'ಸಲಾರ್' ಇದೇ ಡಿಸೆಂಬರ್ 22ರಂದು ತೆರೆ ಕಾಣಲಿದೆ. ಈಗಾಗಲೇ ವಿಶ್ವದಾದ್ಯಂತ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಇಂದಿನಿಂದ ಕರ್ನಾಟಕದಲ್ಲೂ ಮುಂಗಡ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಮಾಹಿತಿ ನೀಡಿದೆ.
-
#SalaarCeaseFire 𝐊𝐚𝐫𝐧𝐚𝐭𝐚𝐤𝐚 Bookings Open From Today at 6:49 PM in Limited Screens 💥#SalaarCeaseFireOnDec22 ⚡️#Salaar #Prabhas #PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai @sriyareddy @RaviBasrur @bhuvangowda84… pic.twitter.com/Hle5rxTRxr
— Hombale Films (@hombalefilms) December 15, 2023 " class="align-text-top noRightClick twitterSection" data="
">#SalaarCeaseFire 𝐊𝐚𝐫𝐧𝐚𝐭𝐚𝐤𝐚 Bookings Open From Today at 6:49 PM in Limited Screens 💥#SalaarCeaseFireOnDec22 ⚡️#Salaar #Prabhas #PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai @sriyareddy @RaviBasrur @bhuvangowda84… pic.twitter.com/Hle5rxTRxr
— Hombale Films (@hombalefilms) December 15, 2023#SalaarCeaseFire 𝐊𝐚𝐫𝐧𝐚𝐭𝐚𝐤𝐚 Bookings Open From Today at 6:49 PM in Limited Screens 💥#SalaarCeaseFireOnDec22 ⚡️#Salaar #Prabhas #PrashanthNeel @PrithviOfficial @shrutihaasan @VKiragandur @hombalefilms #HombaleMusic @IamJagguBhai @sriyareddy @RaviBasrur @bhuvangowda84… pic.twitter.com/Hle5rxTRxr
— Hombale Films (@hombalefilms) December 15, 2023
ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ ಪಡೆದಿರುವ ‘ಸಲಾರ್ ಪಾರ್ಟ್ 1: ಸೀಸ್‍ಫೈರ್’ ಚಿತ್ರವು ಎರಡು ಗಂಟೆ 55 ನಿಮಿಷಗಳ ಅವಧಿಯನ್ನು ಹೊಂದಿದೆ. ಚಿತ್ರದಲ್ಲಿ ಬೃಹತ್ ಪ್ರಮಾಣ ಆ್ಯಕ್ಷನ್ ದೃಶ್ಯಗಳಿದ್ದು ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಈ ಸಿನಿಮಾದ ಮುಂಗಡ ಬುಕ್ಕಿಂಗ್ ಭಾರತದಲ್ಲೂ ಆರಂಭವಾಗಿದೆ. ಇಂದು ಸಂಜೆಯಿಂದ ಕರ್ನಾಟಕದಲ್ಲಿ ಮತ್ತು ಕೇರಳದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಬುಕ್ ಮೈ ಶೋನಲ್ಲಿ ಈಗಾಗಲೇ 1 ಮಿಲಿಯನ್‌ಗೂ ಹೆಚ್ಚು ಜನರು ಟಿಕೆಟ್ ಕೊಂಡುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಸಿನಿಮಾದ ಮೊದಲ ಹಾಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಹಾಡನ್ನು ಕಿನ್ನಾಲ್ ರಾಜ್ ಬರೆದಿದ್ದು, ವಿಜಯಲಕ್ಷ್ಮೀ ಮೆತ್ತಿನಹೊಳೆ ಕಂಠದಾನ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಇದೊಂದು ಭಾವನಾತ್ಮಕ ಹಾಡಾಗಿದ್ದು, ಇಬ್ಬರು ಗೆಳೆಯರ ನಡುವಿನ ಬಾಂಧವ್ಯ ಸಾರುತ್ತದೆ. ಸ್ನೇಹಿತರ ನಡುವಿನ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಹೂರಣವೇ ಈ ‘ಆಕಾಶ ಗಾಡಿಯ’ ಹಾಡಿನ ಬಹುಮುಖ್ಯ ಕಥಾವಸ್ತು. ಸದ್ಯ ಈ ಲಿರಿಕಲ್ ವಿಡಿಯೋ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ.
ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಸೇರಿದಂತೆ ಮುಂತಾದವರು ನಟಿಸಿದ್ದು, ಪ್ರಶಾಂತ್ ನೀಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ನಡಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಿಸಿದ್ದಾರೆ.
ಭಾರತೀಯ ಸಿನಿ ಲೋಕದ ಬ್ಲಾಕ್ಬಸ್ಟರ್ ಸಿನಿಮಾ 'ಕೆಜಿಎಫ್ -2' ಬಳಿಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾ ನಿರ್ದೇಶನ ಮಾಡಿದ್ದು, ಅದರಷ್ಟೇ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗಷ್ಟೇ ಸಿನಿಮಾದ ಟ್ರೇಲರ್ ಕೂಡ ರಿಲೀಸ್ ಆಗಿದ್ದು ಎಲ್ಲಾ ಭಾಷೆಗಳ ಟ್ರೇಲರ್ಗೆ ವೀಕ್ಷಕರ ಪ್ರತಿಕ್ರಿಯೆ ಕೂಡ ದೊಡ್ಡ ಮಟ್ಟದಲ್ಲೇ ಲಭಿಸಿದೆ. ಬಿಡುಗಡೆಯಾದ ಕೇವಲ 24 ಗಂಟೆಗಳೊಳಗೆ ಯೂಟ್ಯೂಬ್ನಲ್ಲಿ 116 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದೆ.
'ಕೆಜಿಎಫ್'ನಿಂದಾಗಿ ಹೆಸರುವಾಸಿಯಾಗಿರುವ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿರುವುದರಿಂದ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ತೆರೆ ಮೇಲೆ ಅಬ್ಬರಿಸಿರುವುದರಿಂದ ಈ ಪ್ರಾಜೆಕ್ಟ್ ಮೇಲಿನ ನಿರೀಕ್ಷೆ, ಉತ್ಸಾಹ, ಕುತೂಹಲ ಬೆಟ್ಟದಷ್ಟಿದೆ. ಮತ್ತೊಂದೆಡೆ, ಒಂದು ದಿನ ಮುಂಚಿತವಾಗಿ ಅಂದರೆ, ಡಿಸೆಂಬರ್ 21ರಂದು ಬಾಲಿವುಡ್ ನಟ ಶಾರುಖ್ ಖಾನ್ ಅವರ 'ಡಂಕಿ' ತೆರೆ ಕಾಣಲಿದೆ. ಈ ಎರಡು ಬಹುನಿರೀಕ್ಷೆಯ ಸಿನಿಮಾಗಳ ನಡುವೆ ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿ ನಡೆಯಲಿದೆ.
ಇದನ್ನೂ ಓದಿ: ಡಂಕಿ vs ಸಲಾರ್: ಅಡ್ವಾನ್ಸ್ ಬುಕ್ಕಿಂಗ್ನಲ್ಲಿ ಯಾವ ಸಿನಿಮಾ ಮುಂಚೂಣಿಯಲ್ಲಿದೆ ಗೊತ್ತಾ?