ಚೆನ್ನೈ (ತಮಿಳುನಾಡು): ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತಮಿಳುನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾವೇರಿ ತೀರ ಪ್ರದೇಶದಲ್ಲಿನ ಭತ್ತದ ಬೆಳೆ ಹಾನಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕಡಲೂರು ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುತ್ತಿದೆ.
ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳೆಗಳು ಭಾಗಶಃ ಮತ್ತು ಸಂಪೂರ್ಣವಾಗಿ ನೆಲಕಚ್ಚಿವೆ. ತಿರುವಾರೂರ್, ತಿರುತುರೈಪೂಂಡಿ, ಮುತ್ತುಪೆಟ್ಟೈ, ಮೈಲಾಡುತುರೈ, ವೇದಾರಣ್ಯಂನಲ್ಲಿ ಭಾರೀ ಮಳೆಯಿಂದಾಗಿ ರೈತರ ಅಂದಾಜಿನ ಪ್ರಕಾರ ಕನಿಷ್ಠ 2,000 ಎಕರೆಗಿಂತ ಹೆಚ್ಚಿನ ಬೆಳೆ ನಷ್ಟವಾಗಿದೆ.
The Deep Depression over Southwest Bay of Bengal moved north-northwestwards with a speed of 13 kmph during past 6 hours and lay centred at 0530 hours IST of today, the 27th November 2024 over the same region near latitude 8.2°N and longitude 82.4°E, about 130 km east-southeast of… pic.twitter.com/BkhlgzGoUx
— India Meteorological Department (@Indiametdept) November 27, 2024
ವಿಪರೀತ ಮಳೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ತಿರುವಾರೂರು, ಕಡಲೂರು, ನಾಗಪತ್ತಿನಂ, ಮೈಲಾಡುತುರೈ ಜಿಲ್ಲೆಗಳಲ್ಲಿ ನವೆಂಬರ್ 27ರ ವರೆಗೆ ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚೆನ್ನೈ, ಚೆಂಗಲ್ಪೆಟ್, ಅರಿಯಲೂರ್, ಕಂಚೀಪುರದಲ್ಲಿ ಒಂದು ದಿನ ಮಾತ್ರ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.
ಅಪ್ಪಳಿಸಲಿರುವ ಚಂಡಮಾರುತ: ಐಎಂಡಿ ಮತ್ತು ಪ್ರಾದೇಶಿಕ ಹವಾಮಾನ ಕೇಂದ್ರಗಳು ಬುಧವಾರ ನೀಡಿರುವ ಮುನ್ಸೂಚನೆ ಪ್ರಕಾರ, ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ನವೆಂಬರ್ 27 (ಇಂದು) ವರೆಗೆ ಚಂಡಮಾರುತ ಇರಲಿದ್ದು, ಕಡಲೂರು ಮತ್ತು ಮೈಲಾಡುತುರೈ ಜಿಲ್ಲೆಗಳಲ್ಲಿ ವರುಣನ ಆರ್ಭಟವಿದೆ. ಕಳೆದ 24 ಗಂಟೆಗಳಲ್ಲಿ ಚೆನ್ನೈನಲ್ಲಿ 60ಮಿಲಿ ಮೀಟರ್ನಷ್ಟು ಮಳೆ ಸುರಿದಿದೆ.
ಕಡಿಮೆ ಒತ್ತಡ ಪ್ರದೇಶವೂ ರಾಜ್ಯ ಸಮೀಪಿಸುತ್ತಿದ್ದು, ಸೈಕ್ಲೋನ್ ಘೋಷಣೆಗೆ ಒಂದು ಹೆಜ್ಜೆ ಬಾಕಿ ಇದೆ. ಸದ್ಯ ಚೆನ್ನೈನತ್ತ ಸೈಕ್ಲೋನ್ ಆಗಮಿಸುತ್ತಿದ್ದು, ನಿರ್ದಿಷ್ಟವಾಗಿ ಎಲ್ಲಿ ಅಪ್ಪಳಿಸಲಿದೆ ಎಂದು ಹೇಳಲು ಸಾಧ್ಯವಿಲ್ಲ. ಪುದುಚೇರಿ ಮತ್ತು ತಮಿಳುನಾಡು, ಆಂಧ್ರ ಪ್ರದೇಶ ಗಡಿಯಲ್ಲೂ ಕೂಡ ಇದು ಅಪ್ಪಳಿಸಬಹುದು. ಇದರಿಂದಾಗಿ ಮುಂದಿನ ಮೂರು ದಿನ ತಮಿಳುನಾಡಿನಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದ್ದಾರೆ.
ನಿರ್ವಹಣೆಗೆ ಸಜ್ಜು: ಮಳೆ ಮುನ್ಸೂಚನೆ ಹಿನ್ನೆಲೆ ಮಂಗಳವಾರ ಸಿಎಂ ಎಂಕೆ ಸ್ಟಾಲಿನ್, ಮಳೆ ಮುನ್ಸೂಚನೆ ಪ್ರದೇಶಗಳ ಜಿಲ್ಲಾಧಿಕಾರಗಳ ಜೊತೆ ಸಭೆ ನಡೆಸಿ, ಸಿದ್ಧತಾ ಕ್ರಮದ ಕುರಿತು ಚರ್ಚಿಸಿದ್ದಾರೆ. ಮಳೆ ಬಾಧಿತ ಪ್ರದೇಶದಲ್ಲಿ ಹೆಚ್ಚಿನ ವೈದ್ಯಕೀಯ ತಂಡ ಮತ್ತು ಪರಿಹಾರ ಕಾರ್ಯ, ಅಗತ್ಯ ಸಾಮಗ್ರಿಗಳನ್ನು ಪೂರೈಸುವಂತೆ ಮತ್ತು ರಕ್ಷಣಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ರಾಜ್ಯದಲ್ಲಿ ಈಗಾಗಲೇ ವಿಪತ್ತು ನಿರ್ವಹಣ ತಂಡ ಸಿದ್ಧವಾಗಿದ್ದು, ಜೊತೆಗೆ ಸ್ವಯಂ ಸೇವಕರು ಕೂಡ ತುರ್ತು ನಿಯಂತ್ರಣ ಕ್ರಮಗಳನ್ನು ದಿನದ 24 ಗಂಟೆ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ. (ಪಿಟಿಐ/ ಐಎಎನ್ಎಸ್)
ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರೀ ಮಳೆ ಮುನ್ಸೂಚನೆ, ಶಾಲೆಗಳಿಗೆ ರಜೆ: ಬೆಂಗಳೂರಲ್ಲೂ ಮೋಡ ಕವಿದ ವಾತಾವರಣ