ETV Bharat / state

ಮಂಗಳೂರು: ವಾಟ್ಸ್‌ಆ್ಯಪ್‌ನಲ್ಲಿ ಎಪಿಕೆ ಫೈಲ್ ಕಳುಹಿಸಿ 1.31 ಲಕ್ಷ ರೂಪಾಯಿ ವಂಚನೆ - ONLINE FRAUD

ವಾಟ್ಸ್‌ಆ್ಯಪ್‌ನಲ್ಲಿ ಬಂದ ಎಪಿಕೆ ಫೈಲ್​ ತೆರೆದು, ತನ್ನ ಬ್ಯಾಂಕ್​ ಖಾತೆಯಲ್ಲಿದ್ದ 1.31 ಲಕ್ಷ ರೂ ಕಳೆದುಕೊಂಡ ವ್ಯಕ್ತಿ ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Mangaluru Police Commissioner Office
ಮಂಗಳೂರು ಪೊಲೀಸ್ ಆಯುಕ್ತರ ಕಚೇರಿ (ETV Bharat)
author img

By ETV Bharat Karnataka Team

Published : Nov 27, 2024, 12:42 PM IST

ಮಂಗಳೂರು: ವ್ಯಕ್ತಿಯೊಬ್ಬರಿಗೆ ಸಂಚಾರ ನಿಯಮ ಉಲ್ಲಂಘನೆಯ ಎಪಿಕೆ(ಆ್ಯಂಡ್ರಾಯ್ಡ್‌ ಪ್ಯಾಕೇಜ್ ಕಿಟ್‌) ಫೈಲ್ ಕಳುಹಿಸಿ 1.31 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದ್ದು, ಮಂಗಳೂರಿನ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಂಚನೆ ಹೇಗೆ?: ನವೆಂಬರ್ 24ರಂದು ರಾತ್ರಿ 8.44 ಗಂಟೆಗೆ ವ್ಯಕ್ತಿಯೊಬ್ಬರ ವಾಟ್ಸ್‌ಆ್ಯಪ್‌ ನಂಬರ್​ಗೆ +917878422870 ನಂಬರ್​ನಿಂದ ಮೆಸೇಜ್ ಬಂದಿತ್ತು. ಈ ಮೆಸೇಜ್​ನಲ್ಲಿ VAHAN PARIVAHAN.apk ಎಂಬ ಫೈಲ್ ಬಂದಿದೆ. ಇದರಲ್ಲಿ KA 03 MA 0606 ಎಂಬ ವಾಹನ ಸಂಖ್ಯೆ ಮೇಲೆ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣ ದಾಖಲಾಗಿರುವ ಮಾಹಿತಿ ಇತ್ತು.

ವ್ಯಕ್ತಿ ಫೈಲ್ ಡೌನ್​ಲೋಡ್ ಮಾಡಿದ ಕೂಡಲೇ ಮೊಬೈಲ್​ಗೆ 16 ಒಟಿಪಿಗಳು ಬಂದಿವೆ. ಹಾಗೂ ಬಂದ ಒಟಿಪಿಗಳನ್ನು ಯಾರಿಗೂ ಶೇರ್ ಮಾಡಿರಲಿಲ್ಲ. ನಂತರ ವಿವಿಧ ಇ-ಕಾಮರ್ಸ್​ ಪ್ಲಾಟ್​ಫಾರ್ಮ್‌ಗಳಲ್ಲಿ ಇವರ ಕ್ರೆಡಿಟ್ ಕಾರ್ಡ್ ಮುಖಾಂತರ 30,400 ರೂ ಹಾಗೂ ಡೆಬಿಟ್ ಕಾರ್ಡ್ ಮುಖಾಂತರ 16,700 ಮತ್ತು 71,496 ರೂ. ವರ್ಗಾವಣೆ ಆದ ಬಗ್ಗೆ ಮೊಬೈಲ್​ಗೆ ಮೆಸೇಜ್ ಬಂದಿದೆ. ಕೂಡಲೇ ತಮ್ಮ ಮೊಬೈಲ್ ಮೂಲಕ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಅನ್ನು ಬ್ಲಾಕ್ ಮಾಡಿದ್ದಾರೆ.

ಈ ರೀತಿಯಾಗಿ ಅಪರಿಚಿತ ವ್ಯಕ್ತಿ ಆನ್​ಲೈನ್ ಮೂಲಕ ವ್ಯಕ್ತಿಯ ಆ್ಯಕ್ಸಿಸ್ ಬ್ಯಾಂಕ್ ಖಾತೆಯಿಂದ ಇ- ಕಾಮರ್ಸ್​ ಫ್ಲಾಟ್​ಮಾರ್ಮ್​ಗಳಲ್ಲಿ ವನ್​ ಪ್ಲಸ್​ ಮೊಬೈಲ್​ 39,398 ರೂ., ಮೊಟೋರೊಲಾ ಎಡ್ಜ್​ 32,098 ರೂ., ಏರ್​ಪಾಡ್​ 12,800 ರೂ. ಮತ್ತು 14,700 ರೂ ಹಾಗೂ 29,400 ರೂ. ಬೆಲೆಯ ವೋಚರ್​ಗಳು ಹಾಗೂ 3,000 ರೂ ಬೆಲೆಯ ಗಿಫ್ಟ್ ವೋಚರ್​ಗಳನ್ನು ರಾಹುಲ್ ಪಂಚಶೀಲ್ ವಿಹಾರ್ ಆದರ್ಶ್ ಹಾಸ್ಪೆಟಲ್ ಹತ್ತಿರ ದೆಹಲಿ ಪ್ರೆಸ್ ಎನ್ ಕ್ಲೇವ್ ಸಾಕೇತ್ ನವದೆಹಲಿ- 110017, ಮೊಬೈಲ್ ನಂಬರ್​ 6232866722. ನೇ ವಿಳಾಸಕ್ಕೆ ಆರ್ಡರ್ ಮಾಡಿದ್ದಾನೆ. ಈ ರೀತಿ ಒಟ್ಟು 1,31,396 ರೂ. ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡಿದ್ದಾನೆ. ವಂಚಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದಾರೆ.

ಇದನ್ನೂ ಓದಿ: ನಕಲಿ ವಸ್ತು ಹಿಂದಿರುಗಿಸಿ ಅಮೇಜಾನ್‌ಗೆ ₹69 ಲಕ್ಷ ವಂಚನೆ: ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.