ETV Bharat / state

ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳ್ಳತನ ಪ್ರಕರಣ; ಕುಖ್ಯಾತ ಚಾದರ್ ಗ್ಯಾಂಗ್ ಬಂಧನ

ಸಿಸಿಟಿವಿ ಕ್ಯಾಮರಾಗಳಿಗೆ ಬೆಡ್​ಶೀಟ್​ ಮುಚ್ಚಿ ಕಳ್ಳತನ ಮಾಡುತ್ತಿದ್ದ ಖದೀಮರ ಗ್ಯಾಂಗ್​ನ 8 ಜನ ಸದಸ್ಯರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Arrested Accused
ಬಂಧಿತ ಆರೋಪಿಗಳು (ETV Bharat)
author img

By ETV Bharat Karnataka Team

Published : 3 hours ago

ಬೆಂಗಳೂರು: ಮೊಬೈಲ್ ಅಂಗಡಿಗಳಿಗೆ ಕನ್ನ ಹಾಕುವ ಮೂಲಕ ವ್ಯಾಪಾರಿಗಳ ನಿದ್ದೆಗೆಡಿಸಿದ್ದ ಖತರ್​ನಾಕ್​ ಗ್ಯಾಂಗ್​ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕುಖ್ಯಾತ ಚಾದರ್ ಗ್ಯಾಂಗ್‌ನ 8 ಜನ ಆರೋಪಿಗಳನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಇಮ್ತಿಯಾಜ್ ಆಲಂ, ಜಾವೇದ್ ಆಲಂ, ಪವನ್ ಶಾ, ಮುನೀಲ್ ಕುಮಾರ್​, ರಿಜ್ವಾನ್ ದೇವನ್, ಸಲೀಂ ಆಲಂ, ರಾಮೇಶ್ವರ ಗಿರಿ ಹಾಗೂ ಸೂರಜ್ ಕುಮಾರ್ ಬಂಧಿತರು‌.

ಕಳ್ಳತನ ಮಾಡುತ್ತಿದ್ದುದು ಹೇಗೆ? ಬೆಡ್​ಶೀಟ್ ಹೊದ್ದು ರಾತ್ರಿ ವೇಳೆ ಸುತ್ತಾಡುತ್ತಿದ್ದ ಆರೋಪಿಗಳು, ನಸುಕಿನಜಾವ 3-4 ಗಂಟೆ ಸಮಯಕ್ಕೆ ಮೊಬೈಲ್ ಅಂಗಡಿಗಳ ಬಳಿ ಹೋಗುತ್ತಿದ್ದರು. ಆರೋಪಿಗಳಲ್ಲಿ ಕೆಲವರು ಅಂಗಡಿ ಮುಂದಿರುವ ಸಿಸಿಟಿವಿ ಕ್ಯಾಮರಾಗಳಿಗೆ ಬೆಡ್​ಶೀಟ್ ಅಡ್ಡ ಹಿಡಿದುಕೊಳ್ಳುತ್ತಿದ್ದರು. ಅದೇ ಸಂದರ್ಭದಲ್ಲಿ ಉಳಿದವರು ಅಂಗಡಿ ಶಟರ್ ಮುರಿದು ಅಂಗಡಿಯೊಳಗೆ ನುಗ್ಗುತ್ತಿದ್ದರು. ನಂತರ ಅಂಗಡಿಯೊಳಗಿರುವ ದುಬಾರಿ ಬೆಲೆಯ ಮೊಬೈಲ್ ಫೋನ್‌ಗಳನ್ನು ಕದ್ದು ಸಿಗ್ನಲ್ ಕೊಡುತ್ತಿದ್ದರು. ಪುನಃ ಸಿಸಿಟಿವಿ ಕ್ಯಾಮರಾಗಳಿಗೆ ಬೆಡ್​ಶೀಟ್ ಅಡ್ಡಲಾಗಿ ಹಿಡಿದುಕೊಂಡು ಹೊರಬರುತ್ತಿದ್ದರು. ನಂತರ ಬೆಡ್​ಶೀಟ್ ಮುಖಕ್ಕೆ ಸುತ್ತಿಕೊಂಡು ಪರಾರಿಯಾಗುತ್ತಿದ್ದರು. ನಂತರ ನಗರದಲ್ಲಿ ಕೂಲಿ ಕೆಲಸಕ್ಕಾಗಿ ಬಂದ ಕಾರ್ಮಿಕರ ಜತೆ ಸೇರಿಕೊಂಡು ಪೊಲೀಸರ ಕಣ್ತಪ್ಪಿಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲೂ ಕೈಚಳಕ ತೋರಿಸಿದ್ದ ಖದೀಮರು; ಇದೇ ರೀತಿ ಇತ್ತೀಚೆಗೆ ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ನಾಗವಾರಪಾಳ್ಯದ ಎ. ಎಂ ಸ್ಯಾಮ್ಸಂಗ್ ಶೋರೂಮಿಗೆ ನುಗ್ಗಿದ್ದ ಆರೋಪಿಗಳು 22 ಲಕ್ಷ ರೂಪಾಯಿ ಬೆಲೆ ಬಾಳುವ ಮೊಬೈಲ್ ಫೋನ್‌ಗಳನ್ನು ಕದ್ದು ಪರಾರಿಯಾಗಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡ ಬೈಯಪ್ಪನಹಳ್ಳಿ ಠಾಣೆ ಪೊಲೀಸರು, ಬೊಮ್ಮನಹಳ್ಳಿ ಬಳಿ ಮನೆಯೊಂದರಲ್ಲಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಕದ್ದ ಮೊಬೈಲ್​ಗಳನ್ನು ನೇಪಾಳದಲ್ಲಿ ಮಾರುತ್ತಿದ್ದ ಗ್ಯಾಂಗ್​; ಆರೋಪಿಗಳು ತಾವು ಕದ್ದ ಮೊಬೈಲ್ ಫೋನ್‌ಗಳನ್ನು ನೇಪಾಳಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದುದು ವಿಚಾರಣೆ ವೇಳೆ ಬಯಲಾಗಿದೆ. ಆರೋಪಿಗಳು ಉಡುಪಿ, ಉತ್ತರ ಕನ್ನಡದಲ್ಲಿ ಕಳ್ಳತನ ಮಾಡಿದ್ದರು. ಬೆಂಗಳೂರಿನಲ್ಲಿ ಕಳ್ಳತನ ಮಾಡಿದ್ದ ಮೊಬೈಲ್ ಫೋನ್‌ಗಳನ್ನು ಆರೋಪಿಯೋರ್ವ ಬಿಹಾರಕ್ಕೆ ಕೊಂಡೊಯ್ದಿದ್ದ. ಆತನನ್ನ ಸಹ ಬಂಧಿಸಲಾಗಿದ್ದು, ಸಾಕಷ್ಟು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ. ದೇವರಾಜ್ ತಿಳಿಸಿದರು.

ಇದನ್ನೂ ಓದಿ: 148 ಪ್ರಕರಣಗಳಲ್ಲಿ ಬೇಕಾಗಿದ್ದ ಅಂತಾರಾಜ್ಯ ಕಳ್ಳ ಪಂಜಾಬ್​ನಲ್ಲಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.