ETV Bharat / entertainment

ಮುಂದಿನ ಚಿತ್ರ RC15ಕ್ಕೆ ಆರ್​ಆರ್​ಆರ್​ ಸ್ಟಾರ್​ ಭರ್ಜರಿ ಸಿದ್ಧತೆ - ರಾಮ್ ಚರಣ್ ಆರ್​ಸಿ 15

ಟಾಲಿವುಡ್​ ನಟ ರಾಮ್​​​​ ಚರಣ್ ತಮ್ಮ ಮುಂದಿನ RC15 ಚಿತ್ರಕ್ಕೆ ​ಭರ್ಜರಿ ಸಿದ್ಧತೆ ನಡೆಸಿದ್ದಾರೆ.

RRR star ram charan is ready for next movie
ಮುಂದಿನ ಸಿನಿಮಾಗೆ ಆರ್​ಆರ್​ಆರ್​ ಸ್ಟಾರ್​ ಭರ್ಜರಿ ಸಿದ್ಧತೆ
author img

By

Published : Nov 17, 2022, 2:17 PM IST

ಸೌತ್ ಸಿನಿಮಾ ಇಂಡಸ್ಟ್ರಿಯ 'ಆರ್‌ಆರ್‌ಆರ್' ಸೂಪರ್​ ಹಿಟ್ ಆಗಿ 1,200 ಕೋಟಿ ಕಲೆಕ್ಷನ್​ ಮಾಡೋದರಲ್ಲಿ ಯಶಸ್ವಿಯಾಯಿತು. 550 ಕೋಟಿ ಬಜೆಟ್​ನ ಈ ಚಿತ್ರದ ಮೂಲಕ ನಿರ್ದೇಶಕ ರಾಜಮೌಳಿ, ನಟ ಜೂನಿಯರ್​ ಎನ್​ಟಿಆರ್​, ನಟ ರಾಮ್​ ಚರಣ್​​ ಅವರ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಇದೀಗ ಅವರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ.

'RRR' ಚಿತ್ರದಲ್ಲಿ ರಾಮ್ ಚರಣ್ ಅವರ ಅಭಿನಯ ಅತ್ಯದ್ಭುತ. ಅವರ ಪ್ರತಿಯೊಂದು ದೃಶ್ಯಗಳು ಮೈನವಿರೇಳಿಸುವಂತಿತ್ತು. ರಾಮ್ ಚರಣ್ ಜೊತೆಗೆ ದಕ್ಷಿಣದ ಮತ್ತೊಬ್ಬ ಸೂಪರ್‌ಸ್ಟಾರ್ ಜೂನಿಯರ್ ಎನ್‌ಟಿಆರ್ ಕೂಡ ಪ್ರಮುಖ ಪಾತ್ರ ನಿರ್ವಹಿಸಿ ಯಶಸ್ವಿಯಾದರು. ಅಪಾರ ಯಶಸ್ಸಿನ ನಂತರ ಸೌತ್ ಸೂಪರ್‌ಸ್ಟಾರ್ ರಾಮ್ ಚರಣ್ ತಮ್ಮ ಮುಂದಿನ ಪ್ರಾಜೆಕ್ಟ್‌ಗೆ ಸಜ್ಜಾಗಿದ್ದಾರೆ.

ಈ ನಿಟ್ಟಿನಲ್ಲಿ 'ಮಗಧೀರ' ನಟ ರಾಮ್ ಚರಣ್ ತಮ್ಮ ಮುಂದಿನ ಸಿನಿಮಾಗೆ ತಯಾರಿ ನಡೆಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂದಿನ ಶೆಡ್ಯೂಲ್​ಗೆ ಸಿದ್ಧ ಎನ್ನುವ ಕ್ಯಾಪ್ಷನ್​ ಕೂಡ ನೀಡಿದ್ದಾರೆ. ತರಬೇತುದಾರರ ಸಹಾಯದಿಂದ ರಾಮ್ ಚರಣ್ ವೇಟ್​​​​ ಲಿಫ್ಟಿಂಗ್ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ 2 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಇದನ್ನು ಲೈಕ್ ಮಾಡಿದ್ದಾರೆ.

ಇದನ್ನೂ ಓದಿ: ಈ ಕ್ರಿಕೆಟ್‌ ಆಟಗಾರ್ತಿಗೆ ಅನುಷ್ಕಾ ಶರ್ಮಾ ಅಂದ್ರೆ ಅಚ್ಚುಮೆಚ್ಚಂತೆ

ರಾಮ್ ಚರಣ್ ಅವರ ಮುಂದಿನ ಚಿತ್ರ RC15 ರಾಜಕೀಯ ಆ್ಯಕ್ಷನ್ ಥ್ರಿಲ್ಲರ್ ಚಲನಚಿತ್ರ. ನಿರ್ದೇಶಕ ಎಸ್​ ಶಂಕರ್​ ಅವರೇ ಸ್ಕ್ರೀನ್​ ಪ್ಲೇ ಬರೆದು ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಅಡಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಾಣದ ಈ ಚಿತ್ರದಲ್ಲಿ ರಾಮ್ ಚರಣ್ ಜೊತೆ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.