ETV Bharat / entertainment

ನಟ​ ಯಶ್​ ಮನೆಗೆ ಬ್ಲ್ಯಾಕ್​ ಬ್ಯೂಟಿ ಎಂಟ್ರಿ: ರೇಂಜ್​ ರೋವರ್ ಕಾರ್‌ ಬೆಲೆ ಎಷ್ಟು ಗೊತ್ತಾ?

author img

By

Published : Jun 15, 2023, 7:26 PM IST

Updated : Jun 15, 2023, 8:07 PM IST

ಯಶ್​ ದಂಪತಿ 5 ಕೋಟಿ ಬೆಲೆ ಬಾಳುವ ಐಷಾರಾಮಿ ರೇಂಜ್​ ರೋವರ್​ ಕಾರ್ ಖರೀದಿಸಿದ್ದಾರೆ.

rocking
ರಾಕಿಂಗ್​ ಸ್ಟಾರ್​ ಯಶ್

ಐಷಾರಾಮಿ ರೇಂಜ್​ ರೋವರ್ ಕಾರು ಖರೀದಿಸಿದ ರಾಕಿಂಗ್​ ಸ್ಟಾರ್​ ಯಶ್​

ನಟ ರಾಕಿಂಗ್​ ಸ್ಟಾರ್​ ಯಶ್​ ಕೆಜಿಎಫ್​ 1 ಮತ್ತು ಕೆಜಿಎಫ್​ 2 ಬಳಿಕ ಸ್ಯಾಂಡಲ್​ವುಡ್​ಗೆ ಮಾತ್ರ ಸೀಮಿತ ಆಗಿಲ್ಲ. ಇಡೀ ಭಾರತೀಯ ಚಿತ್ರರಂಗದಲ್ಲೇ ಡಿಮ್ಯಾಂಡ್​ ಹೆಚ್ಚಿಸಿಕೊಂಡಿದ್ದಾರೆ. ಇವರ​ ಅಭಿನಯದ ಈ ಸಿನಿಮಾಗಳು ವರ್ಷ ಪೂರೈಸಿದ್ರೂ 'ರಾಕಿ ಭಾಯ್'​ ಕ್ರೇಜ್​ ಮಾತ್ರ ಕಡಿಮೆ ಆಗಿಲ್ಲ. ಸದ್ಯ ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ರಾಯಭಾರಿಯಾಗಿರುವ ಯಶ್ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ತಕ್ಕಂತೆ ಅವರ ಲೈಫ್​ಸ್ಟೈಲ್​ ಕೂಡ ಬದಲಾಗಿದೆ.

ಇದೀಗ ಯಶ್​ ಮನೆಗೆ ಕೋಟ್ಯಂತರ ರೂ ಬೆಲೆಬಾಳುವ ಐಷಾರಾಮಿ ಕಾರಿನ ಆಗಮನವಾಗಿದೆ. ಅತ್ಯಾಧುನಿಕ ಫೀಚರ್​ ಹೊಂದಿರುವ ಬ್ಲ್ಯಾಕ್​ ಬ್ಯೂಟಿ ರೇಂಜ್​ ರೋವರ್​ ಕಾರನ್ನು ರಾಕಿಂಗ್​ ಸ್ಟಾರ್ ಖರೀದಿಸಿದ್ದಾರೆ. ಕಪ್ಪು ಬಣ್ಣದ ಕಾರ್‌ನಲ್ಲಿ ಯಶ್, ಪತ್ನಿ ರಾಧಿಕಾ ಪಂಡಿತ್ ಜೊತೆ ಗಾಲ್ಫ್ ರಸ್ತೆಯಲ್ಲಿರುವ ತಮ್ಮ ಅಪಾರ್ಟ್​ಮೆಂಟ್‌ಗೆ ಓಡಿಸಿಕೊಂಡು ಬಂದಿದ್ದಾರೆ. ಯಶ್​ ಮಕ್ಕಳಾದ ಯಥರ್ವ್​ ಮತ್ತು ಐರಾ ಕೂಡ ಜೊತೆಗಿದ್ದರು. ನಾಲ್ವರು ಕೂಡ ತಮ್ಮ ಹೊಸ ಕಾರ್‌ನ ಮುಂಭಾಗದಲ್ಲಿ ನಿಂತು ಕ್ಯಾಮರಾಗೆ ಪೋಸ್​​​ ನೀಡಿದ್ದಾರೆ.

ಅಂದಹಾಗೆ, ರಾಕಿ ಭಾಯ್​ ಮನೆಗೆ ಬಂದಿರುವ ಈ ಕಪ್ಪು ಸುಂದರಿಯ ಬೆಲೆ ಬರೋಬ್ಬರಿ 5 ಕೋಟಿ ರೂಪಾಯಿ ಅಂತ ಯಶ್ ಆಪ್ತರು ಮಾಹಿತಿ ನೀಡಿದ್ದಾರೆ. ಅನೇಕ ಐಷಾರಾಮಿ ಸೌಲಭ್ಯಗಳನ್ನು ಹೊಂದಿರುವ ಈ ಕಾರು ಸೇಫ್ಟಿಗೂ ಅಷ್ಟೇ ಮಹತ್ವ ಹೊಂದಿದೆಯಂತೆ. ಹೊಸ ಕಾರು ಖರೀದಿಸಿರುವ ಯಶ್​ಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ: Adipurush ಬಿಡುಗಡೆಗೆ ಕ್ಷಣಗಣನೆ: ಮುಂಗಡ ಬುಕ್ಕಿಂಗ್​ನಲ್ಲಿ ಕೆಜಿಎಫ್​, ಪಠಾಣ್​ ದಾಖಲೆ ಮುರಿಯಲಿದೆಯಾ ಆದಿಪುರುಷ್?

ಯಶ್‌ ಸಿನಿಮಾ ವಿಚಾರ: ಇನ್ನು ಯಶ್​ ತಮ್ಮ 19ನೇಯ ಸಿನಿಮಾವನ್ನು ಯಾವಾಗ ಅನೌನ್ಸ್​ ಮಾಡ್ತಾರೆ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ. ಕೆಜಿಎಫ್​ ಚಾಪ್ಟರ್​ 2 ಬಳಿಕ ಅವರು ಬಿಗ್​ ಬ್ರೇಕ್​ ಪಡೆದುಕೊಂಡಿದ್ದಾರೆ. ಸೂಕ್ತ ತಯಾರಿಯೊಂದಿಗೆ ಹೊಸ ಸಿನಿಮಾಗೆ ಅವರು ಚಾಲನೆ ನೀಡಲಿದ್ದಾರೆ. ಹೀಗಾಗಿಯೇ ಹೊಸ ಚಿತ್ರದ ಅನೌನ್ಸ್​ ಮಾಡಲು ಯಶ್​ ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಾಂಧಿನಗರದ ಮಂದಿ ಹೇಳುತ್ತಿದ್ದಾರೆ.

ಈ ಮಧ್ಯೆ ನಟನಿಗೆ ಬಾಲಿವುಡ್​ನಿಂದ ಆಫರ್‌ಗಳು ಬಂದಿದ್ದವು. ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ನಿತೇಶ್​ ತಿವಾರಿ ಅವರ ಮುಂದಿನ ರಾಮಾಯಣ ಆಧಾರಿತ ಚಿತ್ರದಲ್ಲಿ ಯಶ್​ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ನಟ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ರಾಮ ಸೀತೆ ಪಾತ್ರದಲ್ಲಿ ಮತ್ತು ಯಶ್​ ರಾವಣನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈ ಆಫರ್​ ಅನ್ನು ಯಶ್​ ರಿಜೆಕ್ಟ್​ ಮಾಡಿದ್ದಾರೆ. ಅಭಿಮಾನಿಗಳು ತಮ್ಮನ್ನು ನೆಗೆಟಿವ್​ ಪಾತ್ರದಲ್ಲಿ ನೋಡಲು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕಾಗಿ ನಟ ಈ ಅವಕಾಶವನ್ನು ಕೈ ಬಿಟ್ಟಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ: Daredevil Mustafa: 'ಡೇರ್ ಡೆವಿಲ್ ಮುಸ್ತಾಫಾ' ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿದ ರಾಜ್ಯ ಸರ್ಕಾರ

Last Updated : Jun 15, 2023, 8:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.