ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ಲವ್ ಬರ್ಡ್ಸ್ ರಿಚಾ ಚಡ್ಡಾ ಮತ್ತು ಅಲಿ ಫಜಲ್ ಅಂತು - ಇಂತೂ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇಷ್ಟು ದಿನಗಳ ಕಾಲ ಡೇಟಿಂಗ್ನಲ್ಲಿದ್ದ ಈ ಜೋಡಿ ಅಕ್ಟೋಬರ್‌ನಲ್ಲಿ ಹಸೆಮಣೆ ಏರಲಿದೆ. ಹೀಗಂತ ಸ್ವತಃ ಅವರೇ ಖಚಿತಪಡಿಸಿದ್ದಾರೆ.
2020 ರಲ್ಲಿಯೇ ಮದುವೆಯಾಗಲು ತಯಾರಿ ನಡೆಸಿದ್ದ ಈ ಜೋಡಿ ಕೋವಿಡ್ ನಿರ್ಬಂಧ ಮತ್ತು ಲಾಕ್‌ಡೌನ್ ಕಾರಣಗಳಿಂದ ಎರಡು ಬಾರಿ ಮುಂದೂಡಲ್ಪಟ್ಟಿದ್ದರು. ಸದ್ಯ ತಮ್ಮ ಮದುವೆ ಬಗ್ಗೆ ಟ್ವಿಟರ್ನಲ್ಲಿ ಫೋಟೋಗಳೊಂದಿಗೆ ಖಚಿತಪಡಿಸಿರುವ ಲವ್ ಬರ್ಡ್ಸ್, ಹೊಸ ಜೀವನ ಲೋಡ್ ಆಗುತ್ತಿದೆ. ಅಕ್ಟೋಬರ್‌ಗಾಗಿ ಕಾಯಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ. ರಿಚಾ ಅವರ ಈ ಪೋಸ್ಟ್ ಅನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಕಾಮೆಂಟ್ ವಿಭಾಗದಲ್ಲಿ ಜೋಡಿಯನ್ನು ಅಭಿನಂದಿಸಲು ಆರಂಭಿಸಿದ್ದಾರೆ.
![Richa Chadha confirms wedding with Ali Fazal in sweetest way possible](https://etvbharatimages.akamaized.net/etvbharat/prod-images/16388444_840_16388444_1663320010992.png)
ನಿಮ್ಮ ಮದುವೆ ಸುದ್ದಿ ಕೇಳಿ ಸಂತೋಷವಾಯಿತು. ನಿಮ್ಮಿಬ್ಬರ ಪ್ರೀತಿ ಮೆಚ್ಚುವಂತಹದ್ದು. ಸಿಹಿ ಸುದ್ದಿ ನೀಡಿದ ನಿಮಗೆ ನನ್ನ ಶುಭಹಾರೈಗಳು ಎಂದು ಟ್ಟಿಟರ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮುಬಾರಕ್ ಹೋ... ನಿಮ್ಮಿಬ್ಬರನ್ನು ವರ ಮತ್ತು ವಧುವಾಗಿ ನೋಡಲು ಕಾಯಲು ನಮಗೂ ಸಾಧ್ಯವಿಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ.
-
Can't wait for October... 🥰 pic.twitter.com/56jADWb9LU
— RichaChadha (@RichaChadha) September 15, 2022 " class="align-text-top noRightClick twitterSection" data="
">Can't wait for October... 🥰 pic.twitter.com/56jADWb9LU
— RichaChadha (@RichaChadha) September 15, 2022Can't wait for October... 🥰 pic.twitter.com/56jADWb9LU
— RichaChadha (@RichaChadha) September 15, 2022
ಈ ಜೋಡಿ ದೆಹಲಿ ಅಥವಾ ಮುಂಬೈನಲ್ಲಿ ವಿವಾಹದ ಆಚರಣೆ ಮತ್ತು ಕಾರ್ಯಕ್ರಮಗಳನ್ನು ಮಾಡುವ ನಿರೀಕ್ಷೆ ಹೊಂದಿದ್ದಾರೆ. ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿರುವ ಇವರಿಬ್ಬರು ಮೂಲತಃ 2020ರ ಏಪ್ರಿಲ್‌ನಲ್ಲಿ ವಿವಾಹವಾಗಬೇಕಿತ್ತು. ಆದರೆ, ಕೋವಿಡ್ ನಿರ್ಬಂಧಗಳ ಕಾರಣದಿಂದಾಗಿ ಮದುವೆಯನ್ನು ಎರಡು ಬಾರಿ ಮುಂದೂಡಿದ್ದರು.
ರಿಚಾ ಚಡ್ಡಾ ಮತ್ತು ಅಲಿ ಫಜಲ್ ಮೊದಲ ಬಾರಿಗೆ 2012 ರಲ್ಲಿ ಫುಕ್ರೆ ಎಂಬ ಹಾಸ್ಯದ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಭೇಟಿಯಾಗಿದ್ದರು. ಸದ್ಯ ಅದರ ಮುಂದುವರೆದ ಭಾಗ ಚಿತ್ರೀಕರಣವೂ ನಡೆದಿದೆ. ಶೀಘ್ರದಲ್ಲೇ ಇಬ್ಬರು ಪರದೆ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಗಾಯಕ ಪವನ್‌ದೀಪ್ ರಾಜನ್ ಡೆಹ್ರಾಡೂನ್ ಭೇಟಿ.. ಸೆಲ್ಫಿಗಾಗಿ ಮುತ್ತಿಕೊಂಡ ರೆಸ್ಟೋರೆಂಟ್ ಸಿಬ್ಬಂದಿ