ETV Bharat / entertainment

VD12ನಿಂದ ಹೊರಬಂದ ಶ್ರೀಲೀಲಾ: ವಿಜಯ್​ ದೇವರಕೊಂಡಗೆ ಮತ್ತೆ ಜೋಡಿಯಾದ ರಶ್ಮಿಕಾ ಮಂದಣ್ಣ?! - ಈಟಿವಿ ಭಾರತ ಕನ್ನಡ

ವಿಜಯ್​ ದೇವರಕೊಂಡ ನಟನೆಯ ​VD12 ಚಿತ್ರದಿಂದ ಶ್ರೀಲೀಲಾ ಹೊರಬಂದಿದ್ದಾರೆ. ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ನಾಯಕಿಯ ಸ್ಥಾನ ತುಂಬಲಿದ್ದಾರೆ ಎನ್ನಲಾಗಿದೆ.

VD12: Rashmika Mandanna replaces Sreeleela in Vijay Deverakonda's next with Gowtam Tinnanuri?
VD12ನಿಂದ ಹೊರಬಂದ ಶ್ರೀಲೀಲಾ: ವಿಜಯ್​ ದೇವರಕೊಂಡಗೆ ಮತ್ತೆ ರಶ್ಮಿಕಾ ಮಂದಣ್ಣ ಜೋಡಿ?!
author img

By ETV Bharat Karnataka Team

Published : Sep 26, 2023, 9:05 PM IST

'ಪೆಳ್ಳಿ ಸಂದಡಿ' ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿಕೊಟ್ಟ ಕನ್ನಡತಿ ಶ್ರೀಲೀಲಾ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ರೇಕ್​ ಪಡೆಯದೇ ನಿರಂತರವಾಗಿ ಶೂಟಿಂಗ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯುವ ನಾಯಕರಿಂದ ಹಿಡಿದು ಟಾಪ್​ ಹೀರೋಗಳು ಸೇರಿದಂತೆ ಎಲ್ಲರೊಂದಿಗೂ ಸಿನಿಮಾ ಮಾಡುತ್ತಿದ್ದಾರೆ. ರಾಮ್​ ಪೋತಿನೇನಿ 'ಸ್ಕಂದ', ಬಾಲಯ್ಯ 'ಭಗವಂತ ಕೇಸರಿ', ನಿತಿನ್​ 'ಎಕ್ಸ್​​ಟ್ರಾರ್ಡಿನರಿ ಮ್ಯಾನ್​', ವೈಷ್ಣವ್​ ತೇಜ್ 'ಆದಿಕೇಶವ', ಪವನ್​ ಕಲ್ಯಾಣ್​ 'ಉಸ್ತಾದ್ ಭಗತ್ ಸಿಂಗ್', ಮಹೇಶ್​ ಬಾಬು 'ಗುಂಟೂರು ಖಾರಂ' ಸೇರಿದಂತೆ ಶ್ರೀಲೀಲಾ ನಟಿಸಿರುವ ಅನೇಕ ಚಿತ್ರಗಳು ತೆರೆ ಕಾಣಲು ಸಜ್ಜಾಗಿವೆ.

ಇದರ ಜೊತೆಗೆ ವಿಜಯ್​ ದೇವರಕೊಂಡ ನಟನೆಯ ​VD12 ಚಿತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರೆ ಎಂದು ಅಧಿಕೃತ ಘೋಷಣೆ ಕೂಡ ಆಗಿತ್ತು. ಈ ಸಿನಿಮಾಗೆ ಸಂಬಂಧಿಸಿದ ಪೂಜಾ ಕಾರ್ಯಕ್ರಮದಲ್ಲಿ ಶ್ರೀಲೀಲಾ ಕೂಡ ಪಾಲ್ಗೊಂಡಿದ್ದರು. ಆದರೆ ಇದೀಗ ಈ ಚಿತ್ರದಿಂದ ಶ್ರೀಲೀಲಾ ಹೊರಬಂದಿದ್ದಾರೆ. ಕಾಲ್​ಶೀಟ್​ನಲ್ಲಿ ಡೇಟ್​ ಅಡ್ಜೆಸ್ಟ್​ ಆಗದ ಕಾರಣ ಶ್ರೀಲೀಲಾ ಅವರು ಈ ಅವಕಾಶವನ್ನು ಕೈ ಬಿಟ್ಟಿದ್ದಾರೆ ಅನ್ನೋದು ಲೇಟೆಸ್ಟ್​ ಮಾಹಿತಿ. ಇದರ ಜೊತೆಗೆ ಶ್ರೀಲೀಲಾ ಸ್ಥಾನವನ್ನು ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ತುಂಬಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂ ಓದಿ: 'ಗೀತಾಂಜಲಿ'ಯಾದ ನಟಿ ರಶ್ಮಿಕಾ ಮಂದಣ್ಣ: 'ಅನಿಮಲ್'​ ಪೋಸ್ಟರ್ ಅನಾವರಣ - ಗೃಹಿಣಿ ನೋಟದಲ್ಲಿ ನ್ಯಾಶನಲ್​ ಕ್ರಶ್

ಆದರೆ ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆಗಳು ಹೊರಬಿದ್ದಿಲ್ಲ. ಅಂತೂ ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಮೂರನೇ ಬಾರಿಯ ತಮ್ಮ ನೆಚ್ಚಿನ ಜೋಡಿಯನ್ನು ತೆರೆಯ ಮೇಲೆ ನೋಡಬಹುದು ಎಂದು ಸಂಭ್ರಮಿಸುತ್ತಿದ್ದಾರೆ. ಇದಕ್ಕೂ ಮುನ್ನ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 'ಗೀತ ಗೋವಿಂದಂ' ಮತ್ತು 'ಡಿಯರ್​ ಕಾಮ್ರೇಡ್'​ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು. ಆನ್​ಸ್ಕ್ರೀನ್​ನಲ್ಲಿ ಬ್ಯೂಟಿಫುಲ್​ ಜೋಡಿಯಾಗಿ ಗುರುತಿಸಿಕೊಂಡಿರುವ ತಾರೆಯರು ಆಫ್​ಸ್ಕ್ರೀನ್​ನಲ್ಲೂ ಉತ್ತಮ ಸ್ನೇಹಿತರಾಗಿ ಮುಂದುವರೆದಿದ್ದಾರೆ. ಜೊತೆಗೆ ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಇವೆ.

'ಖುಷಿ'ಯಲ್ಲಿ ವಿಜಯ್​ ದೇವರಕೊಂಡ: ಸೌತ್ ಸಿನಿಮಾ ಇಂಡಸ್ಟ್ರಿಯ​ ಜನಪ್ರಿಯ ನಟರಾದ ವಿಜಯ್​ ದೇವರಕೊಂಡ ಮತ್ತು ಸಮಂತಾ ರುತು ಪ್ರಭು ಅಭಿನಯದ 'ಖುಷಿ' ಸಿನಿಮಾ ಸೆಪ್ಟೆಂಬರ್ 1ರಂದು ತೆರೆಕಂಡಿತ್ತು. ಚಿತ್ರ ಗೆದ್ದ ಖುಷಿಯಲ್ಲಿ ಚಿತ್ರತಂಡವಿದೆ. ಇದನ್ನು ಮೈತ್ರಿ ಮೂವೀ ಮೇಕರ್ಸ್​ ಬ್ಯಾನರ್​ ಅಡಿಯಲ್ಲಿ ಶಿವ ನಿರ್ವಾಣ ಬರೆದು ನಿರ್ದೇಶಿಸಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಮಹಾನಟಿ'ಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಸಮಂತಾ ಮತ್ತು ವಿಜಯ್​ ಜೋಡಿ ಖುಷಿ ಚಿತ್ರದಲ್ಲಿ ಎರಡನೇ ಬಾರಿ ತೆರೆಹಂಚಿಕೊಂಡಿದ್ದು, ಪ್ರೇಕ್ಷಕರನ್ನು ತಲುಪುವಲ್ಲಿ ಯಶಸ್ವಿ ಆಗಿದ್ದಾರೆ. ಮಜಿಲಿ ನಂತರ ಶಿವ ನಿರ್ವಾಣ ಜೊತೆ ಸಮಂತಾ ಎರಡನೇ ಬಾರಿಗೆ ಕೆಲಸ ಮಾಡಿದ್ದಾರೆ.

ಇನ್ನು ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅನಿಮಲ್ ಮತ್ತು ಪುಷ್ಪ 2 ಹೊರತುಪಡಿಸಿ ಪ್ಯಾನ್​ ಇಂಡಿಯಾ ಪ್ರಾಜೆಕ್ಟ್ ಒಂದನ್ನು ಒಪ್ಪಿಕೊಂಡಿದ್ದಾರೆ. ತಾತ್ಕಾಲಿಕವಾಗಿ D51 ಎಂದು ಹೆಸರಿಸಲಾಗಿದೆ. ಧನುಷ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಅಲ್ಲದೇ ರೈನ್‌ಬೋ ಸಿನಿಮಾದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ತಮಿಳು ಮತ್ತು ತೆಲುಗು ದ್ವಿಭಾಷಾ ಚಿತ್ರ. ಶಂತರುಬನ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ದೇವ್ ಮೋಹನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಗೆಲುವಿನ 'ಖುಷಿ' ಹಂಚಿದ ವಿಜಯ್​ ದೇವರಕೊಂಡ; 100 ಕುಟುಂಬಗಳಿಗೆ ತಲಾ 1 ಲಕ್ಷ ರೂಪಾಯಿ ಹಂಚಿಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.