ETV Bharat / entertainment

ಆಸ್ಕರ್​ ಸಮಾರಂಭಕ್ಕೆ ಸಾಕ್ಷಿಯಾಗಲು 1.44 ಕೋಟಿ ರೂ. ಖರ್ಚು ಮಾಡಿದ ನಿರ್ದೇಶಕ ರಾಜಮೌಳಿ! - ಆರ್​ಆರ್​ಆರ್​

ಐತಿಹಾಸಿಕ ಕ್ಷಣವನ್ನು ಲೈವ್ ಆಗಿ ವೀಕ್ಷಿಸಲು ನಿರ್ದೇಶಕ ರಾಜಮೌಳಿ ಒಟ್ಟು 1.44 ಕೋಟಿ ರೂ. ಖರ್ಚು ಮಾಡಿದ್ದಾರೆ.

Rajamouli paid crores to attend Oscars with family
ಆಸ್ಕರ್​ ಸಮಾರಂಭಕ್ಕೆ ಭಾಗಿಯಾಗಲು ಕೋಟಿ ಖರ್ಚು ಮಾಡಿದ ನಿರ್ದೇಶಕ ರಾಜಮೌಳಿ
author img

By

Published : Mar 19, 2023, 3:05 PM IST

ಇತ್ತೀಚೆಗಷ್ಟೇ ವಿಶ್ವ ಪ್ರತಿಷ್ಠಿತ ಆಸ್ಕರ್ 2023 ಸಮಾರಂಭ ಮುಗಿಸಿ ವಿಜೇತರು ತಾಯ್ನಾಡಿಗೆ ಮರಳಿದ್ದಾರೆ. ಆರ್‌ಆರ್‌ಆರ್ ಖ್ಯಾತಿಯ ನಿರ್ದೇಶಕ ರಾಜಮೌಳಿ ಅವರು 95ನೇ ಆಸ್ಕರ್ ಸಮಾರಂಭದಲ್ಲಿ ಭಾಗವಹಿಸಲು ತಮಗೆ ಮತ್ತು ಪತ್ನಿ ರಮಾ, ಪುತ್ರ ಎಸ್‌ಎಸ್ ಕಾರ್ತಿಕೇಯ, ನಾಯಕ ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಮತ್ತು ರಾಮ್​​ಚರಣ್​ ಪತ್ನಿ ಉಪಾಸನಾ ಕಾಮಿನೇನಿ ಅವರಿಗೆ ಪ್ರವೇಶ ಟಿಕೆಟ್ ಪಡೆಯಲು ಭಾರಿ ಮೊತ್ತವನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಆಸ್ಕರ್ ನಾಮನಿರ್ದೇಶಿತರು ಮತ್ತು ಅವರ ಕುಟುಂಬ ಸದಸ್ಯರಿಗೆ ಮಾತ್ರ ಆಸನಗಳನ್ನು ಹಂಚಿಕೆ ಮಾಡುವ ಅಕಾಡೆಮಿಯ ನಿಯಮವನ್ನು ಅನುಸರಿಸಿ ನಿರ್ದೇಶಕ ರಾಜಮೌಳಿ ಅವರು ಟಿಕೆಟ್ ಖರೀದಿಸಬೇಕಾಯಿತು. ಆಸ್ಕರ್​ ನಾಮನಿರ್ದೇಶಿತರಾದ ನಾಟು ನಾಟು ಹಾಡಿನ ಸಾಹಿತಿ ಚಂದ್ರಬೋಸ್ ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಸಂಗೀತ ಸಂಯೋಜಕ ಕೀರವಾಣಿ ಮತ್ತು ಅವರ ಪತ್ನಿಗೆ ಉಚಿತ ಪಾಸ್ ನೀಡಲಾಗಿದೆ.

ಅಕಾಡೆಮಿ ನಿಯಮದ ಪ್ರಕಾರ ಬಹುಮಾನವನ್ನು ಸ್ವೀಕರಿಸುವವರಿಗೆ ಮತ್ತು ಅವರ ಕುಟುಂಬದ ಓರ್ವ ಸದಸ್ಯರಿಗೆ ಮಾತ್ರ ಉಚಿತ ಪಾಸ್ ನೀಡಲಾಗುತ್ತದೆ. ಉಳಿದಂತೆ ಸಮಾರಂಭದ ನೇರಪ್ರಸಾರ ವೀಕ್ಷಿಸಲು ಎಲ್ಲರೂ ಟಿಕೆಟ್ ಖರೀದಿಸಬೇಕು. ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಆಸ್ಕರ್ 2023ರ ಸಮಾರಂಭದಲ್ಲಿ ಭಾಗವಹಿಸಲು ಒಬ್ಬ ವ್ಯಕ್ತಿಗೆ ಸುಮಾರು 20.6 ಲಕ್ಷ ರೂ. ವೆಚ್ಚದಲ್ಲಿ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ತಮಗಾಗಿ ಮತ್ತು ತಂಡದ ಪ್ರಮುಖ ಸದಸ್ಯರಿಗೆ ಪಾಸ್‌ಗಳನ್ನು ಖರೀದಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಮತ್ತು ಐತಿಹಾಸಿಕ ಕ್ಷಣವನ್ನು ಲೈವ್ ಆಗಿ ವೀಕ್ಷಿಸಲು ರಾಜಮೌಳಿ ಅವರು ಒಟ್ಟು 1.44 ಕೋಟಿ ರೂ. ಖರ್ಚು ಮಾಡಿದ್ದಾರೆ.

ಇದನ್ನೂ ಓದಿ: 'ನನ್ನ ಬಹುದಿನದ ಕನಸು ನನಸಾಗ್ತಿದೆ': ಜೂ. NTR ಜೊತೆ ನಟನೆಗೆ ಜಾನ್ವಿ ಕಪೂರ್​ ಸಂತಸ

ಈ ಹಿಂದೆ ಆಸ್ಕರ್​ ಸಮಾರಂಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಆರ್​ಆರ್​ಆರ್​ ತಂಡದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ ಕೆಲ ನೆಟಿಜನ್‌ಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ವಿಡಿಯೋದಲ್ಲಿ ಎಸ್​ಎಸ್​ ರಾಜಮೌಳಿ ಮತ್ತು ಅವರ ಸಿಬ್ಬಂದಿಗೆ ಕೊನೆ ಸಾಲಿನ ಸೀಟುಗಳನ್ನು ನೀಡಿದ್ದಕ್ಕಾಗಿ ಅಸಮಾಧಾನ ಹೊರ ಹಾಕಿದ್ದರು. ಆರ್‌ಆರ್‌ಆರ್ ತಂಡಕ್ಕೆ ಆಸ್ಕರ್ ಹಾಲ್‌ನಲ್ಲಿ ಅಂತಿಮ ಸಾಲನ್ನು ನೀಡಿದ್ದಕ್ಕಾಗಿ ಅಕಾಡೆಮಿ ಪ್ರಶಸ್ತಿ ಸಂಘಟಕರ ಬಗ್ಗೆ ನೆಟಿಜನ್‌ಗಳು ಅತೃಪ್ತರಾಗಿದ್ದರು. ನಾಮನಿರ್ದೇಶರಾಗಿದ್ದ ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಇತರೆ ನಾಮಿನಿಗಳೊಂದಿಗೆ ಮುಂಭಾಗದಲ್ಲಿ ಕುಳಿತಿದ್ದರು. ಕೀರವಾಣಿ ಮತ್ತು ಚಂದ್ರಬೋಸ್ ಹೊರತುಪಡಿಸಿ ಉಳಿದವರು ಹಿಂದೆ ಕುಳಿತೊಳ್ಳಲು ಟಿಕೆಟ್​ ಖರೀದಿಸಿದ್ದಾರೆ ಎಂಬುದು ನಿಮ್ಮ ಗಮನಕ್ಕಿರಲಿ.

ಇದನ್ನೂ ಓದಿ: ಹಾಲಿವುಡ್​ ಸಿನಿಮಾದಲ್ಲಿ ರಾಮ್ ಚರಣ್.. ನೆಪೋಟಿಸಂ ಬಗ್ಗೆ RRR ಸ್ಟಾರ್ ಹೀಗಂದ್ರು

ಈ ಬಾರಿಯ ಆಸ್ಕರ್ ಸಮಾರಂಭದಲ್ಲಿ ಆರ್​ಆರ್​ಆರ್​ ಚಿತ್ರದ ಸೂಪರ್​ ಹಿಟ್​ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಹಾಗೆಯೇ, ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶನದ, ಗುನೀತ್​ ಮೊಂಗಾ ನಿರ್ಮಾಣದ "ದ ಎಲಿಫೆಂಟ್ ವಿಸ್ಪರರ್ಸ್" ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.