ಕನ್ನಡ ಚಿತ್ರರಂಗದಲ್ಲಿ 'ವೀರ ಮದಕರಿ' ಸಿನಿಮಾ ಮೂಲಕ ಕ್ರೇಜ್ ಹೆಚ್ಚಿಸಿಕೊಂಡಿರುವ ನಟಿ ರಾಗಿಣಿ ದ್ವಿವೇದಿ. ಸದ್ಯ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರಗಳನ್ನು ಮಾಡುತ್ತಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ರಾಗಿಣಿ ದ್ವಿವೇದಿ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ನಿರ್ಮಾಣ ಆಗಿರುವ 'ಶೀಲ' ಚಿತ್ರಕ್ಕೆ ನಟಿ ಪ್ರಿಯಾಂಕ ಉಪೇಂದ್ರ ಸಾಥ್ ನೀಡಿದ್ದಾರೆ. ರಾಗಿಣಿ ಮತ್ತು ಪ್ರಿಯಾಂಕಾ ಆತ್ಮೀಯ ಗೆಳತಿಯರಾಗಿದ್ದು, ರಾಗಿಣಿ ದ್ವಿವೇದಿ ಅಭಿನಯದ 'ಶೀಲ' ಸಿನಿಮಾದ ಕನ್ನಡ ಟ್ರೇಲರ್ ಅನ್ನು ಬಿಡುಗಡೆಗೊಳಿಸಿದ್ದಾರೆ.
- " class="align-text-top noRightClick twitterSection" data="">
ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, "ಟ್ರೇಲರ್ ತುಂಬಾ ಚೆನ್ನಾಗಿದೆ. ರಾಗಿಣಿ ಅವರ ಅಭಿನಯ ಕೂಡ ಅದ್ಭುತವಾಗಿದೆ. ಸಸ್ಪೆನ್ಸ್ ಅಂಡ್ ಥ್ರಿಲ್ಲರ್ನಿಂದ ಕೂಡಿದೆ. ಈ ಸಿನಿಮಾ ರಾಗಿಣಿಗೆ ದೊಡ್ಡ ಮಟ್ಟದ ಸಕ್ಸಸ್ ತಂದುಕೊಡಲಿ" ಎಂದು ಚಿತ್ರತಂಡಕ್ಕೆ ಹಾಗೂ ರಾಗಿಣಿಗೆ ಶುಭ ಹಾರೈಸಿದರು.
"ಶೀಲ ಮಹಿಳಾ ಪ್ರಧಾನ ಚಿತ್ರ. ಪ್ರಸ್ತುತ ಹೆಣ್ಣುಮಕ್ಕಳು ದಿನನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಇತ್ತೀಚೆಗೆ ಮಲಯಾಳಂನಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆಗಸ್ಟ್ 4 ರಂದು 'ಶೀಲ' ಚಿತ್ರ ಕರ್ನಾಟಕದಾದ್ಯಂತ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಪ್ರಿಯಾಂಕಾ ಉಪೇಂದ್ರ ಅವರಿಗೆ ಧನ್ಯವಾದ. ಸಸ್ಪೆನ್ಸ್ ಜೊತೆಗೆ ಥ್ರಿಲ್ಲಿಂಗ್ನಿಂದ ಕೂಡಿರುವ ಶೀಲ ಈ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತದೆ" ಎಂದು ರಾಗಿಣಿ ದ್ವಿವೇದಿ ವಿಶ್ವಾಸ ವ್ಯಕ್ತಪಡಿಸಿದರು.
ಆಗಸ್ಟ್ 4 ರಂದು ಬಿಡುಗಡೆ: ಈ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಅಲ್ಲದೇ ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರು ಇದ್ದಾರೆ. ಕೇರಳ ಹಾಗೂ ಕರ್ನಾಟಕದಲ್ಲಿ ಈ ಚಿತ್ರವನ್ನು ಶೂಟಿಂಗ್ ಮಾಡಲಾಗಿದೆ. ಈಗಾಗಲೇ ಮಾಲಿವುಡ್ನಲ್ಲಿ ಈ ಮೊದಲು ಕಂದಹಾರ್ ಮತ್ತು ಫೇಸ್ ಟು ಫೆಸ್ ಎಂಬ 2 ಸಿನಿಮಾ ಮಾಡಿದ್ದು, ಶೀಲಾ ಚಿತ್ರ ರಾಗಿಣಿಗೆ ಮಲಯಾಳಂನಲ್ಲಿ 3 ನೇಯದ್ದಾಗಿದೆ. ಡಿ.ಎಂ.ಪಿಳ್ಳೆ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಬಾಲು ನಾರಾಯಣನ್ ನಿರ್ದೇಶಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಿ ಆಗಸ್ಟ್ 4ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.
ಇದನ್ನೂ ಓದಿ: 'ನಾನು Jr NTR ಅವರ ದೊಡ್ಡ ಅಭಿಮಾನಿ': 'ಆರ್ಆರ್ಆರ್' ಸಿನಿಮಾ ಕೊಂಡಾಡಿದ ಜಪಾನ್ ವಿದೇಶಾಂಗ ಸಚಿವ