ETV Bharat / entertainment

ಸಹೋದ್ಯೋಗಿಗಳು 'ಪರಿ'ಣಿತಿ ಹೆಸರೇಳಿ ನನ್ನನ್ನು ಚುಡಾಯಿಸುತ್ತಿದ್ದರು: ಸಂಸದ ರಾಘವ್​ ಚಡ್ಡಾ - Raghav Parineeti

ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಘವ್ ಚಡ್ಡಾ ಅವರು ನಿಶ್ಚಿತಾರ್ಥ ಬಳಿಕದ ಬದಲಾವಣೆಗಳನ್ನು ಹಂಚಿಕೊಂಡಿದ್ದಾರೆ.

Raghav Chadha Parineeti chopra
ರಾಘವ್​ ಚಡ್ಡಾ ಪರಿಣಿತಿ ಚೋಪ್ರಾ
author img

By

Published : Jul 27, 2023, 3:38 PM IST

ಹೈ - ಪ್ರೊಫೈಲ್ ಕಪಲ್​​ ರಾಘವ್ ಚಡ್ಡಾ ಮತ್ತು ಪರಿಣಿತಿ ಚೋಪ್ರಾ ಮಾರ್ಚ್​ ತಿಂಗಳಿನಿಂದ ಸುದ್ದಿಯಲ್ಲಿದ್ದಾರೆ. ರಾಘವ್ ಚಡ್ಡಾ ರಾಜಕೀಯ ಕ್ಷೇತ್ರದ ಗಣ್ಯ ವ್ಯಕ್ತಿ, ಪರಿಣಿತಿ ಚೋಪ್ರಾ ಸಿನಿ ಸಾಧಕಿ. ಇವರಿಬ್ಬರೂ ಡೇಟಿಂಗ್​ ನಡೆಸುತ್ತಿದ್ದಾರೆ ಎಂಬ ಸುದ್ದಿ ಮಾರ್ಚ್​​ನಲ್ಲಿ ಸದ್ದು ಮಾಡಿತು. ಬಳಿಕ ಮೇ ತಿಂಗಳಿನಲ್ಲಿ ಎಂಗೇಜ್​​ಮೆಂಟ್​​ ಮಾಡಿಕೊಂಡು ವದಂತಿಗಳಿಗೆ ಫುಲ್​ ಸ್ಟಾಪ್​ ಇಟ್ಟರು. ಇದೀಗ ಮದುವೆ ಸಲುವಾಗಿ ಸದ್ದು ಮಾಡುತ್ತಿದ್ದಾರೆ.

ಆಮ್ ಆದ್ಮಿ ಪಕ್ಷದ ಯುವ ಸಂಸದ ರಾಘವ್ ಚಡ್ಡಾ ಮತ್ತು ಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇವರಿಬ್ಬರ ಮದುವೆ ಬಗ್ಗೆ ಅಭಿಮಾನಿಗಳು ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಪರಿಣಿತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ, ಎಎಪಿ ನಾಯಕ ರಾಘವ್ ಚಡ್ಡಾ ಜೀವನದಲ್ಲಿ ಕೆಲ ಬದಲಾವಣೆಗಳಾಗಿವೆ. ಈ ವಿಚಾರವನ್ನು ಸ್ವತಃ ರಾಘವ್​ ಅವರೇ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ, ರಾಘವ್ ಚಡ್ಡಾ ಅವರು ಪರಿಣಿತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಂತರ ತಮ್ಮ ಜೀವನದಲ್ಲಿ ಆದ ಬದಲಾವಣೆಗಳ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ನನ್ನ ಸಹುದ್ಯೋಗಿಗಳು ಮತ್ತು ಪಕ್ಷದ ಮುಖಂಡರು 'ಪರಿ' ಹೆಸರಿಟ್ಟು ನನ್ನನ್ನು ಬಹಳ ಚುಡಾಯಿಸುತ್ತಿದ್ದರು. ನಿಶ್ಚಿತಾರ್ಥದ ನಂತರ ಅದು ಕಡಿಮೆಯಾಗಿದೆ ಎಂದು ರಾಘವ್​ ತಿಳಿಸಿದ್ದಾರೆ.

ಆದಷ್ಟು ಬೇಗ ಮದುವೆ ಆಗುವಂತೆ ನನ್ನ ಸಹುದ್ಯೋಗಿಗಳು, ಸ್ನೇಹಿತರು ನನ್ನ ಮೇಲೆ ಒತ್ತಡ ಹೇರುತ್ತಿದ್ದರು. ಆದರೆ ನಾನು ಮತ್ತು ಪರಿ ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಅವರು ಆ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ. ಪದೇ ಪದೆ ಪರಿ ಹೆಸರನ್ನು ತೆಗೆದುಕೊಂಡು ನನ್ನನ್ನು ಚುಡಾಯಿಸುತ್ತಿಲ್ಲ ಎಂದು ರಾಘವ್ ಚಡ್ಡಾ ಹೇಳಿದರು.

ಇದನ್ನೂ ಓದಿ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ: ಮೊದಲ ದಿನ 10 ಕೋಟಿ ರೂ. ಕಲೆಕ್ಷನ್​​ ಸಾಧ್ಯತೆ!

ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆ ಯಾವಾಗ? ಎಂಬ ಪ್ರಶ್ನೆಯ ಉತ್ತರಕ್ಕಾಗಿ ಸಾಕಷ್ಟು ಮಂದಿ ಕಾತರದಿಂದ ಕಾಯುತ್ತಿದ್ದಾರೆ. 2023ರ ಮೇ 13 ರಂದು, ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ರಾಜಸ್ಥಾನದ ಸುಂದರ ನಗರ ಖ್ಯಾತಿಯ ಉದಯಪುರದ ಐಷಾರಾಮಿ ಪ್ಯಾಲೆಸ್ ಹೋಟೆಲ್ 'ದಿ ಒಬೆರಾಯ್ ಉದಯ್​​​ ವಿಲಾಸ್‌'ನಲ್ಲಿ ಮದುವೆ ಆಗಲಿದ್ದಾರೆ ಎಂಬ ವರದಿಗಳಿವೆ. ಇದೇ ಸಾಲಿನಲ್ಲಿ, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: OMG 2: ಹರ್ ಹರ್ ಮಹಾದೇವ್ ಹಾಡು ಬಿಡುಗಡೆ- ಶಿವನ ವೇಷದಲ್ಲಿ ಅಕ್ಷಯ್​ ಕುಮಾರ್

ನಟಿ ಪರಿಣಿತಿ ಚೋಪ್ರಾ ಅವರ ಕೊನೆಯ ಸಿನಿಮಾ 'ಉಂಚೈ'. ಅಮಿತಾಭ್ ಬಚ್ಚನ್, ಅನುಪಮ್ ಖೇರ್, ನೀನಾ ಗುಪ್ತಾ, ಬೋಮನ್ ಇರಾನಿ ಅವರೊಂದಿಗೆ ಕೆಲಸ ಮಾಡಿದ್ದರು. ಸದ್ಯ 'ಅಮರ್ ಸಿಂಗ್ ಚಮ್ಕಿಲಾ' ಸೇರಿದಂತೆ ಕೆಲ ಪ್ರೊಜೆಕ್ಟ್​​ಗಳಿಗೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಪಂಜಾಬಿ ಸಂಗೀತಗಾರ ಅಮರ್ ಸಿಂಗ್ ಚಮ್ಕಿಲಾ ಅವರ ಜೀವನಾಧಾರಿತ ಚಿತ್ರದಲ್ಲಿ ಪರಿಣಿತಿ ಚೋಪ್ರಾ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.