ETV Bharat / entertainment

ರಷ್ಯಾದಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹವಾ - ಈಟಿವಿ ಭಾರತ ಕನ್ನಡ ನ್ಯೂಸ್​

ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯ ಪುಷ್ಪ ಸಿನಿಮಾ ಡಿ.8 ರಂದು ರಷ್ಯಾದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇದಕ್ಕೂ ಮೊದಲು ಡಿಸೆಂಬರ್ 1 ರಂದು ಮಾಸ್ಕೋದಲ್ಲಿ ಮತ್ತು ಡಿಸೆಂಬರ್ 3 ರಂದು ಸೇಂಟ್ ಪೀಟರ್ಸ್​ಬರ್ಗ್​ನಲ್ಲಿ ಪ್ರಥಮ ಪ್ರದರ್ಶನ ಕಾಣಲಿದ್ದು ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

pushpa-the-rise-movie-releasing-at-russia
ರಷ್ಯಾದಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹವಾ
author img

By

Published : Nov 30, 2022, 6:52 PM IST

ಸೌತ್ ಸಿನಿಮಾ ಇಂಡಸ್ಟ್ರಿಯ ಸಿನಿಮಾಗಳು ಭಾರತೀಯ ಚಿತ್ರರಂಗ ಅಲ್ಲದೇ ವಿಶ್ವದಾದ್ಯಂತ ಸುದ್ದಿ ಮಾಡುತ್ತಿವೆ. ಈ ಸಾಲಿನಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯ ಪುಷ್ಪ ಸಿನಿಮಾವೂ ಒಂದು. ಬಾಕ್ಸ್ ಆಫೀಸ್ ನಲ್ಲಿ 370 ಕೋಟಿ ಕಲೆಕ್ಷನ್ ಮಾಡಿದ ಪುಷ್ಪ ಸಿನಿಮಾ ಬಿಡುಗಡೆ ಆಗಿ ಡಿಸೆಂಬರ್ 17ಕ್ಕೆ ಒಂದು ವರ್ಷ ಪೂರೈಸುತ್ತಿದೆ. ಈಗಾಗ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿರುವ ಪುಷ್ಪ ಸಿನೆಮಾ ರಷ್ಯಾದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

pushpa-the-rise-movie-releasing-at-russia
ರಷ್ಯಾದಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹವಾ

ಪುಷ್ಪ ಸಿನೆಮಾ ಡಿ.8 ರಂದು ರಷ್ಯಾದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್,ರಶ್ಮಿಕಾ ಮಂದಣ್ಣ ಸೇರಿದಂತೆ ಇಡೀ ಪುಷ್ಪ ಚಿತ್ರತಂಡ ರಷ್ಯಾಗೆ ತೆರಳಿದೆ. ರಷ್ಯಾದ 24 ನಗರಗಳಲ್ಲಿ ನಡೆಯಲಿರುವ ಐದನೇ ಭಾರತೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿಯೂ ಚಲನಚಿತ್ರವು ಮೊದಲಿಗೆ ಪ್ರದರ್ಶನಗೊಳ್ಳಲಿದೆ.

ಈ ಚಿತ್ರವು ಡಿಸೆಂಬರ್ 1 ರಂದು ಮಾಸ್ಕೋದಲ್ಲಿ ಮತ್ತು ಡಿಸೆಂಬರ್ 3 ರಂದು ಸೇಂಟ್ ಪೀಟರ್ಸ್​ಬರ್ಗ್​ನಲ್ಲಿ ಪ್ರಥಮ ಪ್ರದರ್ಶನ ಕಾಣಲಿದ್ದು ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಈ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.

ಡಿಸೆಂಬರ್ 8 ರಂದು ರಷ್ಯಾದೆಲ್ಲೆಡೆ ಸಿನೆಮಾ ಬಿಡುಗಡೆಯಾಗಲಿದೆ. ಇತ್ತ ಪುಷ್ಪ ಚಿತ್ರ ತಂಡವು ಪುಷ್ಪ: ದಿ ರೂಲ್‌ ಪುಷ್ಪ 2ಕ್ಕೆ ಸಜ್ಜಾಗುತ್ತಿದೆ. ಈಗಾಗ್ಲೇ ಈ ಚಿತ್ರದ ಶೂಟಿಂಗ್ ಆರಂಭವಾಗಿದ್ದು ಪುಷ್ಪ 2 ಸಿನಿಮಾ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿರೋದಂತೂ ನಿಜ.

ಇದನ್ನೂ ಓದಿ : ವಿದೇಶಕ್ಕೆ ಹಾರಿದ ರಶ್ಮಿಕಾ ಮಂದಣ್ಣ: ಡಿಸೆಂಬರ್ 1 ರಂದು ಪುಷ್ಪ ಚಿತ್ರ ಬಿಡುಗಡೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.