ಮುಂಬೈ: ಬಾಲಿವುಡ್ ಕಿಂಗ್ ಶಾರುಖ್ ಖಾನ್ ತಮ್ಮ ಅದ್ಭುತ ನಟನೆಯಿಂದ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೆಲವೊಮ್ಮೆ ಸೂಪರ್‌ಸ್ಟಾರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಲೇ ಇರುತ್ತಾರೆ. ಏತನ್ಮಧ್ಯೆ, ದೆಹಲಿ ಅಪಘಾತದಲ್ಲಿ ಬಲಿಯಾದ ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಸಹಾಯ ಮಾಡಿದ್ದಕ್ಕಾಗಿ ನಟ ಶಾರುಖ್ ಖಾನ್ 'Proud of Shah Rukh Khan' ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ಸೂಪರ್‌ಸ್ಟಾರ್‌ನ ಇಂತಹ ಸಾಮಾಜಿಕ ಸೇವೆಗೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ.
-
The man with Golden heart 💗
— Mudassir Khan (@Mr__Khan0786) January 8, 2023 " class="align-text-top noRightClick twitterSection" data="
PROUD OF SHAH RUKH KHAN pic.twitter.com/zV86zQMzF7
">The man with Golden heart 💗
— Mudassir Khan (@Mr__Khan0786) January 8, 2023
PROUD OF SHAH RUKH KHAN pic.twitter.com/zV86zQMzF7The man with Golden heart 💗
— Mudassir Khan (@Mr__Khan0786) January 8, 2023
PROUD OF SHAH RUKH KHAN pic.twitter.com/zV86zQMzF7
ಶಾರುಖ್ ಖಾನ್ ಅವರು ಇತ್ತೀಚೆಗಷ್ಟೇ 'ಪಠಾಣ್' ಚಿತ್ರದ 'ಬೇಷರಂ ರಂಗ್' ಹಾಡಿಗೆ ಭಾರಿ ವಿರೋಧ ಎದುರಿಸಬೇಕಾಯಿತು. ಹೀಗಿರುವಾಗ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಕಿಂಗ್ ಖಾನ್ ಅವರನ್ನು ಹೊಗಳಿದ್ದಾರೆ. ಕೆಲವರು ಡ್ಯಾನ್ಸ್ ವಿಡಿಯೋ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಡ್ಯಾನ್ಸ್ ವಿಡಿಯೋ ಶಾರುಖ್ ಖಾನ್ ಅವರ ನೃತ್ಯ ಸಂಯೋಜಕ ಮತ್ತು ಅಭಿಮಾನಿ ಕುನಾಲ್ ಮೋರ್ ಅವರದ್ದು. ವಿಡಿಯೋದಲ್ಲಿ ಕುನಾಲ್ ಮತ್ತು ಕೆಲವು ನರ್ತಕರು ಪುಣೆಯ ಬೀದಿಗಳಲ್ಲಿ 'ಜೂಮೇ ಜೋ ಪಠಾಣ್' ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.
-
Dabboo Ratnani shared this amazing photoshoot photo of #ShahRukhKhan 😍
— Team Shah Rukh Khan Fan Club (@teamsrkfc) January 8, 2023 " class="align-text-top noRightClick twitterSection" data="
PROUD OF SHAH RUKH KHAN#PathaanWithTeamSRK pic.twitter.com/6CtqPmTxVf
">Dabboo Ratnani shared this amazing photoshoot photo of #ShahRukhKhan 😍
— Team Shah Rukh Khan Fan Club (@teamsrkfc) January 8, 2023
PROUD OF SHAH RUKH KHAN#PathaanWithTeamSRK pic.twitter.com/6CtqPmTxVfDabboo Ratnani shared this amazing photoshoot photo of #ShahRukhKhan 😍
— Team Shah Rukh Khan Fan Club (@teamsrkfc) January 8, 2023
PROUD OF SHAH RUKH KHAN#PathaanWithTeamSRK pic.twitter.com/6CtqPmTxVf
ಇದನ್ನೂ ಓದಿ: ಪಠಾಣ್ ಬಿಡುಗಡೆಗೆ ಆಕ್ಷೇಪ: ಚಿತ್ರದ ಪೋಸ್ಟರ್ಗಳನ್ನು ಹರಿದ ಭಜರಂಗ ದಳದ ಕಾರ್ಯಕರ್ತರು
ಡಿ. 3 ರ ರಾತ್ರಿ ಅಂಜಲಿ ಸಿಂಗ್ ತನ್ನ ಸ್ನೇಹಿತೆ ನಿಧಿಯೊಂದಿಗೆ ಮನೆಗೆ ಹಿಂದಿರುಗುತ್ತಿದ್ದರು. ಆದರೆ, ಆಕೆ ಆ ಕರಾಳ ರಾತ್ರಿ ಅಂಜಲಿ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಳು. ದೆಹಲಿಯ ಕಾಂಜಾವಾಲಾ ರಸ್ತೆಯಲ್ಲಿ ಎದುರಿನಿಂದ ವೇಗವಾಗಿ ಬಂದ ಕಾರು ಅಂಜಲಿಯ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅಂಜಲಿಯ ಸ್ನೇಹಿತೆ ನಿಧಿ ಪ್ರಾಣಾಪಾಯದಿಂದ ಪಾರಾಗಿದ್ದು, ಅಂಜಲಿ ಕಾರಿನಡಿ ಸಿಲುಕಿ ಸಾವನ್ನಪ್ಪಿದ್ದಳು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.
-
Most kind & most humble star ♥️ @iamsrk
— SRK ROYAL'S FC MADANAPALLE Telugu Fans Of SRK (@SrkFCMPL) January 8, 2023 " class="align-text-top noRightClick twitterSection" data="
PROUD OF SHAH RUKH KHAN pic.twitter.com/Q9FAfPgJTF
">Most kind & most humble star ♥️ @iamsrk
— SRK ROYAL'S FC MADANAPALLE Telugu Fans Of SRK (@SrkFCMPL) January 8, 2023
PROUD OF SHAH RUKH KHAN pic.twitter.com/Q9FAfPgJTFMost kind & most humble star ♥️ @iamsrk
— SRK ROYAL'S FC MADANAPALLE Telugu Fans Of SRK (@SrkFCMPL) January 8, 2023
PROUD OF SHAH RUKH KHAN pic.twitter.com/Q9FAfPgJTF
ಸಹಾಯ ಹಸ್ತ ಚಾಚಿದ ಬಾಲಿವುಡ್‌ನ 'ಬಾದ್‌ಶಾ': ಅಂಜಲಿ ಸಿಂಗ್ ಕುಟುಂಬಕ್ಕೆ 'ಬಾದ್‌ಶಾ' ಶಾರುಖ್ ಖಾನ್ ಆರ್ಥಿಕ ಸಹಾಯ ನೀಡಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಶಾರುಖ್ ಖಾನ್ ಅವರ ಚಾರಿಟಿ ಫೌಂಡೇಶನ್ 'ಮೀರ್ ಫೌಂಡೇಶನ್' ಮೂಲಕ ಅಂಜಲಿ ಸಿಂಗ್ ಅವರ ಕುಟುಂಬಕ್ಕೆ ಸಹಾಯದ ಮೊತ್ತವನ್ನು ನೀಡಿದ್ದಾರೆ. ಶಾರುಖ್ ಖಾನ್ 2013ರಲ್ಲಿ ತನ್ನ ದಿವಂಗತ ತಂದೆ ಮೀರ್ ತಾಜ್ ಮೊಹಮ್ಮದ್ ಹೆಸರಿನಲ್ಲಿ ಎನ್‌ಜಿಒ ಮೀರ್ ಫೌಂಡೇಶನ್ ಅನ್ನು ತೆರೆದರು. ಕೆಳಸ್ತರದ ಬಡವರು ಮತ್ತು ನಿರ್ಗತಿಕರಿಗೆ ಎಲ್ಲ ರೀತಿಯಲ್ಲೂ ಸಹಾಯ ನೀಡುವುದು ಈ ಎನ್‌ಜಿಒನ ಉದ್ದೇಶವಾಗಿದೆ.
-
Trending Now: PROUD OF SHAH RUKH KHAN 🔥 pic.twitter.com/1JrOyhOVVX
— Team Shah Rukh Khan Fan Club (@teamsrkfc) January 8, 2023 " class="align-text-top noRightClick twitterSection" data="
">Trending Now: PROUD OF SHAH RUKH KHAN 🔥 pic.twitter.com/1JrOyhOVVX
— Team Shah Rukh Khan Fan Club (@teamsrkfc) January 8, 2023Trending Now: PROUD OF SHAH RUKH KHAN 🔥 pic.twitter.com/1JrOyhOVVX
— Team Shah Rukh Khan Fan Club (@teamsrkfc) January 8, 2023
ಇನ್ನು ಶಾರುಖ್ 4 ನಾಲ್ಕು ವರ್ಷಗಳ ನಂತರ ಸಿದ್ಧಾರ್ಥ್ ಆನಂದ್ ಅವರ 'ಪಠಾಣ್' ಚಿತ್ರದೊಂದಿಗೆ ದೊಡ್ಡ ಪರದೆಗೆ ಮರಳಲು ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜನವರಿ 25 ರಂದು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ 'ಪಠಾಣ್' ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಯುವತಿ ದೇಹ ನಾಲ್ಕು ಕಿಮೀ ಎಳೆದೊಯ್ದ ಪ್ರಕರಣ: ಮತ್ತೊಂದು ಸಿಸಿಟಿವಿ ವಿಡಿಯೋ ವೈರಲ್
ಕಾಂಜಾವಾಲಾ ಪ್ರಕರಣ: ದೆಹಲಿಯ ಹೊರವಲಯದ ಕಾಂಜಾವಾಲಾ ಪ್ರದೇಶದಲ್ಲಿ ಡಿ.31 ಮತ್ತು ಜನವರಿ 1ರ ತಡರಾತ್ರಿ ಆಘಾತಕಾರಿ ಘಟನೆ ನಡೆದಿತ್ತು. ಈ ಬಗ್ಗೆ ಭಾನುವಾರ ಬೆಳಗಿನ ಜಾವ 3.24ರ ಸುಮಾರಿಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಯುವತಿಯ ಶವವು ನಗ್ನ ಸ್ಥಿತಿಯಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿತ್ತು. ಹೀಗಾಗಿಯೇ ಯುವತಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ನಂತರ ಆಕೆಯ ಶವವನ್ನು ಎಳೆದೊಯ್ದು ಬಿಸಾಡಲಾಗಿತ್ತು ಎಂದು ಪೊಲೀಸರು ಮೊದಲಿಗೆ ಶಂಕಿಸಿದ್ದರು.
-
Shuffling on my fav song #JhoomeJoPathaan #Pathaan @iamsrk @deepikapadukone @yrf #srkian #shuffledance @SRKUniverse @mrtownboy @JoySRKian_2 @SRKFC_PUNE
— Kunal more (@iamkunalmore) January 8, 2023 " class="align-text-top noRightClick twitterSection" data="
PROUD OF SHAH RUKH KHAN pic.twitter.com/SLp5Rt7DmY
">Shuffling on my fav song #JhoomeJoPathaan #Pathaan @iamsrk @deepikapadukone @yrf #srkian #shuffledance @SRKUniverse @mrtownboy @JoySRKian_2 @SRKFC_PUNE
— Kunal more (@iamkunalmore) January 8, 2023
PROUD OF SHAH RUKH KHAN pic.twitter.com/SLp5Rt7DmYShuffling on my fav song #JhoomeJoPathaan #Pathaan @iamsrk @deepikapadukone @yrf #srkian #shuffledance @SRKUniverse @mrtownboy @JoySRKian_2 @SRKFC_PUNE
— Kunal more (@iamkunalmore) January 8, 2023
PROUD OF SHAH RUKH KHAN pic.twitter.com/SLp5Rt7DmY
ಆದರೆ, ನಂತರ ದುಷ್ಟರು, ಯುವತಿಯನ್ನು ಎಳೆದೊಯ್ದಿರುವ ಕಾರಣ ಆಕೆಯ ಸ್ಕೂಟಿ ಅಪಘಾತಕ್ಕೀಡಾಗಿ ಮತ್ತು ಕಾರಿನ ಚಕ್ರಕ್ಕೆ ಆಕೆಯ ಬಟ್ಟೆ ಸಿಕ್ಕಿಹಾಕಿಕೊಂಡು ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇದರ ಆಧಾರದ ಮೇಲೆ ಸದ್ಯ ಕಾರಿನಲ್ಲಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ದೀಪಕ್ ಖನ್ನಾ, ಅಮಿತ್ ಖನ್ನಾ, ಕ್ರಿಶನ್, ಮಿತ್ತು ಹಾಗೂ ಮನೋಜ್ ಮಿತ್ತಲ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯ ಎಳೆದೊಯ್ದ ಕಾರು.. 4 ಕಿಮೀ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಸಂತ್ರಸ್ತೆ ಶವ ಪತ್ತೆ