ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆನ್ನಲ್ಲೇ, ಸ್ಯಾಂಡಲ್ವುಡ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣ ಹೆಚ್ಚಾಗುತ್ತಿವೆ. ಆದರೆ, ಕನ್ನಡ ಸಿನಿಮಾರಂಗದಲ್ಲಿ ಒಂದಿಷ್ಟು ಸಮಸ್ಯೆಗಳ ಬಗ್ಗೆ ನಿರ್ಮಾಪಕರ ಸಂಘದ ಪದಾಧಿಕಾರಿಗಳು ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದಂತಹ ಸಾ ರಾ ಗೋವಿಂದು ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ ಚಿತ್ರರಂಗಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಅದರಲ್ಲಿ ಉಳಿದುಕೊಂಡಿರುವ ಸಬ್ಸಿಡಿ ಹಣ, ರಾಜ್ಯ ಪ್ರಶಸ್ತಿಗಳು, ಮುಚ್ಚುತ್ತಿರುವ ಚಿತ್ರಮಂದಿರಗಳ ಪರಿಸ್ಥಿತಿ, ಮೈಸೂರಿನಲ್ಲಿ ಚಿತ್ರನಗರಿ ಪೈರಸಿಯಿಂದ ಉದ್ಯಮಕ್ಕೆ ಆಗುತ್ತಿರುವ ನಷ್ಟ. ತೆರಿಗೆ ಇಂದ ಆಗುತ್ತಿರುವ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಕಾರ್ಯದರ್ಶಿಗಳಾದಂತ ಪ್ರವೀಣ್ ಕುಮಾರ್ ಹಾಗೂ ಉಪಾಧ್ಯಕ್ಷರಾದಂತಹ ಎಂ ಜಿ ರಾಮಮೂರ್ತಿ, ನಿರ್ಮಾಪಕ ಎನ್. ಎಂ ಸುರೇಶ್, ಸಿಎಂ ಸಿದ್ದರಾಮಯ್ಯ ಅವರ ಜೊತೆ ಸುದೀರ್ಘವಾದಂತಹ ಚರ್ಚೆಯನ್ನ ಮಾಡಿ ಸಮಗ್ರ ಸಮಸ್ಯೆಗಳ ಚರ್ಚೆ ಮಾಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಸಿದ್ದರಾಮಯ್ಯ ಇದರ ಸಮಯ ನಿಗದಿಪಡಿಸಿ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಅತಿ ಶೀಘ್ರದಲ್ಲೇ ದಿನಾಂಕವನ್ನು ನಿಗದಿಪಡಿಸುತ್ತೇನೆಂದು ಸಿಎಂ ಸಿದ್ದರಾಮಯ್ಯ ಕೂಡ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ನಿರ್ಮಾಪಕ ಸಂಘದ ವತಿಯಿಂದ ಸಿಎಂ ಮಾಡಿರೋ ಮನವಿಗಳಲ್ಲಿ ಯಾವೆಲ್ಲ ಕೆಲಸಗಳು ಆಗುತ್ತವೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.
ಸಿನಿಮಾ ಚಿತ್ರತಂಡ ಹೊಸ ಅಪ್ಡೇಟ್: 'ಕಿಚ್ಚ 46' ಇದೀಗ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ನಲ್ಲಿರುವ ವಿಚಾರವಾಗಿದೆ. ಕಳೆದ ಸುಮಾರು ಏಳೆಂಟು ತಿಂಗಳಿಂದ ಕಿಚ್ಚನ ಮುಂದಿನ ಸಿನಿಮಾ ಬಗ್ಗೆ ಅಂತೆ - ಕಂತೆಗಳು ಕೇಳಿ ಬರುತ್ತಲೇ ಇವೆ. ಇತ್ತೀಚೆಗಷ್ಟೇ ತಮ್ಮ ಮುಂದಿನ ಸಿನಿಮಾ ಶೀಘ್ರದಲ್ಲೇ ಘೋಷಿಸುವುದಾಗಿ ನಟ ಸುದೀಪ್ ಹೇಳಿದ್ದರು. ಇದೀಗ ಕಿಚ್ಚನ 46ನೇ ಸಿನಿಮಾ ಚಿತ್ರತಂಡ ಹೊಸ ಅಪ್ಡೇಟ್ವೊಂದನ್ನು ಕೂಡಾ ನೀಡಿದೆ.
'ಕಿಚ್ಚ 46' ಮೇಲೆ ಹೆಚ್ಚಿದ ನಿರೀಕ್ಷೆ: ಬಹು ಸಮಯದಿಂದ ಕನ್ನಡ ಸಿನಿಮಾರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ನಟ ಸುದೀಪ್ ಇಡೀ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯತೆ ಸಂಪಾದಿಸಿದ್ದಾರೆ. ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತ ಬಂದಿರುವ ಇವರು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ಇವರು ಅಭಿನಯ ಚಕ್ರವರ್ತಿ ಎಂದೇ ಪ್ರಸಿದ್ಧರಾಗಿದ್ದಾರೆ.
ಈ ಕಾರಣಕ್ಕಾಗಿಯೇ ಅವರ ಮುಂದಿನ ಸಿನಿಮಾ ಬಗ್ಗೆ ಅಭಿಮಾನಿಗಳ ಕುತೂಹಲ ಕೊಂಚ ಹೆಚ್ಚೇ ಅಲ್ವೇ?. ಮುಂಬರುವ ಅವರ ಸಿನಿಮಾ ಯಾವುದು? ಯಾವ ರೀತಿಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ? ಯಾವ ನಿರ್ಮಾಣ ಸಂಸ್ಥೆಯಡಿ ಕಿಚ್ಚನ ಸಿನಿಮಾ ನಿರ್ಮಾಣವಾಗಲಿದೆ? ನಟಿ ಯಾರಾಗಬಹುದು? ಕಥೆ ಹೇಗಿರಬಹುದು? ಹೀಗೆ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿರುವುದು ಸಹಜ.
ಇವುಗಳಲ್ಲಿ ಕೆಲವೊಂದು ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಕಿಚ್ಚನ 46ನೇ ಸಿನಿಮಾದ ಚಿತ್ರತಂಡ ಹೊಸ ಅಪ್ಡೇಟ್ ನೀಡಿದೆ. ಈಗಾಗಲೇ ತಿಳಿದಿರುವಂತೆ ಕಿಚ್ಚ ಸುದೀಪ್ ಮೂರು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆ ಪೈಕಿ 'ದಿ ವಿ ಕ್ರಿಯೇಷನ್ಸ್'ನ ಕಲೈಪುಲಿ ಎಸ್. ತನು ನಿರ್ಮಾಣ ಮಾಡುತ್ತಿರುವ ಸಿನಿಮಾ ಮೊದಲು ಸೆಟ್ಟೇರಿದೆ. ಇದೇ ಚಿತ್ರತಂಡ ಸುದೀಪ್ 46ನೇ ಚಿತ್ರದ ಟೀಸರ್ ಜುಲೈ 2 ರಂದು ರಿಲೀಸ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಇದನ್ನೂ ಓದಿ: 'ಕಿಚ್ಚ 46' ಬಗ್ಗೆ ಸಿಕ್ತು ಬಿಗ್ ಅಪ್ಡೇಟ್.. ಸುದೀಪ್ ಮುಂದಿನ ಸಿನಿಮಾದ ಟೀಸರ್ಗೆ ಮುಹೂರ್ತ ಫಿಕ್ಸ್!