ಕರ್ನಾಟಕ ರತ್ನ ದಿ.ಪುನೀತ್ ರಾಜ್ಕುಮಾರ್ ಅಗಲಿದರೂ ಅವರು ಬಿಟ್ಟು ಹೋದ ಸಮಾಜ ಸೇವೆಯನ್ನು ಅಭಿಮಾನಿಗಳು, ಕುಟುಂಬಸ್ಥರು ಮುಂದುವರೆಸುತ್ತಿದ್ದಾರೆ. ಪತ್ನಿ ಅಶ್ವಿನಿ ಪತಿಯ ಹಾದಿಯಲ್ಲೇ ಮುನ್ನುಗ್ಗುತ್ತಿದ್ದಾರೆ. ನಟ ಪ್ರಕಾಶ್ ರಾಜ್ ಕೂಡ ಅಪ್ಪು ಹೆಸರಿನಲ್ಲಿ ಆಂಬ್ಯುಲೆನ್ಸ್ಗಳನ್ನು ಉಚಿತವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಜನಸೇವೆಯ ಮೂಲಕ ಅಕಾಲಿಕ ಮರಣವನ್ನಪ್ಪಿದ ನಟನ ಹೆಸರನ್ನು ಜೀವಂತವಾಗಿರಿಸಲು ನಿಶ್ಚಯಿಸಿರುವ ಪ್ರಕಾಶ್ ರಾಜ್‌ಗೆ ನಟರಾದ ಯಶ್, ಸೂರ್ಯ ಮತ್ತು ಚಿರಂಜೀವಿ ಬೆಂಬಲ ನೀಡಿದ್ದಾರೆ.
ಈ ಹಿಂದೆ ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ಯಶ್ ಅವರು ತಾವೂ ಸಹ ಪ್ರಕಾಶ್ ರಾಜ್‌ರೊಂದಿಗೆ ಈ ಕಾರ್ಯದಲ್ಲಿ ಕೆಲಸ ಮಾಡುವುದಾಗಿ ಘೋಷಿಸಿ ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದೊಂದು ಆಂಬ್ಯುಲೆನ್ಸ್ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಅದರಂತೆ ಇದೀಗ ಪ್ರಕಾಶ್, ಯಶ್, ಸೂರ್ಯ, ಚಿರಂಜೀವಿ ಮತ್ತು ಯಶ್ ಸ್ನೇಹಿತ ವೆಂಕಟ್ ಸೇರಿಕೊಂಡು ರಾಜ್ಯದ ಐದು ಜಿಲ್ಲೆಗಳಿಗೆ ಆಂಬ್ಯುಲೆನ್ಸ್ ವಿತರಿಸಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
-
ನಮ್ಮೆಲ್ಲರ ಕಣ್ಮಣಿ… ನಮ್ಮ “ಅಪ್ಪು” ವಿನ ನೆನಪಲ್ಲಿ.. 🙏🏿🙏🏿🙏🏿 @TheNameIsYash #Yashomarga @KChiruTweets #Chiranjeevicharitabletrust @Suriya_offl #2Dentertainment @KvnProductions#KVNfoundation a #prakashrajfoundation initiative. #DrPuneetRajkumar #justasking pic.twitter.com/uh4a2MRG83
— Prakash Raj (@prakashraaj) March 25, 2023 " class="align-text-top noRightClick twitterSection" data="
">ನಮ್ಮೆಲ್ಲರ ಕಣ್ಮಣಿ… ನಮ್ಮ “ಅಪ್ಪು” ವಿನ ನೆನಪಲ್ಲಿ.. 🙏🏿🙏🏿🙏🏿 @TheNameIsYash #Yashomarga @KChiruTweets #Chiranjeevicharitabletrust @Suriya_offl #2Dentertainment @KvnProductions#KVNfoundation a #prakashrajfoundation initiative. #DrPuneetRajkumar #justasking pic.twitter.com/uh4a2MRG83
— Prakash Raj (@prakashraaj) March 25, 2023ನಮ್ಮೆಲ್ಲರ ಕಣ್ಮಣಿ… ನಮ್ಮ “ಅಪ್ಪು” ವಿನ ನೆನಪಲ್ಲಿ.. 🙏🏿🙏🏿🙏🏿 @TheNameIsYash #Yashomarga @KChiruTweets #Chiranjeevicharitabletrust @Suriya_offl #2Dentertainment @KvnProductions#KVNfoundation a #prakashrajfoundation initiative. #DrPuneetRajkumar #justasking pic.twitter.com/uh4a2MRG83
— Prakash Raj (@prakashraaj) March 25, 2023
ವಿಡಿಯೋದಲ್ಲಿ ಮಾತನಾಡಿರುವ ಪ್ರಕಾಶ್, "ತನ್ನ ಸಜ್ಜನಿಕೆಯಿಂದ, ಧಾರಾಳ ಮನಸ್ಸಿನಿಂದ ಎಂದೆಂದಿಗೂ ಮರೆಯಲಾಗದ ನೆನಪಾಗಿರುವವರು ನಮ್ಮೆಲ್ಲರ ಕಣ್ಮಣಿ ಡಾ.ಪುನೀತ್ ರಾಜ್ಕುಮಾರ್. ಅವರು ಶಾಶ್ವತವಾಗಿ ನಮ್ಮೊಂದಿಗೆ ಇರಬೇಕು ಅಂದ್ರೆ ಅವರು ಮಾಡುತ್ತಿದ್ದ ಸಮಾಜ ಸೇವೆಯನ್ನು ನಾವು ಮುಂದುವರೆಸಬೇಕು. ಈ ಆಶಯವನ್ನು ಇಟ್ಟುಕೊಂಡು ಶುರುವಾಗಿದ್ದು 'ಅಪ್ಪು ಎಕ್ಸ್ಪ್ರೆಸ್ ಆಂಬ್ಯುಲೆನ್ಸ್'. ಕರ್ನಾಟಕದ ಪ್ರತಿ ಜಿಲ್ಲೆಗೂ ಒಂದೊಂದು ಆಂಬ್ಯುಲೆನ್ಸ್ ನೀಡಬೇಕು ಎಂಬುದು ನನ್ನ ಮತ್ತು ಪ್ರಕಾಶ್ ರಾಜ್ ಫೌಂಡೇಶನ್ ಕನಸು. ಅದರಂತೆ ನಾವು ಆಂಬ್ಯುಲೆನ್ಸ್ ನೀಡುವ ಕಾರ್ಯವನ್ನು ಮೈಸೂರಿನಿಂದ ಪ್ರಾರಂಭಿಸಿದ್ದು, ಮುಂದುವರೆದ ಭಾಗವಾಗಿ ಬೀದರ್, ಕಲಬುರಗಿ, ಕೊಳ್ಳಗಾಲ, ಕೊಪ್ಪಳ ಮತ್ತು ಉಡುಪಿ ಜಿಲ್ಲೆಗಳಿಗೆ ಆಂಬ್ಯುಲೆನ್ಸ್ ವಿತರಿಸಿದ್ದೇವೆ" ಎಂದರು.
ಇದನ್ನೂ ಓದಿ: 'ವೀಕೆಂಡ್ ವಿತ್ ರಮೇಶ್ ಶೋ'ಗೆ ಕಾತರ: ಮೋಹಕತಾರೆ ರಮ್ಯಾ ಬಗ್ಗೆ ಪೂಜಾ ಗಾಂಧಿ ಗುಣಗಾನ
ಮುಂದುವರೆದು, "ಆದರೆ ಈ ಸಾರಿ ನಾನೊಬ್ಬನೇ ಅಲ್ಲ. ನನ್ನ ಜೊತೆಯಾಗಿ ತೆಲುಗು ಮೆಗಾಸ್ಟಾರ್ ಚಿರಂಜೀವಿ, ಸೋದರ, ತಮಿಳು ನಟ ಸೂರ್ಯ ಮತ್ತು ಬಹಳ ದೊಡ್ಡ ಬೆಂಬಲವಾಗಿ ನಿಂತವರು ನಮ್ಮ ಪ್ರೀತಿಯ ಯಶ್ ಮತ್ತು ಅವರ ಸ್ನೇಹಿತ ವೆಂಕಟ್. ನನ್ನಲ್ಲಿ ಯಶ್ ಅವರು ಹೇಳಿದ ಮಾತು ನನಗೆ ಬಹಳ ಇಷ್ಟವಾಯಿತು. ಪ್ರಕಾಶ್ ಸರ್, ಇದು ನಿಮ್ಮೊಬ್ಬರದ್ದೇ ಕನಸಲ್ಲ, ನಮ್ಮೆಲ್ಲರ ಕನಸು. ಅವರ ಉದಾರತೆಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಆಂಬ್ಯುಲೆನ್ಸ್ ವಿತರಣೆಯನ್ನು ದೊಡ್ಡ ಸಮಾರಂಭ ಮಾಡಬಹುದಿತ್ತು. ಆದರೆ ಸಮಾರಂಭ ಮಾಡಲು ಬೇಕಾಗುವ ಹಣದಲ್ಲಿ ಇನ್ನೊಂದು ಆಂಬ್ಯುಲೆನ್ಸ್ ಖರೀದಿ ಮಾಡಬಹುದೆಂದು ಯಶ್ ಮತ್ತು ನಾನು ಯೋಚಿಸಿದೆವು. ಹೀಗಾಗಿ ಯಾವುದೇ ಆಡಂಬರವಿಲ್ಲದೇ ಸರಳವಾಗಿ ವಿತರಣೆ ಮಾಡಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಹನೂರಿನ ಆಸ್ಪತ್ರೆಗೆ ಆಂಬ್ಯುಲೆನ್ಸ್ ಕೊಡುಗೆ ನೀಡಿದ ನಟ ಪ್ರಕಾಶ್ ರಾಜ್