ETV Bharat / entertainment

ಬಹುನಿರೀಕ್ಷಿತ 'ಸಲಾರ್'​​ ರಿಲೀಸ್​ ಡೇಟ್​ ಅನೌನ್ಸ್: ಶಾರುಖ್​ ಸಿನಿಮಾದೊಂದಿಗೆ ಪೈಪೋಟಿ! - ಡಂಕಿ ಬಿಡುಗಡೆ ದಿನಾಂಕ

Salaar vs Dunki: 'ಸಲಾರ್'​​ ರಿಲೀಸ್​ ಡೇಟ್​ ಅನೌನ್ಸ್ ಆಗಿದ್ದು, ಡಂಕಿ ಸಿನಿಮಾದೊಂದಿಗೆ ಪೈಪೋಟಿ ನಡೆಸಲಿದೆ.

Salaar release date announced
'ಸಲಾರ್'​​ ರಿಲೀಸ್​ ಡೇಟ್​ ಅನೌನ್ಸ್
author img

By ETV Bharat Karnataka Team

Published : Sep 29, 2023, 12:14 PM IST

Updated : Sep 29, 2023, 12:43 PM IST

ರೆಬಲ್ ಸ್ಟಾರ್ ಪ್ರಭಾಸ್ ಅವರ ಅಪಾರ ಸಂಖ್ಯೆಯ ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ. ಭಾರತದ ಬಹುನಿರೀಕ್ಷಿತ ಸಿನಿಮಾ 'ಸಲಾರ್'​​ ರಿಲೀಸ್​ ಡೇಟ್​ ಅನೌನ್ಸ್​ ಆಗಿದೆ. ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್​​ ಹಾಗೂ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್​ ಕಾಂಬಿನೇಶನ್​ನ ಮೋಸ್ಟ್ ಎಕ್ಸ್​ಪೆಕ್ಟೆಡ್​ ಮೂವಿ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

ಇಂದು ದಕ್ಷಿಣ ಚಿತ್ರತರಂಗದ ಖ್ಯಾತ ಚಲನಚಿತ್ರ ನಿರ್ದೇಶಕ ಪ್ರಶಾಂತ್​​ ನೀಲ್​​​ ನಿರ್ದೇಶನದ ಸಲಾರ್​​ ಬಿಡುಗಡೆ ದಿನಾಂಕವನ್ನು ಚಿತ್ರ ತಯಾರಕರು ಘೋಷಿಸಿದ್ದಾರೆ. ಡಿಸೆಂಬರ್ 22 ರಂದು ಸಲಾರ್​​ ಸಿನಿಮಾ ತೆರೆಗಪ್ಪಳಿಸಲಿದೆ. ಬಾಲಿವುಡ್​ ಕಿಂಗ್​​ ಖಾನ್ ಶಾರುಖ್​​ ಅಭಿನಯದ ಡಂಕಿ ಕೂಡ ಡಿಸೆಂಬರ್​​ 22ರಂದೇ ಬಿಡುಗಡೆ ಆಗಲಿದೆ. ಕ್ರಿಸ್ಮಸ್ ವೇಳೆ ಬಾಕ್ಸ್​​ ಆಫೀಸ್​ನಲ್ಲಿ ಶಾರುಖ್​​ ವರ್ಸಸ್ ಪ್ರಭಾಸ್ ಸಿನಿಮಾ ಮಧ್ಯೆ ಪೈಪೋಟಿ ನಡೆಯುವುದು ಪಕ್ಕಾ ಆಗಿದೆ.

ಇಂದು ಸಲಾರ್ ( Salaar: Part 1 Ceasefire)​ ಚಿತ್ರ ತಯಾರಕರಾದ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದೆ. ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​ಗಳಲ್ಲಿ ಪ್ರಭಾಸ್​ ಪೋಸ್ಟರ್​ ಶೇರ್ ಮಾಡಿರುವ ಹೊಂಬಾಳೆ ಫಿಲ್ಮ್ಸ್, ''ಕಮಿಂಗ್​ ಸೂನ್​​, ಸಲಾರ್​​ ಭಾಗ 1 ವಿಶ್ವಾದ್ಯಂತ ಡಿಸೆಂಬರ್​ 22ರಂದು ತೆರೆಕಾಣಲಿದೆ'' ಎಂದು ಬರೆದುಕೊಂಡಿದೆ.

ಬಿಡುಗಡೆ ದಿನಾಂಕ ಘೋಷಿಸಿದ ಸಲಾರ್ ತಂಡ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್ ಅವರ ಲೇಟೆಸ್ಟ್ ಪೋಸ್ಟರ್ ಅನ್ನು ಸಹ ಹಂಚಿಕೊಂಡಿದೆ. 44ರ ಹರೆಯದ ಸೂಪರ್‌ ಸ್ಟಾರ್ ಪ್ರಭಾಸ್​​ ಮುಖದ ಮೇಲೆ ಗಂಭೀರ ನೋಟವಿದ್ದು, ದೇಹ ರಕ್ತಸಿಕ್ತವಾಗಿದೆ. ನಟನ ರಗಡ್​ ಲುಕ್​​ನಿಂದಾಗಿ ಇದೊಂದು ಕಂಪ್ಲೀಟ್​ ಆ್ಯಕ್ಷನ್​​ ಪ್ಯಾಕ್ಡ್​ ಸಿನಿಮಾ ಅನ್ನೋದನ್ನು ಮತ್ತೊಮ್ಮೆ ಖಚಿತಪಡಿಸಿದೆ.

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ರೂಪವತಿ ಮೌನಿ ರಾಯ್​​​: ಕೆಜಿಎಫ್​​​ ಚೆಲುವೆಯ ಹಳೇ ಫೋಟೋ ನೋಡಿದ್ದೀರಾ?!

ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಬಹುನಿರೀಕ್ಷಿತ ಚಿತ್ರ ರೆಡಿಯಾಗುತ್ತಿದೆ. ಕೆಜಿಎಫ್​ ಖ್ಯಾತಿ ಮತ್ತು ಪ್ರಶಾಂತ್ ನೀಲ್ ಬಗ್ಗೆ ಈಗಾಗಲೇ ಅಭಿಮಾನಿಗಳಿಗೆ ಹೆಚ್ಚಾಗಿ ಹೇಳಬೇಕಿಲ್ಲ. ಹೊಂಬಾಳೆ ಫಿಲ್ಮ್ಸ್​, ಪ್ರಶಾಂತ್​ ನೀಲ್​​, ಪ್ರಭಾಸ್​ ಕಾಂಬೋದಲ್ಲಿ ಸಿನಿಮಾ ಬರುತ್ತಿರುವುದರಿಂದ ಪ್ರೇಕ್ಷಕರ ಕುತೂಹಲ ಶಿಖರದಷ್ಟಿದೆ. ಪ್ರಭಾಸ್ ಕೊನೆಯ ಚಿತ್ರ ಆದಿಪುರುಷ್​​ ಹಿನ್ನೆಡೆ ಕಂಡಿದ್ದು, ಮುಂದಿನ ಸಿನಿಮಾ ಗೆಲ್ಲಲಿದೆ ಅನ್ನೋದು ಅಭಿಮಾನಿಗಳ ಗಟ್ಟಿ ವಿಶ್ವಾಸ. ಈ ಚಿತ್ರವು ಪ್ರಭಾಸ್ ವೃತ್ತಿಜೀವನದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ದೃಢ ವಿಶ್ವಾಸವಿದೆ. ಆದಾಗ್ಯೂ ಈ ವರ್ಷದ ಕೊನೆಯಲ್ಲಿ ಎಸ್‌ಆರ್‌ಕೆ ಅಭಿನಯದ ಡಂಕಿ ಸಿನಿಮಾ ಕೂಡ ಬಿಡುಗಡೆ ಆಗೋ ಹಿನ್ನೆಲೆ, ಸಲಾರ್ ಎದುರಿಸಬಹುದಾದ ಸಂಭಾವ್ಯ ಸ್ಪರ್ಧೆಯನ್ನು ಅಲ್ಲಗೆಳೆಯುವಂತಿಲ್ಲ. ಎಸ್​ಆರ್​ಕೆ ಅವರ ಕೊನೆಯ ಎರಡು ಚಿತ್ರಗಳಾದ ಪಠಾಣ್​ ಮತ್ತು ಜವಾನ್​ ಎರಡೂ ಕೂಡ ಸಾವಿರ ಕೋಟಿ ರೂ. ಕ್ಲಬ್​ ಸೇರಿದ್ದು, ಮುಂದಿನ ಸಿನಿಮಾ ಕೂಡ ಸಲಾರ್​​ಗೆ ಸಖತ್​ ಫೈಟ್​ ಕೊಡಲಿದೆ.

ಇದನ್ನೂ ಓದಿ: 'ಕಾವೇರಿ'ದ ಬಂದ್: ನಟ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ

Last Updated : Sep 29, 2023, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.