ಭೀಮಾವರಂ(ಆಂಧ್ರಪ್ರದೇಶ): ರೆಬೆಲ್ ಸ್ಟಾರ್ ಜನಪ್ರಿಯತೆಯ ನಟ ಪ್ರಭಾಸ್ ಮತ್ತು ನಿರ್ದೇಶಕ ಮಾರುತಿ ಅವರ ಮುಂಬರುವ ಚಿತ್ರದ ಹೆಸರು ಅಂತಿಮಗೊಂಡಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಹೊಸ ಸಿನಿಮಾ ಹೆಸರನ್ನು ನಿರ್ಮಾಪಕರು ಘೋಷಿಸಿದ್ದಾರೆ. ಈ ಚಿತ್ರಕ್ಕೆ 'ರಾಜಾಸಾಬ್' ಎಂದು ಟೈಟಲ್ ಇಡಲಾಗಿದೆ. ಆಂಧ್ರಪ್ರದೇಶದ ಭೀಮಾವರಂ ಮೈದಾನದಲ್ಲಿ ಬೃಹತ್ ಡಿಜಿಟಲ್ ಕಟೌಟ್ (ಎಲ್‌ಇಡಿ ಸ್ಕ್ರೀನ್) ಮೂಲಕ ನಿರ್ಮಾಪಕರು ಚಿತ್ರದ ಹೆಸರು ಮತ್ತು ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದರು.
-
#TheRajaSaab It is… 👑
— People Media Factory (@peoplemediafcy) January 15, 2024 " class="align-text-top noRightClick twitterSection" data="
Wishing you all a very Happy and Joyous Sankranthi! ❤️
𝐀 𝐑𝐞𝐛𝐞𝐥’𝐬 𝐄𝐧𝐭𝐞𝐫𝐭𝐚𝐢𝐧𝐦𝐞𝐧𝐭 𝐄𝐱𝐩𝐥𝐨𝐝𝐞𝐬 𝐖𝐨𝐫𝐥𝐝𝐰𝐢𝐝𝐞 𝐒𝐨𝐨𝐧 🌋#PrabhasPongalFeast #Prabhas
A @DirectorMaruthi film
Produced by @Vishwaprasadtg
A @MusicThaman Musical… pic.twitter.com/kvmUxIcXFC
">#TheRajaSaab It is… 👑
— People Media Factory (@peoplemediafcy) January 15, 2024
Wishing you all a very Happy and Joyous Sankranthi! ❤️
𝐀 𝐑𝐞𝐛𝐞𝐥’𝐬 𝐄𝐧𝐭𝐞𝐫𝐭𝐚𝐢𝐧𝐦𝐞𝐧𝐭 𝐄𝐱𝐩𝐥𝐨𝐝𝐞𝐬 𝐖𝐨𝐫𝐥𝐝𝐰𝐢𝐝𝐞 𝐒𝐨𝐨𝐧 🌋#PrabhasPongalFeast #Prabhas
A @DirectorMaruthi film
Produced by @Vishwaprasadtg
A @MusicThaman Musical… pic.twitter.com/kvmUxIcXFC#TheRajaSaab It is… 👑
— People Media Factory (@peoplemediafcy) January 15, 2024
Wishing you all a very Happy and Joyous Sankranthi! ❤️
𝐀 𝐑𝐞𝐛𝐞𝐥’𝐬 𝐄𝐧𝐭𝐞𝐫𝐭𝐚𝐢𝐧𝐦𝐞𝐧𝐭 𝐄𝐱𝐩𝐥𝐨𝐝𝐞𝐬 𝐖𝐨𝐫𝐥𝐝𝐰𝐢𝐝𝐞 𝐒𝐨𝐨𝐧 🌋#PrabhasPongalFeast #Prabhas
A @DirectorMaruthi film
Produced by @Vishwaprasadtg
A @MusicThaman Musical… pic.twitter.com/kvmUxIcXFC
ಭೀಮಾವರಂ ಪಂಡೆಂಕೋಡಿ ಬ್ಯಾರಿ ಮೈದಾನದಲ್ಲಿ 'ರಾಜಾಸಾಬ್' ಮೇಕರ್ಸ್ ಬೃಹತ್ ಡಿಜಿಟಲ್ ಕಟೌಟ್ ನಿರ್ಮಿಸಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಮೈದಾನಕ್ಕೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಣೆ ನಡೆದಿದೆ. ಡಿಜಿಟಲ್ ಕಟೌಟ್ ಮೂಲಕ ಸಿನಿಮಾ ಅಪ್‌ಡೇಟ್, ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು ಟಾಲಿವುಡ್‌ನಲ್ಲಿ ಇದೇ ಮೊದಲು ಎಂಬುದು ವಿಶೇಷ.
-
BGM Movie Lo Sarriga Vinipimchaledhu Kaani Ekkada Vintunte Ravi Basur gaadu Chavadengadu Anipisthundhi
— ⚡SALAAR RAISAR ⚡ (@Banny367_) January 15, 2024 " class="align-text-top noRightClick twitterSection" data="
At Bhimavaram 🔥🔥🔥🔥#Prabhas #PrabhasMaruthi pic.twitter.com/XUXXaEPiCY
">BGM Movie Lo Sarriga Vinipimchaledhu Kaani Ekkada Vintunte Ravi Basur gaadu Chavadengadu Anipisthundhi
— ⚡SALAAR RAISAR ⚡ (@Banny367_) January 15, 2024
At Bhimavaram 🔥🔥🔥🔥#Prabhas #PrabhasMaruthi pic.twitter.com/XUXXaEPiCYBGM Movie Lo Sarriga Vinipimchaledhu Kaani Ekkada Vintunte Ravi Basur gaadu Chavadengadu Anipisthundhi
— ⚡SALAAR RAISAR ⚡ (@Banny367_) January 15, 2024
At Bhimavaram 🔥🔥🔥🔥#Prabhas #PrabhasMaruthi pic.twitter.com/XUXXaEPiCY
'ಡಾರ್ಲಿಂಗ್', 'ಬುಜ್ಜಿಗಾಡು' ಚಿತ್ರಗಳಂತೆ 'ರಾಜಾಸಾಬ್' ಚಿತ್ರದಲ್ಲೂ ವಿಂಟೇಜ್ ಶೈಲಿಯಲ್ಲಿ ಪ್ರಭಾಸ್ ಅಭಿನಯವಿರಲಿದೆ ಎಂದು ನಿರ್ದೇಶಕ ಮಾರುತಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅದರಂತೆ, ಫಸ್ಟ್ ಲುಕ್ ಪೋಸ್ಟರ್ನಲ್ಲಿ ನಟ ಲುಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ಆ್ಯಕ್ಷನ್ ಮೋಡ್ ಬದಲು ಕೂಲ್ ಮತ್ತು ಕಾಮಿಡಿ ಟೈಮಿಂಗ್ ಮೂಲಕ ಮನರಂಜನೆ ನೀಡುತ್ತಾರಂತೆ.
ಈಗಾಗಲೇ ಶೂಟಿಂಗ್ ಶುರುವಾಗಿದೆ. ನಾಯಕಿ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ. ಇತರ ನಟರ ವಿವರಗಳೂ ಇನ್ನಷ್ಟೇ ತಿಳಿದುಬರಬೇಕಿದೆ. ತಮನ್ ಸಂಗೀತವಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ.ವಿಶ್ವಪ್ರಸಾದ್ ಚಿತ್ರ ನಿರ್ಮಿಸುತ್ತಿದ್ದಾರೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ತಯಾರಾಗುತ್ತಿದೆ.
-
👑👑#TheRajaSaab #Prabhas pic.twitter.com/bzjP6Ttye8
— Prabhas Trends (@TrendsPrabhas) January 15, 2024 " class="align-text-top noRightClick twitterSection" data="
">👑👑#TheRajaSaab #Prabhas pic.twitter.com/bzjP6Ttye8
— Prabhas Trends (@TrendsPrabhas) January 15, 2024👑👑#TheRajaSaab #Prabhas pic.twitter.com/bzjP6Ttye8
— Prabhas Trends (@TrendsPrabhas) January 15, 2024
ಪ್ರಭಾಸ್ ಕಲ್ಕಿ 2898 ಎಡಿ: ಮತ್ತೊಂದೆಡೆ, ಡಾರ್ಲಿಂಗ್ ನಾಗ್ ಅವರು ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರ ಮೇ 9, 2024ರಂದು ಬಿಡುಗಡೆಯಾಗಲಿದೆ ಎಂದು ತಯಾರಕರು ಇತ್ತೀಚೆಗೆ ಘೋಷಿಸಿದ್ದರು. ವೈಜ್ಞಾನಿಕ ಕಾದಂಬರಿ ಜಾನರ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮುಂತಾದವರು ನಟಿಸುತ್ತಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವನಿ ದತ್ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ಪೌರಕಾರ್ಮಿಕರೊಂದಿಗೆ ಸಂಕ್ರಾಂತಿ ಆಚರಿಸಿದ ಪ್ರೇಮ, ರಾಗಿಣಿ ದ್ವಿವೇದಿ: ಫೋಟೋಗಳು