ಕನ್ನಡ ಚಿತ್ರರಂಗದ ಟ್ಯಾಲೆಟೆಂಡ್ ಡೈರೆಕ್ಟರ್, ಲಿರಿಕ್ಸ್ ರೈಟರ್ ಕಮ್ ಪ್ರೊಡ್ಯೂಸರ್ ಪವನ್ ಒಡೆಯರ್ ಈಗ ಬಾಲಿವುಡ್ನತ್ತ ಹೆಜ್ಜೆ ಇಟ್ಟಿದ್ದಾರೆ. ಚಂದನವನದ ಚಿತ್ರರಸಿಕರಿಗೆ ಗೋವಿಂದಾಯ ನಮಃ, ರಣವಿಕ್ರಮ, ಗೂಗ್ಲಿ, ನಟಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಇವರು ಕೊಟ್ಟಿದ್ದಾರೆ. ಕಳೆದ 10 ವರ್ಷಗಳಿಂದ ಕನ್ನಡದ ಸ್ಟಾರ್ ನಟರಿಗೆ ಆ್ಯಕ್ಷನ್ ಕಟ್ ಹೇಳಿರುವ ಇವರೀಗ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.
ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೊದಲ ಬಾಲಿವುಡ್ ಸಿನಿಮಾಗೆ 'ನೋಟರಿ' ಎಂದು ಹೆಸರಿಡಲಾಗಿದೆ. ಸೂಪರ್ ಹಿಟ್ ಶೋ ಅರಣ್ಯಕಾದಲ್ಲಿ ನಟಿಸಿರುವ ಪರಂಬ್ರತ ಚಟ್ಟೋಪಾಧ್ಯಾಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಸಹ ಹೊತ್ತಿದ್ದಾರೆ. ಗುಪ್ತ್, ಮೋಹರಾ, ಶೆರ್ ಷಾ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳ ಖ್ಯಾತ ನಿರ್ಮಾಪಕ ಶಬೀರ್ ಬಾಕ್ಸ್ ವಾಲ್ ಅವರ ಕಾಶ್ ಎಂಟರ್‌ಟೈನ್‌ಮೆಂಟ್ ಜೊತೆಗೂಡಿ ಪವನ್ ಒಡೆಯರ್ ತಮ್ಮದೇ ಒಡೆಯರ್ ಮೂವೀಸ್ ಬ್ಯಾನರ್ ನಡಿ ಹೊಸ ಚಿತ್ರಕ್ಕೆ ಹಣ ಹೂಡಿದ್ದಾರೆ.
ಸದ್ಯ ರೆಮೋ ಸಿನಿಮಾ ರಿಲೀಸ್ಗೆ ಎದುರು ನೋಡುತ್ತಿದ್ದು, ಮೇ ತಿಂಗಳಲ್ಲಿ ಈ ಚಿತ್ರವನ್ನು ತೆರೆಗೆ ತರುವ ತಯಾರಿಯಲ್ಲಿದ್ದಾರೆ. ಇದರ ಜೊತೆಗೆ, ವಿವಿಧ ದೇಶಗಳಲ್ಲಿ ಪ್ರದರ್ಶನ ಕಂಡು 12 ಪ್ರಶಸ್ತಿಗೆ ಭಾಜನವಾಗಿರುವ 'ಡೊಳ್ಳು' ಸಿನಿಮಾವನ್ನು ಬಿಗ್ ಸ್ಕ್ರೀನ್ಗೆ ತರಲಿದ್ದಾರೆ.
ಇದನ್ನೂ ಓದಿ: ಬಳಕೆದಾರರ ಅನುಕೂಲಕ್ಕಾಗಿ 'ಟು ಥಂಬ್ಸ್ ಅಪ್' ಬಟನ್ ಪರಿಚಯಿಸಿದ ನೆಟ್‌ಫ್ಲಿಕ್ಸ್