ETV Bharat / entertainment

'ಟೈಗರ್ ನಾಗೇಶ್ವರ ರಾವ್'ನಲ್ಲಿ ಪವನ್ ಕಲ್ಯಾಣ್ ಮಾಜಿ ಪತ್ನಿ.. ರೇಣು ದೇಸಾಯಿ ಇಂಟ್ರೊಡಕ್ಷನ್ ಟೀಸರ್ ರಿಲೀಸ್ - renu desai come back to movie

ವಂಶಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಟೈಗರ್ ನಾಗೇಶ್ವರ ರಾವ್'ಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಎಂಟ್ರಿ ಕೊಟ್ಟಿದ್ದಾರೆ.

renu desai
ನಟಿ ರೇಣು ದೇಸಾಯಿ
author img

By

Published : Sep 29, 2022, 7:21 PM IST

Updated : Sep 29, 2022, 7:32 PM IST

ಟಾಲಿವುಡ್ ಚಿತ್ರರಂಗ ಮಾಸ್ ಮಹಾರಾಜ ರವಿತೇಜ್ ಅಕೌಂಟ್​​ನಲ್ಲಿರುವ ಬಹುನಿರೀಕ್ಷಿತ ಸಿನಿಮಾ 'ಟೈಗರ್ ನಾಗೇಶ್ವರ ರಾವ್'. ವಂಶಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಎಂಟ್ರಿ ಕೊಟ್ಟಿದ್ದಾರೆ. ರೇಣು ದೇಸಾಯಿ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದು, ಅವರ ಇಂಟ್ರೊಡಕ್ಷನ್ ಟೀಸರ್ ರಿಲೀಸ್ ಆಗಿದೆ.

ಸಾಮಾಜಿಕ ಕಾರ್ಯಕರ್ತೆ, ಲೇಖಕಿ, ಅಸ್ಪೃಶತೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಹೇಮಲತಾ ಲವಣಂ ಪಾತ್ರದಲ್ಲಿ ರೇಣು ದೇಸಾಯಿ ಅಭಿನಯಿಸುತ್ತಿದ್ದಾರೆ. ಶುಭ್ರ ಬಿಳಿ ಬಣ್ಣದ ಸೀರೆಯುಟ್ಟು ಪವರ್ ಫುಲ್ ಎಂಟ್ರಿ ಕೊಟ್ಟಿರುವ ರೇಣು ದೇಸಾಯಿ ಟೀಸರ್ ಝಲಕ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

renu desai
ನಟಿ ರೇಣು ದೇಸಾಯಿ

ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ನಿರ್ಮಾಣ ಮಾಡಿ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ಅಭಿಷೇಕ್ ಅರ್ಗವಾಲ್ ತಮ್ಮದೇ 'ಅಭಿಷೇಕ್ ಅಗರ್ವಾಲ್ ಆರ್ಟ್ಸ್' ಬ್ಯಾನರ್ ಮೂಲಕ 'ಟೈಗರ್ ನಾಗೇಶ್ವರ ರಾವ್' ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೂಲಕ ರವಿ ತೇಜ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ.

  • " class="align-text-top noRightClick twitterSection" data="">

ಇದನ್ನೂ ಓದಿ: ಸ್ನೇಹಾ ರೆಡ್ಡಿ ಜನ್ಮದಿನ: ಗೋಲ್ಡನ್​ ಟೆಂಪಲ್​ಗೆ ಭೇಟಿ ಕೊಟ್ಟ ಅಲ್ಲು ಅರ್ಜುನ್ ಕುಟುಂಬ

ಕುಖ್ಯಾತ ಹಾಗೂ ಧೈರ್ಯಶಾಲಿ ಕಳ್ಳನ ಕಥಾಹಂದರ ಒಳಗೊಂಡಿರುವ ಈ ಚಿತ್ರದಲ್ಲಿ ರವಿ ತೇಜ್ ಸಂಪೂರ್ಣ ಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಗೆ ಜೋಡಿಯಾಗಿ ನೂಪುರ್ ಸನೋನ್, ಗಾಯತ್ರಿ ಭಾರದ್ವಾಜ್ ನಟಿಸುತ್ತಿದ್ದು, ರೆಟ್ರೋ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ. ಆರ್. ಮ್ಯಾಥಿ ಐಎಸ್ಸಿ ಛಾಯಾಗ್ರಹಣ, ಜಿ.ವಿ ಪ್ರಕಾಶ್ ಕುಮಾರ್ ಸಂಗೀತ ನಿರ್ದೇಶನ, ಶ್ರೀಕಾಂತ್ ವಿಸ್ಸಾ ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಮಯಾಂಕ್ ಸಿಂಘಾನಿಯಾ ಸಹ-ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

Last Updated : Sep 29, 2022, 7:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.