ETV Bharat / entertainment

'ಶ್ರಾವಣಿ ಸುಬ್ರಮಣ್ಯ'ಕ್ಕೆ 10 ವರ್ಷ: 'ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ' ಅನೌನ್ಸ್ - ಶ್ರಾವಣಿ ಸುಬ್ರಮಣ್ಯ

ನಿರ್ಮಾಪಕ ಕೆ.ಎ ಸುರೇಶ್ ಅವರು 'ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ' ಸಿನಿಮಾ ಅನೌನ್ಸ್ ಮಾಡಿದ್ದಾರೆ.

Once More Shravani Subramanya movie Announced
'ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ' ಅನೌನ್ಸ್
author img

By ETV Bharat Karnataka Team

Published : Dec 28, 2023, 2:20 PM IST

ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ಮೂಡಿ ಬರುತ್ತಿವೆ. ಸೂಪರ್ ಹಿಟ್ ಆದ ಸಿನಿಮಾಗಳು ದಶಕ ಪೂರೈಸುತ್ತಿವೆ. ಈ ಸಾಲಿಗೆ ಗೋಲ್ಡನ್ ಸ್ಟಾರ್ ಗಣೇಶ್, ಅಮೂಲ್ಯ, ಅನಂತ್ ನಾಗ್, ತಾರಾ ಹಾಗೂ ಸಾಧುಕೋಕಿಲ ಪ್ರಮುಖ ಪಾತ್ರದಲ್ಲಿದ್ದ 'ಶ್ರಾವಣಿ ಸುಬ್ರಮಣ್ಯ' ಸೇರಿದೆ.

'ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ' ಅನೌನ್ಸ್: ಈ ಸಿನಿಮಾ ಬಿಡುಗಡೆ ಆಗಿ ಬುಧವಾರಕ್ಕೆ ಹತ್ತು ವರ್ಷಗಳಾಗಿದೆ. ದಶಕದ ಸಂಭ್ರಮದ ನೆನಪಿನಲ್ಲಿ ನಿರ್ಮಾಪಕ ಕೆ.ಎ ಸುರೇಶ್ ಅವರು ಕ್ಯಾಚೀ‌ ಟೈಟಲ್ ಹೊಂದಿರುವ 'ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ' ಎಂಬ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಈ ಬಗ್ಗೆ ಸಿನಿಪ್ರಿಯರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

Once More Shravani Subramanya movie Announced
'ಶ್ರಾವಣಿ ಸುಬ್ರಮಣ್ಯ'ಕ್ಕೆ 10 ವರ್ಷ

2013ರ ಡಿಸೆಂಬರ್ 27ರಂದು ತೆರೆಕಂಡಿದ್ದ 'ಶ್ರಾವಣಿ ಸುಬ್ರಮಣ್ಯ' ಸೂಪರ್ ಹಿಟ್ ಆಗಿತ್ತು. ಗಣೇಶ್ - ಅಮೂಲ್ಯ ಜೋಡಿಯನ್ನು ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಮೆಚ್ಚಿಕೊಂಡಿದ್ದರು. ಸಿನಿಮಾ ಶತಕ ಪೂರೈಸುವಲ್ಲಿ ಯಶಸ್ವಿ ಆಯಿತು. ಇದೀಗ ಸುರೇಶ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ 'ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ' ಅಧಿಕೃತವಾಗಿ ಘೋಷಣೆ ಆಗಿದೆ. ಸದ್ಯ ಅನಾವರಣಗೊಂಡಿರುವ ಕಲರ್ ಫುಲ್ ಪೋಸ್ಟರ್ ಸಿನಿಮಾ ಮೇಲಿನ ಕೂತೂಹಲ ಹೆಚ್ಚಿಸಿದೆ. ಈ ಹಿಂದಿನ ಶ್ರಾವಣಿ ಸುಬ್ರಮಣ್ಯ ಭರ್ಜರಿ ಯಶಸ್ಸು ಕಂಡ ಹಿನ್ನೆಲೆ 'ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ' ಕೂಡ ಡೊಡ್ಡ ಮಟ್ಟದ ಗೆಲುವು ಕಾಣಲಿದೆ ಅನ್ನೋದು ಸಿನಿಪ್ರಿಯರ ಅನಿಸಿಕೆ. ಆದ್ರೆ ಈ ಚಿತ್ರದಲ್ಲಿ ಶ್ರಾವಣಿ ಮತ್ತು ಸುಬ್ರಮಣ್ಯ ಯಾರು? ಅನ್ನೋದರ ಸುಳಿವನ್ನು ಮಾತ್ರ ನಿರ್ಮಾಪಕರು ಬಿಟ್ಟು ಕೊಟ್ಟಿಲ್ಲ. ಹಂತ ಹಂತವಾಗಿ ಸಿನಿಮಾದ ಮಾಹಿತಿ ಹೊರಬರಲಿದೆ.

ಇದನ್ನೂ ಓದಿ: 2023ರಲ್ಲಿ ಸೂಪರ್ ಹಿಟ್ ಸಿನಿಮಾ ನೀಡಿದ ಶ್ರೀಲೀಲಾ; ಗುಂಟೂರು ಕಾರಂ ರಿಲೀಸ್​ಗೆ ರೆಡಿ

ಶ್ರಾವಣಿ ಸುಬ್ರಮಣ್ಯ ಸಿನಿಮಾವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಮಂಜು ಸ್ವರಾಜ್ ಅವರೇ ಹೊಸ ಶ್ರಾವಣಿ ಸುಬ್ರಮಣ್ಯ ಜೋಡಿಗೂ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಕಲಾವಿದರ ಆಯ್ಕೆಗಾಗಿ ಚಿತ್ರತಂಡ ಆಡಿಷನ್ ಕರೆದಿದೆ. ಇದೊಂದು ಯೂತ್ ಸಬ್ಜೆಕ್ಟ್, ಲವ್ ಕಮ್ ಫ್ಯಾಮಿಲಿ ಸ್ಟೋರಿ ಆಗಿರುವುದರಿಂದ ಚಿತ್ರದ ನಾಯಕ, ನಾಯಕಿ ಪಾತ್ರಕ್ಕೆ ಹುಡುಕಾಟ ಶುರುವಾಗಿದೆ. 20 ವರ್ಷದ ಆಸುಪಾಸಿನಲ್ಲಿದ್ದವರು ಹೊಸ ಶ್ರಾವಣಿ ಸುಬ್ರಮಣ್ಯ ಪಾತ್ರಕ್ಕೆ ಜೀವ ತುಂಬಲು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ವಿಜಯಕಾಂತ್ ಸಿನಿಪಯಣ​: 150 ಸಿನಿಮಾ, ಒಂದೇ ವರ್ಷ 18 ಚಿತ್ರ ತೆರೆಗೆ

ಎಲ್ಲಾ ಅಂದುಕೊಂಡಂತೆ ನಡೆದರೆ ಹೊಸ ವರ್ಷದಲ್ಲಿ ಹೊಸ 'ಶ್ರಾವಣಿ ಸುಬ್ರಮಣ್ಯ'ರ ಲವ್ ಕಹಾನಿ ಶುರುವಾಗಲಿದೆ. ಉಳಿದ ಪಾತ್ರವರ್ಗ ಹಾಗೂ ತಾಂತ್ರಿಕ ವರ್ಗದ ಕುರಿತು ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ. ಸದ್ಯ ರಿವೀಲ್ ಆಗಿರುವ ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ ಪೋಸ್ಟರ್​ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದ್ದು, ಹೊಸ ಜೋಡಿ ಮೋಡಿ ಮಾಡಲಿದೆ ಎಂಬುದು ಸಿನಿಪ್ರಿಯರ ವಿಶ್ವಾಸ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.