ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪ್ರಥಮ್ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ. 'ಒಳ್ಳೆ ಹುಡ್ಗ' ಅಂತಾನೇ ಫೇಮಸ್ ನೊಡಿ. ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ ನಾಲ್ಕರ ವಿಜೇತರೂ ಹೌದು. ಇದೀಗ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹೌದು, ಇತ್ತೀಚೆಗಷ್ಟೇ ಶುಭಾರಂಭ ಮಾಡಿರುವ ಪಾಪುಲರ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10ಕ್ಕೆ ಸಿಪಾಯಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಪ್ರೋಮೋ: ಬಿಗ್ ಬಾಸ್ ಸೀಸನ್ ನಾಲ್ಕರ ವಿಜೇತ 'ಒಳ್ಳೆ ಹುಡ್ಗ' ಪ್ರಥಮ್ ಅವರ ನಡೆ ನುಡಿ ವಿಭಿನ್ನ. ಬಿಗ್ ಬಾಸ್ ಮನೆಯಲ್ಲಿ ಇವರು ನಡೆದುಕೊಳ್ಳುತ್ತಿದ್ದ ರೀತಿಗೆ ಒಂದು ದೊಡ್ಡ ಫ್ಯಾನ್ ಬೇಸ್ ಇತ್ತು. ಹಾವ ಭಾವ ಕೊಂಚ ವಿಚಿತ್ರ ಎನಿಸಿದರೂ, ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರು. ಕೊನೆಗೆ ಬಿಗ್ ಬಾಸ್ ನಾಲ್ಕರ ಟ್ರೋಫಿಯನ್ನೂ ಗೆದ್ದರು. ಇತ್ತೀಚೆಗಷ್ಟೇ ನಡೆದ ಬಿಗ್ ಬಾಸ್ ಸೀಸನ್ 10ರ ಗ್ರ್ಯಾಂಡ್ ಲಾಂಚ್ ಈವೆಂಟ್ಗೆ ಪ್ರಥಮ್ ಆಮಿಸಿದ್ದರು. ಇದೀಗ ಮತ್ತೊಮ್ಮೆ ಲಾರ್ಡ್ ಪ್ರಥಮ್ ಆಗಿ ದೊಡ್ಡನೆ ಪ್ರವೇಶಿಸಿದ್ದಾರೆ. ಪ್ರಥಮ್ ಅವರಿಗೆ ಭವ್ಯ ಸ್ವಾಗತ ಕೋರಲಾಗಿದೆ. ಅವರು ಎಂಟ್ರಿ ಕೊಟ್ಟ ಶೈಲಿಗೂ ಮೆಚ್ಚುಗೆ ವ್ಯಕ್ತವಾಗಿದೆ. ಕಲರ್ಸ್ ಕನ್ನಡ ಪ್ರೋಮೋ ಅನಾವರಣಗೊಳಿಸಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
-
ತಮಾಷೆ ಮಾಡಿದ್ರೆ 'ಅಮಾಸೆ' ತೋರಿಸೋ ಲಾರ್ಡ್ ಪ್ರಥಮ್ ಬಂದ್ರು.
— Colors Kannada (@ColorsKannada) October 12, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep pic.twitter.com/6qK3W5EKWB
">ತಮಾಷೆ ಮಾಡಿದ್ರೆ 'ಅಮಾಸೆ' ತೋರಿಸೋ ಲಾರ್ಡ್ ಪ್ರಥಮ್ ಬಂದ್ರು.
— Colors Kannada (@ColorsKannada) October 12, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep pic.twitter.com/6qK3W5EKWBತಮಾಷೆ ಮಾಡಿದ್ರೆ 'ಅಮಾಸೆ' ತೋರಿಸೋ ಲಾರ್ಡ್ ಪ್ರಥಮ್ ಬಂದ್ರು.
— Colors Kannada (@ColorsKannada) October 12, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9 #BBK10 #HappyBiggBoss #KichchaSudeep pic.twitter.com/6qK3W5EKWB
ಲಾರ್ಡ್ ಪ್ರಥಮ್.... ಸಾಮಾಜಿಕ ಜಾಲತಾಣಗಳಲ್ಲೂ ಪ್ರೋಮೋ ಶೇರ್ ಮಾಡಿರುವ ಕಲರ್ಸ್ ಕನ್ನಡ, ''ತಮಾಷೆ ಮಾಡಿದ್ರೆ 'ಅಮಾಸೆ' ತೋರಿಸೋ ಲಾರ್ಡ್ ಪ್ರಥಮ್ ಬಂದ್ರು'' ಎಂಬ ಕ್ಯಾಪ್ಷನ್ ಕೊಟ್ಟಿದೆ. ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 9.30 ಕ್ಕೆ ಮತ್ತು ಶನಿವಾರ - ಭಾನುವಾರ ರಾತ್ರಿ 9ಕ್ಕೆ ಬಿಗ್ ಬಾಸ್ ಸೀಸನ್ ಸೀಸನ್ 10 ಪ್ರಸಾರ ಆಗುತ್ತಿದೆ.
ಇದನ್ನೂ ಓದಿ: ಪ್ರೀತಿಯ ಧಾರೆಯೆರೆದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ ಅಮಿತಾಭ್ ಬಚ್ಚನ್
ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪ್ರೋಮೋಗೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು, ''ಪ್ರಥಮ್ ಅಂತಹ ಮತ್ತೋರ್ವ ಸ್ಪರ್ಧಿ ಬಿಗ್ ಬಾಸ್ ಮನೆಗೆ ಬರಲು ಸಾಧ್ಯವೇ ಇಲ್ಲವೇನೋ.. ಬಿಗ್ ಬಾಸ್ಗೆ ಒಬ್ಬನೇ ಲಾರ್ಡ್ ಪ್ರಥಮ್'' ಎಂದು ಬರೆದಿದ್ದಾರೆ. ಮತ್ತೋರ್ವರು ಕಾಮೆಂಟ್ ಮಾಡಿ ''ಈ ಸೀಸನ್ ನಿಜವಾಗ್ಲೂ ಹಬ್ಬಾನೆ'' ಎಂದು ಬರೆದಿದ್ದಾರೆ. ಹೀಗೆ ನೆಟ್ಟಿಗರು ನಾನಾ ತರನಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಹೆಚ್ಚಿನ ಭಾರತೀಯರು ಥಿಯೇಟರ್ಗಳಲ್ಲೇ ಸಿನಿಮಾ ವೀಕ್ಷಿಸಲು ಬಯಸುತ್ತಾರೆ: ಅಧ್ಯಯನ
ಅಭಿನಯದ ಚಕ್ರವರ್ತಿ ಸುದೀಪ್ ಅವರು ನಡೆಸಿಕೊಡುವ ಕನ್ನಡ ಬಿಗ್ ಬಾಸ್ಗೆ ದೊಡ್ಡ ಸಂಖ್ಯೆಯ ಪ್ರೇಕ್ಷಕರಿದ್ದಾರೆ. 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಇಂದು 'ಒಳ್ಳೆ ಹುಡ್ಗ' ಪ್ರಥಮ್ ಅವರ ಸಂಚಿಕೆ ಪ್ರಸಾರ ಕಾಣಲಿದ್ದು, ಅಭಿಮಾನಿಗಳು ಕುತೂಹಲ ವ್ಯಕ್ತಪಡಿಸಿದ್ದಾರೆ.