ETV Bharat / entertainment

ತಂದೆ ಶಾರುಖ್​ ಖಾನ್​ ಡ್ಯಾನ್ಸ್​ ನೋಡಿ ಖುಷಿ ಪಟ್ಟ ಆರ್ಯನ್​ ಖಾನ್​; ವಿಡಿಯೋ ವೈರಲ್​ - ಈಟಿವಿ ಭಾರತ ಕನ್ನಡ

ಎನ್​ಎಂಎಸಿಸಿ ಕಾರ್ಯಕ್ರಮದಲ್ಲಿ ಶಾರುಖ್​ ಖಾನ್​ ಡ್ಯಾನ್ಸ್​ ನೋಡಿ ಅವರ ಪುತ್ರ ಆರ್ಯನ್​ ಖಾನ್​ ಎಂಜಾಯ್​ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

viral video
ಶಾರುಖ್​ ಖಾನ್​ ಡ್ಯಾನ್ಸ್​ ನೋಡಿ ಖುಷಿ ಪಟ್ಟ ಆರ್ಯನ್​ ಖಾನ್
author img

By

Published : Apr 4, 2023, 1:27 PM IST

ಮುಂಬೈನಲ್ಲಿ ಮೂರು ದಿನಗಳ ಕಾಲ ನೀತಾ ಮುಖೇಶ್​ ಅಂಬಾನಿ ಕಲ್ಚರಲ್​ ಸೆಂಟರ್ (ಎನ್​ಎಂಎಸಿಸಿ)​ ಉದ್ಘಾಟನಾ ಕಾರ್ಯಕ್ರಮವು ನಡೆದಿತ್ತು. ಇದರಲ್ಲಿ ಬಾಲಿವುಡ್​, ಹಾಲಿವುಡ್​ ತಾರೆಯರು ಭಾಗಿಯಾಗಿದ್ದರು. ಕಾರ್ಯಕ್ರಮದ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಆರ್ಯನ್​ ಖಾನ್​ ಅವರ ವಿಡಿಯೋವೊಂದು ಸಖತ್​ ವೈರಲ್​ ಆಗಿದೆ. ಈ ದೃಶ್ಯದಲ್ಲಿ ಆರ್ಯನ್​ ತಮ್ಮ ತಂದೆ ಶಾರುಖ್​ ಖಾನ್​ ಅವರ ಡ್ಯಾನ್ಸ್​ ನೋಡಿ ಆನಂದಿಸುತ್ತಿರುವುದನ್ನು ಕಾಣಬಹುದು.

ಆರ್ಯನ್​, ತಮ್ಮ ತಾಯಿ ಗೌರಿ ಖಾನ್​ ಮತ್ತು ಸಹೋದರಿ ಸುಹಾನಾ ಖಾನ್​ ಅವರೊಂದಿಗೆ ಎನ್​ಎಂಎಸಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಶಾರುಖ್​ ಖಾನ್ ತಮ್ಮ ಸೂಪರ್​ ಹಿಟ್​ ಪಠಾಣ್​ ಸಿನಿಮಾದ ಜೂಮೇ ಜೋ ಪಠಾಣ್​ ಹಾಡಿಗೆ ಡ್ಯಾನ್ಸ್​ ಮಾಡಿದ್ದರು. ಅವರು ಕುಣಿಯುತ್ತಿದ್ದಂತೆ ವೇದಿಕೆಯ ಮುಂಭಾಗದಲ್ಲಿ ನೆರೆದಿದ್ದ ಸೆಲೆಬ್ರಿಟಿಗಳು, ಪ್ರೇಕ್ಷಕರು ಬೊಬ್ಬೆ ಹೊಡೆದು ಸಂಭ್ರಮಿಸಿದ್ದರು. ವೈರಲ್​ ಆಗಿರುವ ವಿಡಿಯೋದಲ್ಲಿ, ಆರ್ಯನ್​ ಖಾನ್​ ತಮ್ಮ ತಂದೆಯ ಡ್ಯಾನ್ಸ್​ ನೋಡಿ ಆನಂದಿಸುತ್ತಿರುವುದನ್ನು ನೋಡಬಹುದು.

  • Aryan Khan watching hi dad Shah Rukh Khan ‘s performance on Jhoome Jo Pathaan 😍 pic.twitter.com/vdcYXSwBqM

    — Shah Rukh Khan Fc - Pune ( SRK Fc Pune ) (@SRKFC_PUNE) April 2, 2023 " class="align-text-top noRightClick twitterSection" data=" ">

ಇದನ್ನು ಕಂಡ ಅಭಿಮಾನಿಗಳು ಫುಲ್​ ಖುಷಿಯಾಗಿಯಾಗಿದ್ದಾರೆ. ಅವರ ಪ್ರಕಾರ ಇದು ಅಪರೂಪದ ದೃಶ್ಯವಾಗಿದೆ. ವಿಡಿಯೋವನ್ನು ಕಂಡ ನೆಟ್ಟಿಗರು ಬಗೆ ಬಗೆಯ ಬರಹಗಳಿಂದ ಕಮೆಂಟ್​ ವಿಭಾಗವನ್ನು ತುಂಬಿದ್ದಾರೆ. "ಆರ್ಯನ್​ ಸ್ಮೈಲ್​ ನೋಡಲು ಖುಷಿಯಾಗಿದೆ. ಅವರ ತಂದೆಯ ಡ್ಯಾನ್ಸ್​ ಅನ್ನು ಆನಂದಿಸುತ್ತಿರುವ ಜನರನ್ನು ನೋಡುವುದು ಅವರಿಗೆ ಹೆಮ್ಮೆಯ ಕ್ಷಣವಾಗಿರಬಹುದು" ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು "ವಾವ್​! ನಿಜಕ್ಕೂ ನಂಬಲಾಗುತ್ತಿಲ್ಲ. ಆರ್ಯನ್​ ನಗುತ್ತಿದ್ದಾನೆಯೇ? ಅದು ಕೂಡ ಶಾರುಖ್​ ಖಾನ್​ ಡ್ಯಾನ್ಸ್​ ನೋಡಿ" ಎಂದು ಹೇಳಿದ್ದಾರೆ.

ಇದನ್ನೂ ಓದಿ: 'ಆ ಹುಡುಗಿಯಾದರೂ ಸಂತೋಷವಾಗಿರಲಿ': ನಾಗ ಚೈತನ್ಯ - ಶೋಭಿತಾ ಡೇಟಿಂಗ್​ ವದಂತಿಗೆ ಸಮಂತಾ ಪ್ರತಿಕ್ರಿಯೆ

ಶಾರುಖ್​​ ಮುಂದಿನ ಸಿನಿಮಾಗಳು.. ಜೀರೋ ಸಿನಿಮಾದ ನಂತರ ನಾಲ್ಕು ವರ್ಷ ಗ್ಯಾಪ್​ ತೆಗೆದುಕೊಂಡ ಶಾರುಖ್​ ಖಾನ್​ ಪಠಾಣ್​ ಸಿನಿಮಾದ ಮೂಲಕ ರೀ ಎಂಟ್ರಿ ಕೊಟ್ಟರು. ಈ ಚಿತ್ರ ನೂರು ಕೋಟಿಯಿಂದ 1000 ಕೋಟಿ ಕಲೆಕ್ಷನ್​ ಮಾಡಿ ಪ್ರಪಂಚದಾದ್ಯಂತ ಧೂಳೆಬ್ಬಿಸಿತ್ತು. ಸದ್ಯ ಕಿಂಗ್​ ಖಾನ್​ ತಮಿಳು ಸ್ಟಾರ್​ ಡೈರೆಕ್ಟರ್​ ಅಟ್ಲಿ ನಿರ್ದೇಶನದ ಜವಾನ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಶಾರುಖ್​ಗೆ ಲೇಡಿ ಸೂಪರ್​ ಸ್ಟಾರ್​ ನಯನತಾರಾ ಜೋಡಿಯಾಗಲಿದ್ದಾರೆ. ಈ ಸಿನಿಮಾದಲ್ಲಿ ಕಾಲಿವುಡ್​ ನಟ ವಿಜಯ್​ ಸೇತುಪತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಠಾಣ್​ ಚಿತ್ರದ ನಂತರ ಶಾರುಖ್​ ಅಭಿನಯದ ಮುಂದಿನ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಲ್ಲದೇ, ತ್ರೀ ಈಡಿಯಟ್ಸ್​ ಖ್ಯಾತಿಯ ನಿರ್ದೇಶಕ ರಾಜ್​ ಕುಮಾರ್​ ಹಿರಾನಿ ಅವರ ಡಂಕಿ ಚಿತ್ರಕ್ಕೂ ಶಾರುಖ್​ ಸಹಿ ಹಾಕಿದ್ದಾರೆ. ಇದರಲ್ಲಿ ಬಾಲಿವುಡ್​ ಬೆಡಗಿ ತಾಪ್ಸಿ ನಾಯಕಿಯಾಗಿದ್ದಾರೆ. ಮತ್ತೊಂದೆಡೆ ಪಠಾಣ್​ ಚಿತ್ರದಲ್ಲಿ ಸಲ್ಮಾನ್​ ಖಾನ್​ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದರಂತೇ ಸಲ್ಮಾನ್​ ಖಾನ್​ ಅವರ ಟೈಗರ್​ 3ನಲ್ಲೂ ಶಾರುಖ್​ ನಟಿಸಲಿದ್ದಾರೆ.

ಇದನ್ನೂ ಓದಿ: ಈಟಿವಿ ಬಾಲ ಭಾರತ್​ನಲ್ಲಿ ಬೇಸಿಗೆ ರಜೆಗೆ ನೂತನ ಕಾರ್ಯಕ್ರಮಗಳು.. ಮಕ್ಕಳ ಮನರಂಜನೆಗಿಲ್ಲ ಕೊರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.