ETV Bharat / entertainment

ಸಾಕು ನಾಯಿ ಕಚ್ಚಿದ ಆರೋಪ: ನಟ ದರ್ಶನ್​ಗೆ ನೋಟಿಸ್!

author img

By ETV Bharat Karnataka Team

Published : Nov 11, 2023, 5:43 PM IST

Updated : Nov 12, 2023, 8:02 AM IST

ಮಹಿಳೆಯೊಬ್ಬರಿಗೆ ಸಾಕು ನಾಯಿ ಕಚ್ಚಿರುವ ಆರೋಪ ಪ್ರಕರಣದಲ್ಲಿ ನಟ ದರ್ಶನ್​ ಅವರಿಗೆ ಆರ್.ಆರ್ ನಗರ ಠಾಣಾ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.

actor darshan
ನಟ ದರ್ಶನ್​ಗೆ ನೋಟಿಸ್

ಬೆಂಗಳೂರು: ಪಾರ್ಕಿಂಗ್ ವಿಚಾರವಾಗಿ ಗಲಾಟೆ ನಡೆದು ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಜನಪ್ರಿಯ ನಟ ದರ್ಶನ್ ಅವರಿಗೆ ಆರ್.ಆರ್ ನಗರ ಠಾಣಾ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಶುಕ್ರವಾರ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗಲು‌ ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ನಾಯಿಗಳನ್ನು ನೋಡಿಕೊಳ್ಳುತ್ತಿದ್ದ ಹೇಮಂತ್ ಎಂಬಾತನ ವಿಚಾರಣೆ ನಡೆಸಿರುವ ಪೊಲೀಸರು, ಇದೀಗ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಏನಿದು ಪ್ರಕರಣ? ಅಕ್ಟೋಬರ್ 28ರಂದು ಖಾಸಗಿ ಆಸ್ಪತ್ರೆಯಲ್ಲಿದ್ದ ಕಾರ್ಯಕ್ರಮವೊಂದಕ್ಕೆ ತೆರಳಿದ್ದ ದೂರುದಾರೆ ಅಮಿತಾ ಜಿಂದಾಲ್ ಅವರು ನಟ ದರ್ಶನ್ ಮನೆ ಮುಂಭಾಗದಲ್ಲಿನ ರಸ್ತೆಯ ಖಾಲಿ ಜಾಗದಲ್ಲಿ ತಮ್ಮ ಕಾರು ಪಾರ್ಕ್ ಮಾಡಿದ್ದರು. ವಾಪಸ್ ತೆರಳಲು ಕಾರಿನ ಬಳಿ ಬಂದಾಗ ಅಕ್ಕಪಕ್ಕದಲ್ಲಿದ್ದ ಮೂರು ನಾಯಿಗಳನ್ನು ಕಂಡ ಅಮಿತಾ 'ತಾವು ಕಾರ್​ ಬಳಿ ಹೋಗಬೇಕು, ನಾಯಿಗಳನ್ನ ಕರೆದುಕೊಂಡು ಹೋಗಿ' ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಸ್ಥಳದಲ್ಲಿದ್ದ ದರ್ಶನ್ ಅವರ ಮನೆಯ ಕೆಲಸಗಾರ ಗಲಾಟೆ ಮಾಡಿದ್ದಾರೆ ಎಂಬ ಆರೋಪ ಇದೆ.

'ಕೆಲಸಗಾರ ನಾಯಿಗಳನ್ನು ನಿಯಂತ್ರಿಸಲಿಲ್ಲ': ಇಬ್ಬರ ನಡುವಿನ ವಾಗ್ವಾದದ ವೇಳೆ ನಾಯಿಯೊಂದು ಅಮಿತಾ ಅವರ ಮೇಲೆರಗಿದೆ. ನೆಲಕ್ಕೆ ಬಿದ್ದ ಅವರ ಮೇಲೆ ಮತ್ತೊಂದು ನಾಯಿ ಸಹ ದಾಳಿ ಮಾಡಿದೆ. ಹೊಟ್ಟೆಯ ಭಾಗಕ್ಕೆ ಕಚ್ಚಿದೆ ಎಂದು ಆರೋಪಿಸಿ ಆರ್.ಆರ್.ನಗರ ಠಾಣೆಗೆ ದೂರು ನೀಡಿದ್ದರು. ನಾಯಿಗಳು ಕಚ್ಚುತ್ತವೆ ಎಂದು ತಿಳಿದಿದ್ದರೂ ಸಹ ಅವುಗಳನ್ನು ನಿಯಂತ್ರಿಸದೇ ಕೆಲಸಗಾರ ಸುಮ್ಮನಿದ್ದ ಎಂದು ಅಮಿತಾ ಜಿಂದಾಲ್ ಆರೋಪಿಸಿದ್ದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಅವರ ಮನೆಯ ಕೆಲಸಗಾರನ ವಿರುದ್ಧ ಇತ್ತೀಚೆಗಷ್ಟೇ ಅಮಿತಾ ಜಿಂದಾಲ್ ದೂರು ದಾಖಲಿಸಿದ್ದಾರೆ. ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಮಂಗಳವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಆರ್ ನಗರ ಪೊಲೀಸ್​ ಠಾಣೆಗೆ ಹೋಗಿದ್ದರು. ಆದರೆ ಯಾರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಕೂಡ ದೂರುದಾರೆ ಅಮಿತಾ ಜಿಂದಾಲ್ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಸಾಕು ನಾಯಿಗಳು ಕಚ್ಚಿದ ಆರೋಪ: ಪೊಲೀಸರ ವಿರುದ್ಧ ದೂರುದಾರೆಯ ಆಕ್ರೋಶ

ಈ ಬಗ್ಗೆ ಮಾತನಾಡಿದ್ದ ದೂರುದಾರರಾದ ಅಮಿತಾ ಜಿಂದಾಲ್, ಸಂಬಂಧಪಟ್ಟ ಅಧಿಕಾರಿಗಳು ಇಲ್ಲ, ಅವರು ಬಂದ ಮೇಲೆಯೇ ಈ ಬಗ್ಗೆ ನೋಡಲಾಗುವುದು. ಬೆಳಗ್ಗೆ 9 ಗಂಟೆ ಹೊತ್ತಿಗೆ ಬರುವಂತೆ ನನಗೆ ಸೂಚಿಸಿದ್ದರು. ಆದರೆ ಸಮಯ 9.30 ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಬರಲಿಲ್ಲ. ನನ್ನ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ. ನಾನು ವಕೀಲೆ, ಈ ಬಗ್ಗೆ ಹೇಗೆ ಹೆಜ್ಜೆ ಇಡಬೇಕೆಂಬುದು ನನಗೆ ತಿಳಿದಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: 'ಟೈಗರ್​ 3 ಲೀಕ್ ಆಗದಂತೆ ನೋಡಿಕೊಳ್ಳಿ'​: ಅಭಿಮಾನಿಗಳಲ್ಲಿ ಸಲ್ಮಾನ್​, ಕತ್ರಿನಾ ಮನವಿ!

Last Updated : Nov 12, 2023, 8:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.