ETV Bharat / entertainment

ನಯನತಾರಾ ಬಾಡಿಗೆ ತಾಯ್ತನದ ವಿವಾದ: ತನಿಖೆ ನಡೆಸಲಾಗುವುದು ಎಂದ ಆರೋಗ್ಯ ಸಚಿವ

ನಯನತಾರಾ ಅವರ ಬಾಡಿಗೆ ತಾಯ್ತನದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಪ್ರಾರಂಭವಾಗಿದೆ. ಭಾರತದಲ್ಲಿ ಇದು ಕಾನೂನುಬದ್ಧವೇ ಅಥವಾ ಅಲ್ಲವೇ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ವರ್ಷ ಜನವರಿಯಲ್ಲಿ ಬಾಡಿಗೆ ತಾಯ್ತನದ ಕಾನೂನು ತಿದ್ದುಪಡಿಯಾಗಿದ್ದು, ಈ ನಿಯಮಕ್ಕೆ ಒಳಪಟ್ಟಿದ್ದಾರ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

author img

By

Published : Oct 10, 2022, 8:17 PM IST

Nayantaras surrogacy issue
ನಯನತಾರಾ ಬಾಡಿಗೆ ತಾಯ್ತನದ ವಿವಾದ

ಚೆನ್ನೈ : ಮಲಯಾಳಂ ಚಿತ್ರರಂಗದ ನಟಿ ನಯನತಾರ ಮತ್ತು ತಮಿಳಿನ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿಗೆ ಅವಳಿ ನಿನ್ನೆ ಅವಳಿ ಮಗು ಆಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಕೊಂಡಿದ್ದರು. ಇದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲ ತಾಣ ಮತ್ತು ಮಾಧ್ಯಮಗಳಲ್ಲಿ ಅವರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರೇ ಎಂಬ ಪ್ರಶ್ನೆಗಳು ಎದ್ದಿವೆ.

ನಯನತಾರ ತಮಿಳಿನ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಹಲವಾರು ವರ್ಷಗಳ ಕಾಲ ಡೇಟಿಂಗ್ ಮಾಡಿ ಈ ವರ್ಷ ಜೂನ್‌ನಲ್ಲಿ ಮಹಾಬಲೇಶ್ವರಂನಲ್ಲಿ ಸಪ್ತಪದಿ ತುಳಿದಿದ್ದರು. ಆದರೆ, ಮದುವೆಯಾಗಿ ನಾಲ್ಕು ತಿಂಗಳಾಗುವುದರೊಳಗೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವುದಾಗಿ ಅಧಿಕೃತವಾಗಿ ಘೋಷಿಸಿರುವುದು ಜೋಡಿ ಶಾಕ್ ನೀಡಿದೆ.

ಇತ್ತೀಚೆಗಷ್ಟೇ ನಯನತಾರಾ ಮಾಧ್ಯಮಗಳ ಮುಂದೆ ಬಂದಿದ್ದರು. ಆಗ ಆಕೆ ಗರ್ಭ ಧರಿಸುವ ಲಕ್ಷಣ ಕಾಣಿಸದ ಕಾರಣ ಬಾಡಿಗೆ ತಾಯ್ತನದ ಮೂಲಕವೇ ಮಗು ಪಡೆದಿರಬಹುದು ಎಂಬ ಪ್ರಚಾರ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ವಿಷಯವನ್ನು ನಯನತಾರಾ ಅಥವಾ ವಿಘ್ನೇಶ್ ಶಿವನ್ ಅಧಿಕೃತವಾಗಿ ಪ್ರಕಟಿಸಿಲ್ಲ.

ಬಾಡಿಗೆ ತಾಯ್ತನಕ್ಕೆ ನಿಯಮಗಳು : ಈ ವರ್ಷದ ಜನವರಿಯಲ್ಲಿ ಭಾರತದಲ್ಲಿ ಬಾಡಿಗೆ ತಾಯ್ತನವನ್ನು ನಿಷೇಧಿಸಲಾಯಿತು. ಅದೂ ಅಲ್ಲದೇ ಇಬ್ಬರಲ್ಲಿ ಒಬ್ಬರಿಗೆ ಮಗು ಹೆರುವ ಸಾಮರ್ಥ್ಯವಿಲ್ಲದಿದ್ದರೆ ಮದುವೆಯಾದ 5 ವರ್ಷಗಳ ನಂತರವೇ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದು ಎಂಬ ನಿಯಮವೂ ಇದೆ. ಈ ಹಿನ್ನೆಲೆಯಲ್ಲಿ 37ರ ಹರೆಯದ ನಯನತಾರಾ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಹೆರಲು ಅರ್ಹರಲ್ಲ ಎಂಬ ದೊಡ್ಡ ಚರ್ಚೆ ನಡೆಯುತ್ತಿದೆ.

ಸಚಿವರು ಏನಂತಾರೆ ?: ನಯನತಾರಾ ಬಾಡಿಗೆ ತಾಯ್ತನ ವಿವಾದದ ಕುರಿತು ಪ್ರತಿಕ್ರಿಯಿಸಿರುವ ತಮಿಳುನಾಡು ಆರೋಗ್ಯ ಸಚಿವರು, ಬಾಡಿಗೆ ತಾಯ್ತನವನ್ನು ಕಾನೂನುಬದ್ಧವಾಗಿ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಆರೋಗ್ಯ ಇಲಾಖೆ ವಿಚಾರಣೆ ನಡೆಸಲಾಗುವುದು. ಬಾಡಿಗೆ ತಾಯ್ತನದ ಅವಕಾಶವು ಮಕ್ಕಳನ್ನು ಹೊಂದಲು ಸಾಧ್ಯವಾಗದಂತಹ ಕೆಲವು ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಈ ಬಗ್ಗೆ ವಿವರಗಳನ್ನು ಸರ್ಕಾರಕ್ಕೆ ತಿಳಿಸುವಂತೆ ಆರೋಗ್ಯ ಸಚಿವ ಸುಬ್ರಮಣಿಯನ್ ಅವರು ನಯನತಾರಾ ಅವರನ್ನು ಕೇಳಿದ್ದಾರೆ.

ಇದನ್ನೂ ಓದಿ : ಮದುವೆ ಮುನ್ನ ಮಕ್ಕಳ ಪ್ಲಾನ್​.. ಸರೋಗಸಿ ಮೂಲಕ ಅವಳಿ ಶಿಶುಗಳಿಗೆ ಅಪ್ಪ-ಅಮ್ಮನಾದ ನಯನತಾರ-ವಿಘ್ನೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.