ಹಿಂದಿ ಚಿತ್ರರಂಗದ ಪ್ರಸಿದ್ಧ ನಟರಾದ ನವಾಜುದ್ದೀನ್ ಸಿದ್ದಿಕಿ ಮತ್ತು ಅನುರಾಗ್ ಕಶ್ಯಪ್ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ಹಡ್ಡಿ. ಸೆಪ್ಟೆಂಬರ್ 7 ರಂದು ತೆರೆ ಕಾಣಲು ಸಜ್ಜಾಗಿರುವ ಈ ಸಿನಿಮಾದ ಕುತೂಹಲಕಾರಿ ಟ್ರೇಲರ್ ಇಂದು ಅನಾವರಣಗೊಂಡಿದೆ.
ಮಂಗಳಮುಖಿ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ: ತೃತೀಯಲಿಂಗಿ ಪಾತ್ರದಲ್ಲಿ ನವಾಜುದ್ದೀನ್ ಸಿದ್ದಿಕಿ ಅವರು ಕಾಣಿಸಿಕೊಳ್ಳಲಿದ್ದು, ಟ್ರೇಲರ್ನಲ್ಲೇ ಬಹಳ ಅದ್ಭುತವಾಗಿ ದರ್ಶನ ಕೊಟ್ಟಿದ್ದಾರೆ. ಹೀಗಿರುವಾಗ ಸಿನಿಮಾ ಹೇಗಿರಬಹುದು ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ. ಅಕ್ಷತ್ ಅಜಯ್ ಶರ್ಮಾ ನಿರ್ದೇಶನದ ಈ ಸಿನಿಮಾ ಒಟಿಟಿ ಪ್ಲಾಟ್ಫಾರ್ಮ್ ಝೀ5 ನಲ್ಲಿ ಸೆಪ್ಟೆಂಬರ್ 7 ರಿಂದ ವೀಕ್ಷಣೆಗೆ ಲಭ್ಯವಾಗಲಿದೆ.
ಹಡ್ಡಿ ಟ್ರೇಲರ್: 2 ನಿಮಿಷ 25 ಸೆಕೆಂಡ್ಸ್ ಇರುವ ಹಡ್ಡಿ ಟ್ರೇಲರ್, ನಟ ನವಾಜುದ್ದೀನ್ ಸಿದ್ದಿಕಿ ಭಯಂಕರವಾಗಿ ಎಂಟ್ರಿ ಕೊಡುವ ಮೂಲಕ ಆರಂಭವಾಗುತ್ತದೆ. ನವಾಜುದ್ದೀನ್ ಸಿದ್ದಿಕಿ ರಕ್ತದ ಕಲೆಯಿರುವ ಚಾಕು ಹಿಡಿದು ತೀವ್ರತರನಾದ ನೋಟ ಬೀರಿದ್ದು, ಆರಾಮವಾಗಿ ಕುರ್ಚಿ ಮೇಲೆ ಕುಳಿತಿದ್ದಾರೆ. ಅನೇಕ ಮಹಿಳೆಯರು ಅವರನ್ನು ಸುತ್ತುವರಿದಿದ್ದಾರೆ. ಒಟ್ಟಾರೆ ಟ್ರೇಲರ್ ಕುತೂಹಲಕಾರಿಯಾಗಿ ಮೂಡಿಬಂದಿದೆ.
- " class="align-text-top noRightClick twitterSection" data="">
ನಾನಾ ಭಾವನೆಗಳ ಮಿಶ್ರಣ: ಟ್ರೇಲರ್ ಪ್ರತೀಕಾರ, ಹಿಂಸೆ, ಅದಿಕಾರದ ಅಮಲೇರಿದ ನಿರ್ದಯ ಸಮಾಜ, ಹೋರಾಟ ಸೇರಿದಂತೆ ನಾನಾ ಭಾವನೆಗಳ ಮಿಶ್ರಣವಾಗಿದೆ. ಪ್ರತಿಭಾನ್ವಿತ ನಟ ನವಾಜುದ್ದೀನ್ ಸಿದ್ದಿಕಿ ಎರಡು ವಿಭಿನ್ನ ಪಾತ್ರಗಲಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಡ್ಡಿ ಮತ್ತು ಹರಿಕಾ ಆಗಿ ದರ್ಶನ ನೀಡಲಿದ್ದಾರೆ. ಮಂಗಳಮುಖಿ ಪಾತ್ರಕ್ಕೆ ಜೀವ ತುಂಬಿದ್ದು, ಹೊಸ ಅವತಾರದಲ್ಲಿ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಇನ್ನೂ, ಅಕ್ಷತ್ ಅಜಯ್ ಶರ್ಮಾ ಅವರ ಚೊಚ್ಚಲ ಚಿತ್ರವಿದು. ಮೊದಲ ಸಿನಿಮಾದಲ್ಲೇ ಬಹುಬೇಡಿಕೆ ನಟನಿಗೆ ಆ್ಯಕ್ಷನ್ ಕಟ್ ಹೇಳುವ ಅವಕಾಶ ಪಡೆದಿದ್ದಾರೆ. ರಾಜಕಾರಣಿ - ಕ್ರಿಮಿನಲ್ಸ್ - ತೃತೀಯಲಿಂಗಿಗಳ ಸುತ್ತ ಹಡ್ಡಿ ಕಥೆ ಸುತ್ತುತ್ತದೆ. ಪ್ರೀತಿ, ಸೇಡು, ಗುರುತು ಸಿನಿಮಾದ ಪ್ರಮುಖ ಅಂಶಗಳು. ಪ್ರತಿಭಾನ್ವಿತ ನಟ ನವಾಜುದ್ದೀನ್ ಸಿದ್ದಿಕಿ ಅವರನ್ನು ವಿಭಿನ್ನ ರೂಪದಲ್ಲಿ ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ.
ಇದನ್ನೂ ಓದಿ: 'ಕನಸೊಂದು ಸಿನಿಮಾ ಆಗಿ ತೆರೆಮೇಲೆ ಮೂಡಿದ ಆ ದಿನಕ್ಕೆ 5 ವರ್ಷ': ರಿಷಬ್ ಶೆಟ್ಟಿ ಸ್ಪೆಷಲ್ ಪೋಸ್ಟ್
ಶೂಟಿಂಗ್ನಲ್ಲಿ 300 ತೃತೀಯಲಿಂಗಿಗಳು ಭಾಗಿ: ಅನುರಾಗ್ ಕಶ್ಯಪ್, ನವಾಜುದ್ದೀನ್ ಸಿದ್ದಿಕಿ ಅಲ್ಲದೇ ಇಲಾ ಅರುಣ್, ಮೊಹಮ್ಮದ್ ಜೀಶನ್ ಅಯೂಬ್, ಸೌರಭ್ ಸಚ್ದೇವ, ಶ್ರೀಧರ್ ದುಬೆ, ರಾಜೇಶ್ ಕುಮಾರ್, ವಿಪಿನ್ ಶರ್ಮಾ, ಸಹರ್ಶ್ ಶುಕ್ಲಾ ಕೂಡ ಅಭಿನಯಿಸಿದ್ದಾರೆ. ಸಿನಿಮಾದ ಗಮನಾರ್ಹ ಅಂಶವೆಂದರೆ ಚಿತ್ರೀಕರಣದ ವೇಳೆ 300 ತೃತೀಯಲಿಂಗಿಗಳನ್ನು ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ: Gadar 2: ಸನ್ನಿ ಡಿಯೋಲ್ ಮುಖ್ಯಭೂಮಿಕೆಯ ಗದರ್ 2 ವೀಕ್ಷಿಸಿದ ಡಿಂಪಲ್ ಕಪಾಡಿಯಾ!