ETV Bharat / entertainment

ಎರಡೇ ದಿನದಲ್ಲಿ 53 ಕೋಟಿ ಬಾಚಿದ 'ದಸರಾ': ನಾನಿ ರಗಡ್​ ಲುಕ್​ಗೆ ಫ್ಯಾನ್ಸ್​ ಫಿದಾ - ಈಟಿವಿ ಭಾರತ ಕನ್ನಡ

ನಾನಿ ಅಭಿನಯದ 'ದಸರಾ' ಸಿನಿಮಾ ಎರಡೇ ದಿನದಲ್ಲಿ 53 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

dasara
ದಸರಾ
author img

By

Published : Apr 1, 2023, 7:11 PM IST

ನ್ಯಾಚುರಲ್​ ಸ್ಟಾರ್​ ನಾನಿ ಅಭಿನಯದ ಪ್ಯಾನ್​ ಇಂಡಿಯಾ ಸಿನಿಮಾ 'ದಸರಾ' ಬಾಕ್ಸ್​ ಆಫೀಸ್​ನಲ್ಲಿ ಭಾರೀ ಮೊತ್ತದ ಹಣ ಕಲೆಕ್ಷನ್​ ಮಾಡಿದೆ. ಬಿಡುಗಡೆಯಾಗಿ ಎರಡು ದಿನದಲ್ಲೇ ಹಿಟ್​ ಟಾಕ್​ ಜೊತೆಗೆ ಕೋಟಿ ಹಣ ಲೂಟಿ ಮಾಡಿದೆ. ಮೊದಲ ದಿನ 38 ಕೋಟಿ ಕಲೆಕ್ಷನ್​ ಮಾಡಿದ ದಸರಾ, ಎರಡನೇ ದಿನ ಸುಮಾರು 15 ಕೋಟಿ ಗಳಿಕೆ ಮಾಡಿದೆ. ಹೀಗಾಗಿ ಎರಡೇ ದಿನದಲ್ಲಿ ಒಟ್ಟು 53 ಕೋಟಿ ರೂಪಾಯಿ ಸಂಪಾದಿಸಿದೆ.

ಎರಡು ತೆಲುಗು ರಾಜ್ಯಗಳಲ್ಲಿ ಸುಮಾರು 20.08 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಒಟ್ಟಾರೆ 34.45 ಕೋಟಿ ಗಳಿಸಿದೆ. ವಿದೇಶದಲ್ಲಿ 5.60 ಕೋಟಿ ಶೇರ್​ ಕಲೆಕ್ಷನ್​ ಮಾಡಿದ್ದು, ವಿಶ್ವದಾದ್ಯಂತ 23.08 ಕೋಟಿ ಪಡೆದುಕೊಂಡಿದೆ. ಹೀಗಾಗಿ 52.40 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ ಎಂದು ಹೇಳಲಾಗುತ್ತಿದೆ. ಲವರ್​ ಬಾಯ್​ ಆಗಿ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದ ನಾನಿ ಮಾಸ್​, ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ. ಹೀಗಾಗಿಯೇ ಸಿನಿಮಾ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್​ ಮಾಡಿದೆ.

ಪ್ರೀ ರಿಲೀಸ್​ಗೂ ಮುನ್ನ ಬ್ಯುಸಿನೆಸ್​: ದಸರಾ ಸಿನಿಮಾ ಬಿಡುಗಡೆಗೂ ಮುನ್ನವೇ 48 ಕೋಟಿ ರೂಪಾಯಿ ಪ್ರೀ ರಿಲೀಸ್​ ಬ್ಯುಸಿನೆಸ್​ ಮಾಡಿದೆ. ಈ ಚಿತ್ರವು ವಿದೇಶದಲ್ಲಿಯೂ ಜಾದೂ ಮಾಡಿದ್ದು, ಅಮೆರಿಕದಲ್ಲಿ ಭರ್ಜರಿ ಓಪನಿಂಗ್​ ಪಡೆದಿದೆ. ಚಿತ್ರಕ್ಕೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆ ಈ ವಾರಾಂತ್ಯದಲ್ಲಿ 20 ಕೋಟಿಗಿಂತಲೂ ಹೆಚ್ಚು ಗಳಿಸುವ ಸಾಧ್ಯತೆ ಇದೆ. ಏನಿಲ್ಲವೆಂದರೂ 100 ಕೋಟಿ ಕ್ಲಬ್​ ಸೇರುವ ನಿರೀಕ್ಷೆ ಇದೆ.

ಇದನ್ನೂ ಓದಿ: ರಾಜಕೀಯ ಎಂಟ್ರಿ ಬಗ್ಗೆ ವದಂತಿ... April 1st ಹೀಗೆ ಹೇಳಿ ಎಂದ ರಿಷಬ್ ಶೆಟ್ಟಿ

ಚಿತ್ರತಂಡ ಹೀಗಿದೆ.. ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ಅಡಿ ಸುಧಾಕರ್ ಚೆರುಕುರಿ ಬಿಗ್ ಬಜೆಟ್​ನಲ್ಲಿ ದಸರಾ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಒಡೆಲಾ ಚೊಚ್ಚಲ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದ್ದು, ಖ್ಯಾತ ನಟಿ ಕೀರ್ತಿ ಸುರೇಶ್ ನಾನಿ ಜೋಡಿಯಾಗಿ ಸ್ಕ್ರೀನ್ ಶೇರ್ ಮಾಡಿದ್ದಾರೆ. ಬಹುದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ನಾನಿ ಹಾಗೂ ಕೀರ್ತಿ ಸುರೇಶ್ ಅಲ್ಲದೇ 'ದಿಯಾ' ಖ್ಯಾತಿಯ ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗವಿದೆ.

ಇದನ್ನೂ ಓದಿ: 'ದಿ ಫಾಲನ್​' ಆಗಿ ಬಂದ್ರು ಅನುಪಮಾ ಗೌಡ: ಇಂದು ಟ್ರೇಲರ್​ ರಿಲೀಸ್​

ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣದಲ್ಲಿ ದಸರಾ ಸಿನಿಮಾ ನಿರ್ಮಾಣ ಆಗಿದೆ. ತೆಲಂಗಾಣದ ಗೋದಾವರಿಖಾನಿ ಸಮೀಪ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಮಾಸ್ ಆ್ಯಕ್ಷನ್ ಸಬ್ಜೆಕ್ಟ್ ಮೂಲಕ ತೆರೆ ಮೇಲೆ ತೋರಿಸಲಾಗಿದೆ.

ಇದನ್ನೂ ಓದಿ: 'ಯಶ್​ ಸಿನಿಮಾ ಅಪ್​ಡೇಟ್​ ನೀಡಿಲ್ಲಾಂದ್ರೆ ಸ್ಟ್ರೈಕ್​': ರಾಧಿಕಾಗೆ ಫ್ಯಾನ್ಸ್​ ಆವಾಜ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.