ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಹಾಗೂ ನಿರ್ದೇಶಕ ಆರ್ ಚಂದ್ರು ಆ್ಯಕ್ಷನ್ ಕಟ್ ಹೇಳಿರುವ ಹೈವೋಲ್ಟೇಜ್ ಸಿನಿಮಾ ಕಬ್ಜ. ರಿಯಲ್ ಸ್ಟಾರ್ ಜನ್ಮದಿನಕ್ಕೆ ಗಿಫ್ಟ್ ಆಗಿ ನಿರ್ದೇಶಕ ಆರ್ ಚಂದ್ರು ಕಬ್ಜ ಚಿತ್ರದ ಟೀಸರ್ ಅನ್ನು ಅನಾವರಣ ಮಾಡಿದರು. ಈ ಚಿತ್ರದ ಟೀಸರ್ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮಿಲಿಯನ್ಗಟ್ಟಲೇ ಜನ ನೋಡುವ ಮೂಲಕ ಹೊಸ ದಾಖಲೆ ಬರೆದಿದೆ.
ಕಬ್ಜ ಟೀಸರ್ ಬಹುಭಾಷೆಯಲ್ಲಿ ರಿಲೀಸ್ ಆಗಿ ನೋಡುಗರನ್ನು ಇಂಪ್ರೇಸ್ ಮಾಡುತ್ತಿದೆ. ನಿರ್ದೇಶಕ ಆರ್ ಚಂದ್ರು ಕಬ್ಜ ಚಿತ್ರದ ಮೇಕಿಂಗ್‌ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿದ್ದಾರೆ. ತಮ್ಮ ಸಿನಿಮಾ ಕೆರಿಯರ್‌ನಲ್ಲೇ ಈವರೆಗೂ ಮಾಡಿರದಂತಹ ಮೇಕಿಂಗ್ ಮಾಡಿ, ಚಂದ್ರು ಮಿಂಚಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರರನ್ನು ಗ್ಯಾಂಗ್ಸ್ಟರ್ ಲುಕ್ನಲ್ಲಿ ತೋರಿಸಿದ್ದು, ಕಿಚ್ಚ ಸುದೀಪ್ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಶ್ರೀಯಾ ಸರಣ್ ಅವರ ಎಮೋಷನಲ್ ಸನ್ನಿವೇಶ ಸಖತ್ ಆಗಿ ಮೂಡಿ ಬಂದಿದೆ.
- " class="align-text-top noRightClick twitterSection" data="">
ಛಾಯಾಗ್ರಾಹಕ ಎ.ಜೆ. ಶೆಟ್ಟಿ ಅವರ ಕ್ಯಾಮರಾ ವರ್ಕ್, ಸಂಗೀತ ನಿರ್ದೇಶಕ ರವಿ ಬಸ್ರೂರು ಮತ್ತು ಕಲಾ ನಿರ್ದೇಶಕ ಶಿವಕುಮಾರ್ ಅವರ ವರ್ಕ್ ಯಾವ ಹಾಲಿವುಡ್ ಶೈಲಿಯ ಸಿನಿಮಾಗಳಿಗೂ ಕಡಿಮೆ ಇಲ್ಲ ಎಂಬ ಮಟ್ಟಿದೆ ಟೀಸರ್ ಮೂಡಿ ಬಂದಿದೆ. ನಾಲ್ಕನೇ ದಿನವೂ ಕಬ್ಜ ಸಿನಿಮಾದ ಟೀಸರ್ ಧೂಳ್ ಎಬ್ಬಿಸುತ್ತಿದ್ದು, ಬರೋಬ್ಬರಿ 2 ಕೋಟಿಗೂ ಹೆಚ್ಚು ಜನ ನೋಡುವುದರ ಜೊತೆಗೆ 53 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದಕೊಳ್ಳುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
ಇನ್ನು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆರ್ ಚಂದ್ರು ನಿರ್ದೇಶನ ಮಾಡುತ್ತಿರುವ ಮೂರನೇ ಸಿನಿಮಾವಾಗಿದ್ದು, 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕೆಜಿಎಫ್ ನಂತರ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಶ್ರೀಯಾ ಸರಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ನೋಡಿದವರು ಕಬ್ಜ ಚಿತ್ರದ ಕಥೆ ಮತ್ತು ಮೇಕಿಂಗ್ ವಿಚಾರದಲ್ಲಿ ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗುವಂತಹ ಸಿನಿಮಾ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ 'ಕಬ್ಜ' ಹವಾ: ಮುಂದಿನ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸ್ವಾಗತವೆಂದ ಆರ್‌ಜಿವಿ
ಇದರ ಜೊತೆಗೆ ಟೈಟಲ್ನಿಂದಲೇ ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಸಿನಿಮಾ 'ಯು ಐ'. ಉಪೇಂದ್ರ ಅವರು ಏಳು ವರ್ಷಗಳ ಬಳಿಕ ನಟಿಸಿ ಹಾಗೂ ನಿರ್ದೇಶನ ಮಾಡುತ್ತಿರುವ ಚಿತ್ರದ ಸಣ್ಣ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿತ್ತು. ಈ ಸಣ್ಣ ವಿಡಿಯೋ ಕ್ರಿಯೇಟಿವ್ ಆಗಿ ಇದ್ದು, ಯು ಐ ಸಿನಿಮಾದಿಂದ ಮನೋರಂಜನೆ ಜೊತೆಗೆ ಸಮಾಜಕ್ಕೆ ಒಂದು ಸಂದೇಶ ಸಿಗಲಿದೆ. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗೂ ಜಿ ಮನೋಹರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಕನ್ನಡ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.