ಭಾರತೀಯ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೇ, ನಿರ್ದೇಶಕರಾಗಿಯೂ ಗುರುತಿಸಿಕೊಂಡವರು ಪೃಥ್ವಿರಾಜ್ ಸುಕುಮಾರನ್. ಇವರು ಆ್ಯಕ್ಷನ್ ಕಟ್ ಹೇಳುತ್ತಿರುವ ಮುಂಬರುವ ಬಹುನಿರೀಕ್ಷಿತ ಚಿತ್ರ 'L2E - ಎಂಪುರಾನ್'. ಪೃಥ್ವಿ ಡೈರೆಕ್ಷನ್ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಇದೀಗ ಬಿಡುಗಡೆಗೊಳಿಸಿದೆ.
-
3rd directorial. 2nd part of the franchise. 1st look.#L2E #Empuraan #Firstlook
— Prithviraj Sukumaran (@PrithviOfficial) November 11, 2023 " class="align-text-top noRightClick twitterSection" data="
Malayalam | Tamil | Telugu | Kannada | Hindi@mohanlal #MuraliGopy @LycaProductions #Subaskaran @gkmtamilkumaran @antonypbvr @aashirvadcine @prithvirajprod #SureshBalaje #GeorgePius @ManjuWarrier4… pic.twitter.com/3D5DupUyif
">3rd directorial. 2nd part of the franchise. 1st look.#L2E #Empuraan #Firstlook
— Prithviraj Sukumaran (@PrithviOfficial) November 11, 2023
Malayalam | Tamil | Telugu | Kannada | Hindi@mohanlal #MuraliGopy @LycaProductions #Subaskaran @gkmtamilkumaran @antonypbvr @aashirvadcine @prithvirajprod #SureshBalaje #GeorgePius @ManjuWarrier4… pic.twitter.com/3D5DupUyif3rd directorial. 2nd part of the franchise. 1st look.#L2E #Empuraan #Firstlook
— Prithviraj Sukumaran (@PrithviOfficial) November 11, 2023
Malayalam | Tamil | Telugu | Kannada | Hindi@mohanlal #MuraliGopy @LycaProductions #Subaskaran @gkmtamilkumaran @antonypbvr @aashirvadcine @prithvirajprod #SureshBalaje #GeorgePius @ManjuWarrier4… pic.twitter.com/3D5DupUyif
2019ರಲ್ಲಿ ತೆರೆಕಂಡ ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಲೂಸಿಫರ್ನ ಮುಂದುವರೆದ ಭಾಗವೇ 'L2E - ಎಂಪುರಾನ್'. ಈ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಕೌಶಲ್ಯವನ್ನು ಪ್ರದರ್ಶಿಸಿದ ಪೃಥ್ವಿರಾಜ್ ಸುಕುಮಾರನ್ ಅವರ ಮೂರನೆಯ ಸಿನಿಮಾವಿದು. ಇದಲ್ಲದೇ, 2022ರ ಬ್ಲಾಕ್ಬಸ್ಟರ್ ಹಿಟ್ 'ಬ್ರೋ ಡ್ಯಾಡಿ' ಚಿತ್ರವನ್ನು ಕೂಡ ಇವರೇ ನಿರ್ದೇಶನ ಮಾಡಿದ್ದರು. ಉತ್ತಮ ಕಥೆಗಳನ್ನು ಆಯ್ದು ಪ್ರೇಕ್ಷಕರಿಗೆ ನೀಡುವಲ್ಲಿ ಪೃಥ್ವಿ ಮುಂದಿದ್ದಾರೆ. ಹೀಗಾಗಿ 'L2E - ಎಂಪುರಾನ್' ಮೇಲೆ ಮುಗಿಲೆತ್ತರದ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
ಫಸ್ಟ್ ಲುಕ್ ಅನ್ನು ಹಂಚಿಕೊಳ್ಳಲು ಪೃಥ್ವಿರಾಜ್ ಸುಕುಮಾರನ್ ಸೋಷಿಯಲ್ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು. "3 ನೇ ನಿರ್ದೇಶನ. ಫ್ರ್ಯಾಂಚೈಸಿಯ 2 ನೇ ಭಾಗ. ಫಸ್ಟ್ ಲುಕ್" ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ನಲ್ಲಿ, ಮೋಹನ್ಲಾಲ್ ಗನ್ ಹಿಡಿದುಕೊಂಡು ಕ್ಯಾಮರಾಗೆ ಬೆನ್ನು ಹಾಕಿ ನಿಂತಿದ್ದಾರೆ. ಆ್ಯಕ್ಷನ್ ಮೂಡ್ನಲ್ಲಿರುವಂತೆ ಕಾಣಿಸುತ್ತಿದ್ದಾರೆ. ಬ್ಲಾಕ್ಬಸ್ಟರ್ 'ಲೂಸಿಫರ್'ನ ಮುಂದುವರೆದ ಭಾಗವಾದ್ದರಿಂದ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಮಲಯಾಳಂ ಸ್ಟಾರ್ ಜೊತೆ ಹೊಂಬಾಳೆ ಸಂಸ್ಥೆ ಹೊಸ ಸಿನಿಮಾ; ಕುತೂಹಲಕಾರಿ ಪೋಸ್ಟರ್ ರಿಲೀಸ್!
ಆಶೀರ್ವಾದ್ ಸಿನಿಮಾಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಜಂಟಿಯಾಗಿ 'L2E - ಎಂಪುರಾನ್' ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಸೀಕ್ವೆಲ್ ಲೈಕಾ ಪ್ರೊಡಕ್ಷನ್ಸ್ಗೆ ಮೊದಲ ಮಲಯಾಳಂ ಸಿನಿಮಾವಾಗಿದೆ. ಈ ಮೂಲಕ ನಿರ್ಮಾಣ ಸಂಸ್ಥೆ ಮಾಲಿವುಡ್ಗೆ ಕಾಲಿಡುತ್ತಿದೆ. 'L2E - ಎಂಪುರಾನ್' ಸಿನಿಮಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಪ್ರೇಕ್ಷಕರನ್ನು ತಲುಪಲು ಸಿದ್ಧವಾಗುತ್ತಿದೆ. ಪೃಥ್ವಿರಾಜ್ ಸುಕುಮಾರನ್ ಮತ್ತು ಮೋಹನ್ಲಾಲ್ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದಾರೆ.
ಚಿತ್ರದಲ್ಲಿ ಮಂಜು ವಾರಿಯರ್, ಟೊವಿನೋ ಥಾಮಸ್ ಮತ್ತು ಇಂದ್ರಜಿತ್ ಸುಕುಮಾರನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಲೂಸಿಫರ್ ಚಿತ್ರ ಅಷ್ಟೊಂದು ಚೆನ್ನಾಗಿ ಮೂಡಿಬರಲು ಕಾರಣಕರ್ತರಾದ ಛಾಯಾಗ್ರಾಹಕ ಸುಜಿತ್ ವಾಸುದೇವ್ ಮತ್ತು ಸಂಯೋಜಕ ದೀಪಕ್ ದೇವ್ ಅವರೇ 'L2E - ಎಂಪುರಾನ್'ನಲ್ಲಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: Rambaan: ಮೋಹನ್ ಲಾಲ್ ಅಭಿನಯದ ರಾಂಬಾನ್ ಮೋಷನ್ ಪೋಸ್ಟರ್ ರಿಲೀಸ್