ETV Bharat / entertainment

ಮಿಷನ್​ ರಾಣಿಗಂಜ್​​, ಥ್ಯಾಂಕ್ಯೂ ಫಾರ್ ಕಮಿಂಗ್​ ಬಿಡುಗಡೆ: ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು ಗೊತ್ತೇ? - ಅಕ್ಷಯ್​ ಕುಮಾರ್

ಇಂದು ಚಿತ್ರಮಂದಿರಗಳಲ್ಲಿ 'ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ' ಮತ್ತು ಥ್ಯಾಂಕ್ಯೂ ಫಾರ್ ಕಮಿಂಗ್​ ಸಿನಿಮಾ ತೆರೆಕಂಡಿದೆ.

Mission Raniganj vs Thank You for Coming
ಮಿಷನ್​ ರಾಣಿಗಂಜ್​​, ಥ್ಯಾಂಕ್ಯೂ ಫಾರ್ ಕಮಿಂಗ್​ ರಿಲೀಸ್​
author img

By ETV Bharat Karnataka Team

Published : Oct 6, 2023, 1:47 PM IST

ಸಿನಿಪ್ರಿಯರಿಗೆ ಹಬ್ಬದ ವಾತಾವರಣ. 2023ರಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇಂದು ಕೂಡ ಹಲವು ಸಿನಿಮಾಗಳು ತೆರೆಕಂಡಿದ್ದು, ಬಾಕ್ಸ್​ ಆಫೀಸ್​​ ಪೈಪೋಟಿ ಜೋರಾಗಿದೆ.

  • " class="align-text-top noRightClick twitterSection" data="">

ಬಾಲಿವುಡ್​ ಕಿಲಾಡಿ ಅಕ್ಷಯ್ ಕುಮಾರ್ ಅವರ ಮಿಷನ್ ರಾಣಿಗಂಜ್ ಮತ್ತು ಭೂಮಿ ಪೆಡ್ನೇಕರ್ ಅಭಿನಯದ ಥ್ಯಾಂಕ್ಯೂ ಫಾರ್ , ಇಂದು ಚಿತ್ರಮಂದಿರಗಳಲ್ಲಿ ತೆರೆಕಂಡಿವೆ. ರಾಜ್‌ವೀರ್ ಡಿಯೋಲ್ ಮತ್ತು ಪಲೋಮಾ ಧಿಲ್ಲೋನ್ ನಟನೆಯ ಚೊಚ್ಚಲ ಚಿತ್ರ ಡೋನೊ ಒಂದು ದಿನ ಮುಂಚಿತವಾಗಿ ಅಂದರೆ ಗುರುವಾರದಂದು ಬಿಡುಗಡೆ ಆಗಿದೆ. ವಿಭಿನ್ನ ಪ್ರಕಾರದ ಸಿನಿಮಾಗಳೀಗ ಥಿಯೇಟರ್​ನಲ್ಲಿ ಲಭ್ಯವಿದೆ. ಆದರೆ ಬಹುನಿರೀಕ್ಷಿತ ಮಿಷನ್​ ರಾಣಿಗಂಜ್​​, ಥ್ಯಾಂಕ್ಯೂ ಫಾರ್ ಕಮಿಂಗ್​ ಸಿನಿಮಾಗಳು ಉತ್ತಮ ಆರಂಭ ಹೊಂದಿಲ್ಲ ಎಂದು ಸಿನಿಪಂಡಿತರ ಆರಂಭಿಕ ಅಂದಾಜು ಸೂಚಿಸಿದೆ.

ಮಿಷನ್ ರಾಣಿಗಂಜ್ ಬಾಕ್ಸ್​ ಆಫೀಸ್​ ಕಲೆಕ್ಷನ್​ ಅಂದಾಜು: ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಅವರ ಆರಂಭಿಕ ಅಂದಾಜಿನ ಪ್ರಕಾರ, ಅಕ್ಷಯ್ ಕುಮಾರ್​ ಹಾಗೂ ಪರಿಣಿತಿ ಚೋಪ್ರಾ ಅವರ 'ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ' ಸಿನಿಮಾ ತನ್ನ ಮೊದಲ ದಿನ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 3.50 ಕೋಟಿ ರೂ. ಗಳಿಸುವ ಸಾಧ್ಯತೆ ಇದೆ. ಟಿನು ಸುರೇಶ್ ದೇಸಾಯಿ ನಿರ್ದೇಶನದ ಈ ಚಿತ್ರ, 1989ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕಲ್ಲಿದ್ದಲು ಗಣಿ ರಕ್ಷಣಾ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ದಿವಂಗತ ಜಸ್ವಂತ್ ಸಿಂಗ್ ಗಿಲ್ ಅವರ ಜೀವನನ್ನು ಆಧರಿಸಿದೆ. ಈ ಸಿನಿಮಾದಲ್ಲಿ ಅಕ್ಷಯ್​ ಜೊತೆ ಪರಿಣಿತಿ ಚೋಪ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳು ಎಎಪಿ ನಾಯಕ ರಾಘವ್ ಚಡ್ಡಾ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದು, ಮದುವೆ ಬಳಿಕ ಬಿಡುಗಡೆ ಆದ ನಟಿಯ ಮೊದಲ ಚಿತ್ರವಿದು. ಇಂದು ಸುಮಾರು 2,500 ಸ್ಕ್ರೀನ್​ಗಳಲ್ಲಿ ಪ್ರದರ್ಶನ ಪ್ರಾರಂಭಿಸಿರುವ ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ ಸಿನಿಮಾ 120 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ.

ಇದನ್ನೂ ಓದಿ: ಪ್ರಭಾಸ್​ - ಕೃತಿ ಸನೋನ್ ಡೇಟಿಂಗ್​ ವದಂತಿ: ನಟಿಯ ಬಾಳಸಂಗಾತಿಯಾಗುವವರಲ್ಲಿ ಈ ಗುಣಗಳಿರಬೇಕಂತೆ

ಥ್ಯಾಂಕ್ಯೂ ಫಾರ್ ಕಮಿಂಗ್ ಬಾಕ್ಸ್​ ಆಫೀಸ್​ ಕಲೆಕ್ಷನ್​ ಅಂದಾಜು: ಭೂಮಿ ಪೆಡ್ನೇಕರ್ ಸೇರಿದಂತೆ ಬಹುತಾರಾಗಣದ ಥ್ಯಾಂಕ್ಯೂ ಫಾರ್ ಕಮಿಂಗ್ ಸಿನಿಮಾ ಕೂಡ ಇಂದು ತೆರೆಕಂಡಿದೆ. ಈ ಚಿತ್ರ ಸಹ ಬಾಕ್ಸ್ ಆಫೀಸ್​ನಲ್ಲಿ ನಿಧಾನಗತಿಯಲ್ಲಿ ಮುಂದುವರಿಯಲಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ತನ್ನ ಮೊದಲ ದಿನ ಸುಮಾರು 1 ಕೋಟಿ ರೂಪಾಯಿ ಸಂಗ್ರಹಿಸಲಿದೆ. ವರದಿಗಳ ಪ್ರಕಾರ, ಚಿತ್ರದ ಬಜೆಟ್‌ 40 ಕೋಟಿ ರೂಪಾಯಿ. ಕರಣ್ ಬೂಲಾನಿ ನಿರ್ದೇಶಿಸಿದ್ದು, ಇದು ಅವರ ಚೊಚ್ಚಲ ಚಿತ್ರ.

ಇದನ್ನೂ ಓದಿ: Dono: ಡೋನೊ ಚಿತ್ರತಂಡಕ್ಕೆ ಸೂಪರ್​ ಸ್ಟಾರ್ ಸಲ್ಮಾನ್​ ಖಾನ್​ ಶುಭ ಹಾರೈಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.