ಬೆಂಗಳೂರು: ಅಕ್ಟೋಬರ್ 6ರಂದು ಅಂದರೆ ಕಳೆದ ಶುಕ್ರವಾರ ಬಾಲಿವುಡ್ನಲ್ಲಿ ಬಹುನಿರೀಕ್ಷಿತ ಚಿತ್ರಗಳಾದ 'ಮಿಷನ್ ರಾಣಿಗಂಜ್' ಮತ್ತು 'ಥ್ಯಾಂಕ್ ಯು ಫಾರ್ ಕಮಿಂಗ್' ಚಿತ್ರಗಳು ಬಿಡುಗಡೆಯಾಗಿದ್ದು, ಇದೀಗ ಎರಡು ಚಿತ್ರಗಳು ಭಾರಿ ಪೈಪೋಟಿ ನಡೆಸುತ್ತಿದೆ. ನೈಜ ಕಥೆ ಮತ್ತು ಯುವ ಪೀಳಿಗೆಯ ಕಥೆಯನ್ನು ಹೊಂದಿರುವ ಈ ಚಿತ್ರಗಳು ಸದ್ಯ ಗಲ್ಲ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ. ಅಕ್ಷಯ್ ಕುಮಾರ್ ಅವರು 'ಮಿಷನ್ ರಾಣಿಗಂಜ್: ದಿ ಗ್ರೇಟ್ ರೆಸ್ಕ್ಯೂ' ಹಾಗೂ ಭೂಮಿ ಪಡ್ನೇಕರ್ ಅಭಿಯನದ 'ಥ್ಯಾಂಕ್ ಯು ಫಾರ್ ಕಮ್ಮಿಂಗ್' ಎರಡು ಚಿತ್ರಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ.
- " class="align-text-top noRightClick twitterSection" data="">
1989ರಲ್ಲಿ ಪಶ್ಚಿಮ ಬಂಗಾಳದ ರಾಣಿಗಂಜ್ ಕಲ್ಲಿದ್ದಲ್ಲು ಗಣಿಯಲ್ಲಿ ನಡೆದ ನೈಜ ಕಥೆ ಹೊಂದಿರುವ 'ಮಿಷನ್ ರಾಣಿಗಂಜ್'ಗೆ ನಿರ್ದೇಶಕ ಟಿನು ಸುರೇಶ್ ದೇಸಾಯಿ ಆಕ್ಷ್ಯನ್ ಕಟ್ ಹೇಳಿದ್ದಾರೆ. ಈ ಚಿತ್ರವೂ ದೇಶಿಯ ಬಾಕ್ಸ್ ಆಫೀಸ್ನಲ್ಲಿ 2.8 ಕೋಟಿ ಗಳಿಕೆ ಕಂಡಿದೆ ಎಂದು ಇಂಡಸ್ಟ್ರಿ ಟ್ರಾಕರ್ ಸ್ಯಾಕ್ನಿಲ್ಕ್ ವರದಿ ಮಾಡಿದೆ. ಚಿತ್ರ ಬಿಡುಗಡೆಯಾದ ಆರನೇ ದಿನದಲ್ಲಿ 1.43 ಕೋಟಿ ಲಾಭ ಕಂಡಿದೆ ಎಂದು ವರದಿಯಾಗಿದೆ.
ಇನ್ನು ಮತ್ತೊಂದೆಡೆ ಯುವತಿಯರ ಕಥಾಹಂದರ ಹೊಂದಿರುವ 'ಥ್ಯಾಂಕ್ ಯು ಫಾರ್ ಕಮ್ಮಿಂಗ್' ಚಿತ್ರ ಮೊದಲ ದಿನವೇ 1.06 ಕೋಟಿ ಗಳಿಕೆ ಮಾಡುವ ಮೂಲಕ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಸ್ಯಾಕ್ನಿಲ್ಕ್ ವರದಿ ಅನುಸಾರ ಈ ಚಿತ್ರ ಆರನೇ ದಿನಕ್ಕೆ 0.4 ಕೋಟಿ ಸಂಪಾದಿಸಿದೆ. ಈ ಮೂಲಕ ಚಿತ್ರ ಬಿಡುಗಡೆ ಆದಾಗಿನಿಂದ ಒಟ್ಟಾರೆ 5.62 ಕೋಟಿ ಬಾಚಿದೆ. ಕರಣ್ ಬೊಲಾನಿ ನಿರ್ದೇಶದನ ಈ ಚಿತ್ರದಲ್ಲಿ ಶೆಹನಾಜ್ ಗಿಲ್, ಡೋಲಿ ಸಿಂಗ್, ಶಿಬಾನಿ ಬೇಡಿ ಮತ್ತು ಕುಶ ಕಪಿಲ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
- " class="align-text-top noRightClick twitterSection" data="">
ಎರಡು ವಿಭಿನ್ನ ಕಥೆ ಹೊಂದಿರುವ ಈ ಚಿತ್ರಗಳು ಉತ್ತಮ ಆರಂಭಿಕ ಕಂಡಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಯನ್ನು ಪಡೆದಿದೆ. ಬಿಡುಗಡೆಯಾಗಿ ವಾರದ ಬಳಿಕ ಕೊಂಚ ಗಳಿಕೆ ಕಡಿಮೆ ಮಾಡಿಕೊಂಡಿರುವ ಈ ಎರಡು ಚಿತ್ರಗಳು ಈ ವಾರಾಂತ್ಯದಲ್ಲಿ ಮತ್ತೆ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ. ಆದರೂ ಮುಂದಿನ ದಿನದಲ್ಲಿ ಚಿತ್ರದ ಗಳಿಕೆ ಹೇಗಿರಲಿದೆ ಎಂಬ ಕುತೂಹಲ ಸದ್ಯ ಬಾಲಿವುಡ್ ಮಂದಿಯಲ್ಲಿದೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ನಟಿ ಶೆಹನಾಜ್ ಗಿಲ್: ಆರೋಗ್ಯ ವಿಚಾರಿಸಿದ ನಿರ್ಮಾಪಕಿ ರಿಯಾ ಕಪೂರ್