ETV Bharat / entertainment

ವರ್ಕೌಟ್​ ವಿಡಿಯೋ ಹಂಚಿಕೊಂಡ ನಟ ಮಹೇಶ್​ ಬಾಬು: 'ಭಾರತದ ಜಾನ್​ ವಿಕ್​' ಎಂದ ಫ್ಯಾನ್ಸ್​

ಟಾಲಿವುಡ್​ ನಟ ಮಹೇಶ್​ ಬಾಬು ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವ ವಿಡಿಯೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

author img

By

Published : Jul 1, 2023, 7:15 PM IST

Mahesh Babu
ಮಹೇಶ್​ ಬಾಬು

ಟಾಲಿವುಡ್​ ಸ್ಟಾರ್​ ನಟ ಮಹೇಶ್​ ಬಾಬು ತಮ್ಮ ಫಿಟ್ನೆಸ್​ ಕಾಪಾಡಿಕೊಳ್ಳುವುದರಲ್ಲಿ ಸದಾ ಮುಂದು. ಇದೀಗ ಹ್ಯಾಂಡ್ಸಮ್​ ಲುಕ್​ ಕಾಪಾಡಿಕೊಳ್ಳಲು ಸಹಾಯ ಮಾಡುವ ವರ್ಕೌಟ್​ ವಿಡಿಯೋವನ್ನು ಅಭಿಮಾನಿಗಳಿಗಾಗಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಫ್ಯಾನ್ಸ್​ ನಟನಿಗೆ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ. ಜಿಮ್​ನಲ್ಲಿ ದೇಹವನ್ನು ದಂಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡ ಮಹೇಶ್​ ಬಾಬು, ತಮ್ಮ ಶನಿವಾರದ ದಿನಚರಿಯನ್ನು ಈ ಮೂಲಕ ಬಹಿರಂಗಪಡಿಸಿದ್ದಾರೆ.

47 ವರ್ಷ ವಯಸ್ಸಾದರೂ, 20ರಂತೆ ಕಾಣುವ ಈ ಹೀರೋನ ಇನ್​ಸ್ಟಾ ಪೋಸ್ಟ್​ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಜಿಮ್​ನಲ್ಲಿ ದೇಹ ದಂಡಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಅವರು, "ನನ್ನ ಶನಿವಾರದ ಸಿಜಲ್ ಸೆಟ್! ನನ್ನ ನೆಚ್ಚಿನ ಸ್ಕಿಲ್​ ಮಿಲ್​ ಫಿನಿಶರ್​ ಜೊತೆ. 1 ನಿಮಿಷ ಲ್ಯಾಂಡ್‌ಮೈನ್ ಪ್ರೆಸ್, 1 ನಿಮಿಷ ಕೆಟಲ್‌ಬೆಲ್ ಸ್ವಿಂಗ್, 1 ನಿಮಿಷ ಸ್ಕಿಲ್‌ಮಿಲ್ ಓಟ. ನೀವು ಎಷ್ಟು ಸೆಟ್ ಮಾಡಬಹುದು?" ಎಂದು ತಮ್ಮ ಫ್ಯಾನ್ಸ್​ಗೆ ಪ್ರಶ್ನೆ ಎಸಗಿದ್ದಾರೆ.

ಜೊತೆಗೆ ವಿಡಿಯೋಗೆ ನಟ ತಮ್ಮ ಜಿಮ್ ತರಬೇತುದಾರರಾದ ಮಿನಾಶ್ ಗೇಬ್ರಿಯಲ್ ಮತ್ತು ಹೀತ್ ಮ್ಯಾಥ್ಯೂಸ್ ಅವರನ್ನು ಟ್ಯಾಗ್​ ಮಾಡಿದ್ದಾರೆ. ಮಹೇಶ್​ ಪೋಸ್ಟ್​ ಹಂಚಿಕೊಂಡ ಕೂಡಲೇ ಅವರ ಅಭಿಮಾನಿಗಳು ನಟನನ್ನು ಹೊಗಳಲು ಕಮೆಂಟ್​ ವಿಭಾಗವನ್ನು ಆಯ್ದುಕೊಂಡಿದ್ದಾರೆ. ಮಹೇಶ್​ ವರ್ಕೌಟ್​ ವಿಡಿಯೋಗೆ ಪ್ಯಾನ್ಸ್​ ಫಿದಾ ಆಗಿದ್ದಾರೆ. ಅವರ ಫಿಟ್​ನೆಸ್​ ಮೇಲಿನ ಪ್ರೀತಿಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: Actor Komal: ಭಯದ ಜೊತೆ ನಗಿಸಲು ಮತ್ತೆ ಬಂದ್ರು 'ನಮೋ ಭೂತಾತ್ಮ 2' ಗ್ಯಾಂಗ್​; ಹಾರರ್ ಟೀಸರ್​ ನೋಡಿ..

ಮಹೇಶ್​ ಬಾಬು ವಿಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "ನಾನು ಅವರನ್ನು ಜಾನ್​ ವಿಕ್​ ಆಗಿ ನೋಡುತ್ತಿದ್ದೇನೆಯೇ?" ಎಂದಿದ್ದಾರೆ. ಇನ್ನೊಬ್ಬರು ನಟನನ್ನು "ಭಾರತದ ಜಾನ್​ ವಿಕ್​" ಎಂದೇ ಒಪ್ಪಿಕೊಂಡರು. ಫ್ಯಾನ್ಸ್​ ಮಾತ್ರವಲ್ಲದೇ ಮಹೇಶ್​ ಬಾಬು ಪತ್ನಿ ಕೂಡ ವಿಡಿಯೋಗೆ ಕಮೆಂಟ್​ ಮಾಡಿದ್ದಾರೆ. ಅನೇಕ ಫೈರ್​ ಎಮೋಜಿನೊಂದಿಗೆ ನಮ್ರತಾ ಶಿರೋಡ್ಕರ್ ಪ್ರತಿಕ್ರಿಯಿಸಿದ್ದಾರೆ.

ಇನ್ನೂ ಮಹೇಶ್​ ಬಾಬು ಸಿನಿಮಾ ವಿಚಾರವಾಗಿ ನೋಡುವುದಾದರೆ, ಎರಡು ಬಹುನಿರೀಕ್ಷಿತ ಚಿತ್ರಗಳಲ್ಲಿ ನಟ ಬ್ಯುಸಿಯಾಗಿದ್ದಾರೆ. ಸದ್ಯ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ 'ಗುಂಟೂರು ಖಾರಂ'ನಲ್ಲಿ ನಟಿಸುತ್ತಿದ್ದಾರೆ. ಇದು ಮಹೇಶ್​ ಬಾಬು 28ನೇ ಸಿನಿಮಾವಾಗಿದ್ದು, 2024ರ ಜನವರಿ 24 ರಂದು ಬಿಡುಗಡೆಯಾಗಲಿದೆ. ಇದರಲ್ಲಿ ನಾಯಕಿಯಾಗಿ ಕನ್ನಡದ ನಟಿ ಶ್ರೀಲೀಲಾ ನಟಿಸುತ್ತಿದ್ದಾರೆ.

ಇದರ ಹೊರತಾಗಿ ಆರ್​ಆರ್​ಆರ್​ ಖ್ಯಾತಿಯ ಎಸ್​ಎಸ್​ ರಾಜಮೌಳಿ ಜೊತೆಗೆ ಮಹೇಶ್​ ಬಾಬು ಕೈ ಜೋಡಿಸಲಿದ್ದಾರೆ. ಈ ಸಿನಿಮಾಗೆ ತಾತ್ಕಾಲಿಕವಾಗಿ SSMB29 ಎಂದು ಹೆಸರಿಡಲಾಗಿದೆ. ರಾಜಮೌಳಿ ಜೊತೆಗಿನ ಮಹೇಶ್ ಬಾಬು ಅವರ ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಿರ್ಮಿಸಲಾದ ಅತ್ಯಂತ ದುಬಾರಿ ಚಿತ್ರ ಎಂದು ಹೇಳಲಾಗುತ್ತಿದೆ. ಜೊತೆಗೆ ಇದೊಂದು ಆ್ಯಕ್ಷನ್ ಅಡ್ವೆಂಚರ್ ಸಿನಿಮಾ ಎನ್ನಲಾಗಿದೆ.

ಇದನ್ನೂ ಓದಿ: ಹೆಣಗಳ ರಾಶಿ ಮಧ್ಯೆ 'ಕ್ಯಾಪ್ಟನ್​ ಮಿಲ್ಲರ್': ಧನುಷ್​-ಶಿವಣ್ಣ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.