ನಟ ವಿಜಯ್ ದೇವರಕೊಂಡ, ನಟಿ ಅನನ್ಯಾ ಪಾಂಡೆ ಅಭಿನಯದ ಬಹು ನಿರೀಕ್ಷಿತ ಲೈಗರ್ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಆಗಸ್ಟ್ 25ಕ್ಕೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಲಿದ್ದು, ಲೈಗರ್ ಚಿತ್ರತಂಡ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಭರ್ಜರಿ ಪ್ರಚಾರ ಕೈಗೊಳ್ಳುತ್ತಿದೆ.
ಒಂದೆಡೆ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಆದ್ರೆ ಟ್ವಿಟರ್ನಲ್ಲಿ ಸಿನಿಮಾ ಬಹಿಷ್ಕರಿಸುವಂತೆ ಅಭಿಯಾನ ಆರಂಭವಾಗಿದೆ. ಇದಕ್ಕೆ ನಟ ವಿಜಯ್ ದೇವರಕೊಂಡ ಟ್ವೀಟ್ ಮಾಡಿ, 'ನಾವು ಸರಿ ಮಾರ್ಗದಲ್ಲಿರುವಾಗ, ನಮ್ಮ ಧರ್ಮವನ್ನು ನಾವು ಪಾಲಿಸುತ್ತಿರುವಾಗ ಯಾರ ಮಾತನ್ನೂ ಕೇಳೋದಿಲ್ಲ.. ಹೋರಾಡು#ಲೈಗರ್' ಎಂದು ಬರೆದಿದ್ದಾರೆ. ಜೊತೆಗೆ ಆಂಧ್ರಪ್ರದೇಶದಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಚಿತ್ರ ಯಶಸ್ವಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ತಮ್ಮ ಚೊಚ್ಚಲ ಪ್ಯಾನ್ ಇಂಡಿಯಾ ಚಿತ್ರ ಭರ್ಜರಿ ಯಶಸ್ಸು ಕಾಣಲಿದೆ ಎಂದು ನಟ ವಿಜಯ್ ದೇವರಕೊಂಡ ವಿಶ್ವಾಸ ಹೊಂದಿದ್ದಾರೆ. ಬಿಡುಗಡೆಗೂ ಮುನ್ನ ಚಿತ್ರತಂಡ ದೇಶಾದ್ಯಂತ ಪ್ರವಾಸ ಮಾಡುತ್ತಿದೆ. ಶನಿವಾರ ಆಂಧ್ರಪ್ರದೇಶದ ಗುಂಟೂರಿನಲ್ಲಿ ಪ್ರಚಾರ ಮತ್ತು ಲೈಗರ್ ಪ್ರಿ ರಿಲೀಸ್ ಈವೆಂಟ್ ಜರುಗಿತು. ಕಾರ್ಯಕ್ರಮದಲ್ಲಿ ನೆರೆದಿದ್ದ ಅಪಾರ ಜನಸಮೂಹವು ಆಂಧ್ರಪ್ರದೇಶದಲ್ಲಿ ವಿಜಯ್ ದೇವರಕೊಂಡ ಮತ್ತು ಲೈಗರ್ ಕ್ರೇಜ್ ಅನ್ನು ಬಹಿರಂಗಪಡಿಸಿತು.
ಸಮಾರಂಭದಲ್ಲಿ ಮಾತನಾಡಿದ ವಿಜಯ್ ದೇವರಕೊಂಡ, ಕಳೆದ ಇಪ್ಪತ್ತು ದಿನಗಳಿಂದ ನಾನು ದೇಶ ಸುತ್ತುತ್ತಿದ್ದೇನೆ, ನನಗೆ ಶಕ್ತಿಯಿಲ್ಲ ಮತ್ತು ನನ್ನ ಆರೋಗ್ಯವು ನನಗೆ ಸಹಕರಿಸುತ್ತಿಲ್ಲ. ಆದರೆ ನಿಮ್ಮ ಪ್ರೀತಿಯಿಂದ ನಾನು ಇಲ್ಲಿಗೆ ಬರಲು ಬಯಸಿದೆ. ಲೈಗರ್ ಸಿನಿಮಾ ಪ್ರಚಾರ ಕಾರ್ಯಕ್ರಮಗಳು ನನ್ನ ಜೀವಮಾನದ ನೆನಪುಗಳು. ಇಂಥಹ ಅನೇಕ ನೆನಪುಗಳನ್ನು ಉಳಿಸಿಕೊಳ್ಳಲು ಇದು ನನ್ನ ಮೊದಲ ಹೆಜ್ಜೆಯಾಗಲಿದೆ. ನಾನು ನಿಮಗೆ ಗ್ಯಾರಂಟಿ ಕೊಡುತ್ತೇನೆ - ಲೈಗರ್ ಯಶಸ್ವಿಯಾಗಲಿದೆ. ನೀವು ಆಗಸ್ಟ್ 25ಕ್ಕೆ ಗುಂಟೂರಿನಲ್ಲಿ ಸದ್ದು ಮಾಡಬೇಕು. ಚಿತ್ರವನ್ನು ನೋಡಿ ಹರಸಬೇಕೆಂದು ಕೋರಿದರು.
ಇದನ್ನೂ ಓದಿ: Boycott Liger Movie .. ಭರ್ಜರಿ ಪ್ರಚಾರದ ವೇಳೆ ಲೈಗರ್ ಬಹಿಷ್ಕರಿಸುವಂತೆ ಟ್ವಿಟರ್ ಅಭಿಯಾನ
ನಿರ್ದೇಶಕ ಪುರಿ ಜಗನ್ನಾಥ್ ಕೂಡ ಯಾವುದೇ ಚಿಂತೆಯನ್ನು ಪ್ರದರ್ಶಿಸದೇ ಸಿನಿಮಾ ಯಶಸ್ಸಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಜನಸಮೂಹವನ್ನು ನೋಡಿದರೆ ನನಗೆ ಲೈಗರ್‌ನ ಯಶಸ್ಸಿನ ಸಂಭ್ರಮಾಚರಣೆ ಎಂದು ಅನಿಸುತ್ತಿದೆ. ಇದು ಚಿತ್ರದ ಮೊದಲು ಪ್ರಚಾರದಂತೆ ಕಾಣುತ್ತಿಲ್ಲ. ಪ್ರತಿಯೊಬ್ಬರೂ ಟಿಕೆಟ್ ಖರೀದಿಸಿದರೆ ಚಿತ್ರ ಬ್ಲಾಕ್‌ಬಸ್ಟರ್ ಆಗೋದ್ರಲ್ಲಿ ಸಂಶಯವಿಲ್ಲ. ವಿಜಯ್ ಚಿತ್ರದಲ್ಲಿ ಬಾಕ್ಸರ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಅನನ್ಯಾ ಮತ್ತು ರಮ್ಯಾ ಕೃಷ್ಣ, ಮೈಕ್ ಟೈಸನ್ ಹೈಲೈಟ್ ಆಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಲೈಗರ್ ಸಿನಿಮಾ ಪ್ರಚಾರ ಜೋರು.. ಅಭಿಮಾನಿಗಳ ಹೃದಯ ಕದ್ದ ಬೋಲ್ಡ್ ನಟಿ ಅನನ್ಯಾ ಪಾಂಡೆ ಸ್ಟೈಲಿಶ್ ಲುಕ್
ಲೈಗರ್ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅನನ್ಯಾ ಪಾಂಡೆ ತೆಲುಗಿನಲ್ಲಿ ಕೆಲವು ಸಾಲುಗಳನ್ನು ಮಾತನಾಡಲು ಪ್ರಯತ್ನಿಸಿದರು. ನನಗೆ ತೆಲುಗು ಪ್ರೇಕ್ಷಕರೆಂದರೆ ತುಂಬಾ ಇಷ್ಟ. ಇಲ್ಲಿಗೆ ಬರುವ ಮುನ್ನ ನಿರ್ದೇಶಕ ಪುರಿ ಜಗನ್ನಾಥ್ ಅವರು ಗುಂಟೂರಿನ ಬಗ್ಗೆ ಹೇಳಿದ್ದರು. ಗುಂಟೂರಿನಲ್ಲಿ ಸಿನಿಮಾ ಹಿಟ್ ಆದರೆ ಇಡೀ ಭಾರತದಲ್ಲೇ ಸದ್ದು ಮಾಡುತ್ತೆ ಅಂದಿದ್ದರು. ನನ್ನ ತೆಲುಗು ಚೊಚ್ಚಲ ಚಿತ್ರಕ್ಕೆ ಉತ್ತಮ ತಂಡ ಸಿಕ್ಕಿದೆ ಎಂದು ತಿಳಿಸಿದರು.