ETV Bharat / entertainment

ದಳಪತಿ ವಿಜಯ್​ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೇಲರ್​ ಬಿಡುಗಡೆ - ಈಟಿವಿ ಭಾರತ ಕನ್ನಡ

ದಳಪತಿ ವಿಜಯ್​ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೇಲರ್​ ಬಿಡುಗಡೆಯಾಗಿದೆ. ಅಕ್ಟೋಬರ್​ 19ರಂದು ಸಿನಿಮಾ ತೆರೆ ಕಾಣಲಿದೆ.

Leo trailer out: Vijay brings out the real power in this action-packed gangster drama
ದಳಪತಿ ವಿಜಯ್​ ನಟನೆಯ ಬಹುನಿರೀಕ್ಷಿತ 'ಲಿಯೋ' ಚಿತ್ರದ ಟ್ರೇಲರ್​ ಬಿಡುಗಡೆ
author img

By ETV Bharat Karnataka Team

Published : Oct 5, 2023, 9:39 PM IST

ಕಾಲಿವುಡ್​ ಸೂಪರ್​ಸ್ಟಾರ್ ನಟ ದಳಪತಿ ವಿಜಯ್​ ಮುಂಬರುವ ಬಹುನಿರೀಕ್ಷಿತ ಚಿತ್ರ 'ಲಿಯೋ'. ಇದೇ ಅಕ್ಟೋಬರ್​ 19ರಂದು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲು ಸಿದ್ಧಗೊಂಡಿದೆ. ತಮಿಳಿನ ಖ್ಯಾತ ನಿರ್ದೇಶಕ ಲೋಕೇಶ್​ ಕನಕರಾಜ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರತಂಡ ಪೋಸ್ಟರ್​ ಹಾಗೂ ಹಾಡುಗಳಿಂದ ಪ್ರಚಾರ ಕಾರ್ಯ ಶುರು ಮಾಡಿದೆ. ಇದೀಗ ಚಿತ್ರದ ಟ್ರೇಲರ್ ಕೂಡ​ ಬಿಡುಗಡೆಯಾಗಿದೆ.

  • " class="align-text-top noRightClick twitterSection" data="">

'ಲಿಯೋ' ಸಿನಿಮಾದ ನಿರ್ಮಾಣ ಸಂಸ್ಥೆ ಸೆವೆನ್​ ಸ್ಕ್ರೀನ್​ ಸ್ಟುಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಟ್ರೇಲರ್​ ಲಿಂಕ್​ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ. "ನಮ್ಮ ಹೃದಯದಿಂದ ನಿಮ್ಮ ಹೃದಯಕ್ಕೆ ಈ ಔತಣದ ಸೇವೆಯನ್ನು ಮಾಡುತ್ತಿದ್ದೇವೆ" ಎಂದು ಶೀರ್ಷಿಕೆ ನೀಡಿದೆ. ಅದಕ್ಕೂ ಮೊದಲು ಟ್ರೇಲರ್​ ದಿನಾಂಕವನ್ನು ತಿಳಿಸಲು ಚಿತ್ರತಂಡ ಹೊಸ ಪೋಸ್ಟರ್​ನೊಂದಿಗೆ, "ನಿಮ್ಮ ಆರ್ಡರ್​ ಅನ್ನು ಸಿದ್ಧಪಡಿಸಲಾಗುತ್ತಿದೆ. ಲಿಯೋ ಟ್ರೇಲರ್​ ಆನ್​ ದಿ ವೇ. ನಿಮ್ಮ ಊಟವನ್ನು ಆನಂದಿಸಲು ಸಿದ್ಧರಾಗಿ. ಸೆವೆನ್​ ಸ್ಕ್ರೀನ್​ ಸ್ಟುಡಿಯೋ ಅಕ್ಟೋಬರ್​ 5 ರಂದು ನಿಮ್ಮಲ್ಲಿಗೆ ತಲುಪಿಸುತ್ತಿದೆ" ಎಂದು ಕ್ಯಾಪ್ಶನ್​ ಬರೆದುಕೊಂಡಿತ್ತು.

ಇದಕ್ಕೂ ಮುನ್ನ ಚಿತ್ರದ ನಾಯಕಿ ತ್ರಿಷಾ ಮತ್ತು ಪ್ರಮುಖ ಪಾತ್ರಧಾರಿ ಅರ್ಜುನ್​ ಸರ್ಜಾ ಅವರ ಫಸ್ಟ್​ ಲುಕ್​ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು. ಇನ್ನೂ ಚಿತ್ರದ ಕನ್ನಡ ಪೋಸ್ಟರ್​ ಅನ್ನು ಕೂಡ ಇತ್ತೀಚೆಗೆ ಅನಾವರಣಗೊಳಿಸಲಾಗಿತ್ತು. "ಶಾಂತವಾಗಿರಿ ಮತ್ತು ನಿಮ್ಮನ್ನು ನೀವು ಪಾರು ಮಾಡಿಕೊಳ್ಳಲು ಸಂಚು ರೂಪಿಸಿ. #LeoPosterFeast ಕಥೆಗಳನ್ನು ಅನಾವರಣಗೊಳಿಸುತ್ತದೆ. ಒಂದು ಸಮಯದಲ್ಲಿ ಒಂದು ಪೋಸ್ಟರ್​. ಕನ್ನಡದಲ್ಲಿ ಲಿಯೋ ಭರ್ಜರಿ ರಿಲೀಸ್​" ಎಂಬ ಶೀರ್ಷಿಕೆಯೊಂದಿಗೆ ಸೆವೆನ್​ ಸ್ಕ್ರೀನ್​ ಸ್ಟುಡಿಯೋ ಕನ್ನಡ ಪೋಸ್ಟರ್​ ಅನ್ನು ಹಂಚಿಕೊಂಡಿತ್ತು.

ಇದನ್ನೂ ಓದಿ: 'ಲಿಯೋ' ಚಿತ್ರದಿಂದ ಸಂಜಯ್​ ದತ್​ ಫಸ್ಟ್​ ಲುಕ್​ ಔಟ್​: ವಿಲನ್​ ಪಾತ್ರದಲ್ಲಿ ಬಾಲಿವುಡ್ ನಟ​

ನಟ ವಿಜಯ್​ ಅಭಿನಯದ ಲಿಯೋ ಚಿತ್ರದ ಮೇಲೆ ಅವರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 'ಲಿಯೋ' ಸಿನಿಮಾವನ್ನು ಖೈದಿ, ಮಾಸ್ಟರ್​ ಮತ್ತು ವಿಕ್ರಮ್​ನಂತಹ ಮಾಸ್ಟರ್​ಪೀಸ್​ ಚಿತ್ರಗಳಿಗೆ ಆಕ್ಷನ್​ ಕಟ್​ ಹೇಳಿರುವ ಲೋಕೇಶ್​ ಕನಕರಾಜ್​ ನಿರ್ದೇಶಿಸುತ್ತಿದ್ದಾರೆ. 'ಮಾಸ್ಟರ್' ಚಿತ್ರದ ನಂತರ 'ಲಿಯೋ' ಮೂಲಕ ವಿಜಯ್​ ಮತ್ತು ಲೋಕೇಶ್​ ಕನಕರಾಜ್​ ಮತ್ತೆ ಒಂದಾಗಿದ್ದಾರೆ. ವಿಜಯ್​ ಅವರು ಈಗಾಗಲೇ ತಮ್ಮ ಪಾತ್ರದ ಶೂಟಿಂಗ್​ ಮುಗಿಸಿದ್ದಾರೆ.

ಅಕ್ಟೋಬರ್​ 19 ರಂದು ರಿಲೀಸ್​: ಈ ಸಿನಿಮಾವು ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರದಲ್ಲಿ ತ್ರಿಶಾ, ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರಿಯಾ ಆನಂದ್, ಗೌತಮ್ ವಾಸುದೇವ್ ಮೆನನ್, ಮನ್ಸೂರ್ ಅಲಿ ಖಾನ್, ಸ್ಯಾಂಡಿ ಮತ್ತು ಮಿಸ್ಕಿನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸವೆನ್ ಸ್ಕ್ರೀನ್ ಸ್ಟುಡಿಯೋದ ಲಲಿತ್ ಕುಮಾರ್ ನಿರ್ಮಿಸಿರುವ 'ಲಿಯೋ' ಚಿತ್ರ ಅಕ್ಟೋಬರ್​ 19 ರಂದು ಬಿಡುಗಡೆಯಾಗಲಿದೆ.

ಇದನ್ನೂ ಓದಿ: ದಸರಾಗೆ ಸಾಲು ಸಾಲು ಸಿನಿಮಾ: ತೆರೆ ಮೇಲೆ ಸ್ಟಾರ್ ನಟರ ಅಬ್ಬರ, ಯಾರಿಗೆ ಪ್ರೇಕ್ಷಕರ ಜೈಕಾರ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.