ETV Bharat / entertainment

ವಿಜಯ್ ಅಭಿನಯದ 'ಲಿಯೋ'ಗೆ ಮಿಶ್ರ ಪ್ರತಿಕ್ರಿಯೆ; ಕಲೆಕ್ಷನ್​ ಡೀಟೆಲ್ಸ್​ ಇಲ್ಲಿದೆ! - Leo latest news

Leo box office collection: ನಟ ವಿಜಯ್ ಅವರ 'ಲಿಯೋ' ಸಿನಿಮಾದ ಲೇಟೆಸ್ಟ್‌ ಬಾಕ್ಸ್ ಆಫೀಸ್​ ಮಾಹಿತಿ ಇಲ್ಲಿದೆ.

Leo collection
ಲಿಯೋ ಕಲೆಕ್ಷನ್
author img

By ETV Bharat Karnataka Team

Published : Oct 22, 2023, 3:50 PM IST

ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟ ವಿಜಯ್ ಅಭಿನಯದ 'ಲಿಯೋ' ಗುರುವಾರ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ ಅಭಿಮಾನಿಗಳು ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಇದಕ್ಕೆ ಸಂಬಂಧಿಸಿದ​ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದ್ರೆ ಸಿನಿಮಾ ವೀಕ್ಷಿಸಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್​ ಮಾಡಿದ್ದು, ಎರಡನೇ ದಿನ ಕೊಂಚ ತಗ್ಗಿತು. ಮೂರನೇ ದಿನ ಉತ್ತಮ ಅಂಕಿಅಂಶ ಹೊಂದಿದ್ದು, ಬಾಕ್ಸ್​ ಆಫೀಸ್​ ಅಂಕಿಅಂಶಗಳು ವಾರದ ದಿನಗಳಲ್ಲಿ ಇಳಿಮುಖವಾಗುವ ಸಾಧ್ಯತೆಗಳಿವೆ.​

ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಚಿತ್ರವು ಮೂರು ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ದಾಟಿದೆ. ನಾಲ್ಕು ದಿನಗಳಲ್ಲಿ (ಇಂದಿನ ಅಂಕಿಅಂಶ ಸೇರಿಸಿ) ಭಾರತೀಯ ಬಾಕ್ಸ್ ಆಫೀಸ್​ನಲ್ಲಿ 179.71 ಕೋಟಿ ರೂಪಾಯಿ ಸಂಗ್ರಹಿಸುವ ಸಾಧ್ಯತೆ ಇದೆ. ಲಿಯೋ ಈಗಾಗಲೇ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿಗಳ ಗಡಿ ದಾಟಿದೆ.

ಭಾರತದಲ್ಲಿ ಲಿಯೋ ಮೊದಲ ಶನಿವಾರದಂದು (ವಾರಾಂತ್ಯ) 40 ಕೋಟಿ ರೂಪಾಯಿ ಸಂಗ್ರಹಿಸಿದೆ. ಮೊದಲ ದಿನ 64 ಕೋಟಿ ರೂಪಾಯಿ ಮತ್ತು ಎರಡನೇ ದಿನ 35 ಕೋಟಿ ರೂಪಾಯಿ ಕಲೆಕ್ಷನ್​​ ಮಾಡಿತ್ತು. 4ನೇ ದಿನದಂದು ಅಂದರೆ ಇಂದು ದೇಶೀಯ ಮಾರುಕಟ್ಟೆಯಲ್ಲಿ ಸರಿಸುಮಾರು 40 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ. ಮೊದಲ ದಿನ 64 ಕೋಟಿ ರೂ. ಗಳಿಸಿದ ಚಿತ್ರ ಎರಡನೇ ದಿನ 35 ಕೋಟಿ ರೂಪಾಯಿ ಗಳಿಸಿದ್ದು ಚಿತ್ರದ ಕಲೆಕ್ಷನ್​​ ಅತಿ ವೇಗವಾಗಿ ಇಳಿಯಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ ವಾರಾಂತ್ಯ ಉತ್ತಮ ಪ್ರದರ್ಶನ ಕೊಡುತ್ತಿದ್ದು, ಶನಿವಾರ 40 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ.

ಇದನ್ನೂ ಓದಿ: ಮಹಿಳಾ ಪ್ರಧಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ: 'ದಿ ಗರ್ಲ್​​ಫ್ರೆಂಡ್' ಫಸ್ಟ್ ಲುಕ್​ ರಿಲೀಸ್

  • #Leo WW Box Office

    Joseph Vijay ENTERS the elite ₹ 200 cr club.

    Tomorrow will be crucial for the film. Post which the recovery would be difficult in overseas markets.

    Day 1 - ₹ 115.90 cr
    Day 2 - ₹ 47.24 cr
    Day 3… pic.twitter.com/GK5tfdz04S

    — Manobala Vijayabalan (@ManobalaV) October 22, 2023 " class="align-text-top noRightClick twitterSection" data=" ">

ಸಿನಿಮಾ ವ್ಯವಹಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಅವರು 'ಲಿಯೋ' ಸಿನಿಮಾ ಜಾಗತಿಕವಾಗಿ 200 ಕೋಟಿ ರೂ. ದಾಟಿದೆ ಎಂದು ತಿಳಿಸಿದ್ದಾರೆ. ಲೋಕೇಶ್​ ಕನಕರಾಜ್​​ ನಿರ್ದೇಶನದ ಚಿತ್ರದ ಕಲೆಕ್ಷನ್​​ ಸಾಗರೋತ್ತರ ಪ್ರದೇಶದಲ್ಲಿ ಅತಿ ವೇಗವಾಗಿ ಇಳಿಯಲಿದೆ ಎಂದು ಇದೇ ವೇಳೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿಟ್​ ಆ್ಯಂಡ್​ ರನ್ ಕೇಸ್: ಹಿರಿಯ ನಟ ದಲೀಪ್​ ತಾಹಿಲ್​​ಗೆ ಜೈಲುಶಿಕ್ಷೆ

ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಸಿನಿಮಾದಲ್ಲಿ ದಳಪತಿ ವಿಜಯ್ ಮುಖ್ಯಪಾತ್ರದಲ್ಲಿ ನಟಿಸಿದ್ದರೆ, ಬಾಲಿವುಡ್ ಸೂಪರ್​​ ಸ್ಟಾರ್ ಸಂಜಯ್ ದತ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದು ದತ್ ಅವರ ಮೊದಲ ತಮಿಳು ಚಿತ್ರ. 14 ವರ್ಷಗಳ ಬ್ರೇಕ್‌ನ​ ಬಳಿಕ ತ್ರಿಷಾ ಕೃಷ್ಣನ್ ಹಾಗೂ ವಿಜಯ್ ಸ್ಕ್ರೀನ್​ ಶೇರ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.