ETV Bharat / entertainment

ಫ್ಯಾಷನ್​ ಡಿಸೈನರ್​​​ ಪ್ರತ್ಯುಷ್ಯಾ ಸಾವಿಗೆ ಈ ವಿಷಕಾರಿ ರಾಸಾಯನಿಕವೇ ಕಾರಣವಂತೆ!.. ಪೊಲೀಸರು ಹೇಳೋದೇನು?

ಹಿಂದಿ ಮತ್ತು ತೆಲುಗು ಚಿತ್ರರಂಗದ ಕೆಲವು ವ್ಯಕ್ತಿಗಳಿಗೆ ಫ್ಯಾಷನ್ ಡಿಸೈನರ್ ಆಗಿಯೂ ಪ್ರತ್ಯುಷಾ ಕೆಲಸ ಮಾಡಿದ್ದರು. ತೆಲುಗು ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೆಲಾ ಅವರು ಗರಿಮೆಲ್ಲರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪ್ರತ್ಯುಷಾ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

Late celebrity fashion designer suspected to have inhaled carbon monoxide, say police
ಫ್ಯಾಷನ್​ ಡಿಸೈನರ್​​​ ಪ್ರತ್ಯುಷ್ಯಾ ಸಾವಿಗೆ ಈ ವಿಷಕಾರಿ ರಾಸಾಯನಿಕವೇ ಕಾರಣವೇ
author img

By

Published : Jun 13, 2022, 9:05 AM IST

ಹೈದರಾಬಾದ್​: ಶನಿವಾರ ಆತ್ಮಹತ್ಯೆ ಮಾಡಿಕೊಂಡಿರುವ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರತ್ಯುಷಾ ಗರಿಮೆಲ್ಲಾ, ತಮ್ಮ ಜೀವ ಅಂತ್ಯಗೊಳಿಸಲು ಕಾರ್ಬನ್ ಮಾನಾಕ್ಸೈಡ್ ಬಳಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಈ ವಿಷಯದ ಬಗ್ಗೆ ಇನ್ನೂ ಖಚಿತತೆ ಸಿಕ್ಕಿಲ್ಲ, ಹೀಗಾಗಿ ಆ ಬಗೆಗಿನ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತ್ಯುಷಾ ಗರಿಮೆಲ್ಲ ಸ್ವಂತ ಅಂಗಡಿ ನಡೆಸುತ್ತಿದ್ದ ಪ್ರಸಿದ್ಧ ಡಿಸೈನರ್ ಆಗಿದ್ದಾರೆ. ಹಿಂದಿ ಮತ್ತು ತೆಲುಗು ಚಿತ್ರರಂಗದ ಕೆಲವು ವ್ಯಕ್ತಿಗಳಿಗೆ ಫ್ಯಾಷನ್ ಡಿಸೈನರ್ ಆಗಿಯೂ ಪ್ರತ್ಯುಷಾ ಕೆಲಸ ಮಾಡಿದ್ದರು. ತೆಲುಗು ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೆಲಾ ಅವರು ಗರಿಮೆಲ್ಲರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಪ್ರತ್ಯುಷಾ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

36 ವರ್ಷದ ಗರಿಮೆಲ್ಲಾ ಶನಿವಾರ ಮಧ್ಯಾಹ್ನ ತಮ್ಮ ಅಂಗಡಿಯ ವಾಶ್‌ರೂಮ್‌ನಲ್ಲಿ ಶವವಾಗಿ ಬಿದ್ದಿದ್ದರು ಎಂದು ಕುಟುಂಬ ಸದಸ್ಯರು ಹೇಳಿದ್ದರು. ಇದೇ ವೇಳೆ ಅವರು ಸೂಸೈಡ್​​​​​​​​​​​ ನೋಟ್​ ಬರೆದಿಟ್ಟಿದ್ದು, ನನ್ನ ಈ ನಿರ್ಧಾರಕ್ಕೆ ಯಾರೂ ಜವಾಬ್ದಾರರಲ್ಲ. ನಾನು ಒಂಟಿತನ ಮತ್ತು ಒತ್ತಡವನ್ನು ಅನುಭವಿಸುತ್ತಿದ್ದೇನೆ. ನನ್ನ ಹೆತ್ತವರಿಗೆ ಹೊರೆಯಾಗಲು ಬಯಸುವುದಿಲ್ಲ ಎಂದು ಮರಣ ಪತ್ರದಲ್ಲಿ ಪ್ರತ್ಯುಷ್ಯಾ ಬರೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಕಾರಿ ರಾಸಾಯನಿಕ ಸೇವಿಸಿ ಸಾವು ಶಂಕೆ: ಫ್ಯಾಷನ್ ಡಿಸೈನರ್ ಪ್ರತ್ಯುಷ್ಯಾ ನಗರದ ಐಷಾರಾಮಿ ಬಂಜಾರರ ಹಿಲ್ಸ್ ಪ್ರದೇಶದಲ್ಲಿರುವ ತಮ್ಮ ಅಂಗಡಿಯಲ್ಲಿ ವಿಷಕಾರಿ ರಾಸಾಯನಿಕ ಸೇವಿಸಿ ತಮ್ಮ ಜೀವನವನ್ನು ಕೊನೆಗೊಳಿಸಿದ್ದಾಳೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಸಾಯನಿಕವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಅವರು ಕಾರ್ಬನ್ ಮಾನಾಕ್ಸೈಡ್ ಸೇವಿಸಿರಬಹುದು ಎಂದು ಶಂಕಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ:ದೇಶದ ಖ್ಯಾತ ಫ್ಯಾಷನ್ ಡಿಸೈನರ್‌ ಪ್ರತ್ಯುಷಾ ಅನುಮಾನಾಸ್ಪದ ಸಾವು!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.