ಹೈದರಾಬಾದ್ (ತೆಲಂಗಾಣ): ಅತ್ಯಂತ ಜನಪ್ರಿಯ ಚಾಟ್ ಶೋನ ಏಳನೇ ಸೀಸನ್ ಈ ಬಾರಿ ಒಟಿಟಿಯಲ್ಲಿ ಪ್ರಸಾರವಾಗಲಿದೆ ಎಂದು ಹೋಸ್ಟ್ ಕರಣ್ ಜೋಹರ್ ಹೇಳಿಕೆ ನೀಡಿದ ನಂತರ ಕಾಫಿ ವಿತ್ ಕರಣ್ ಸುತ್ತಲಿನ ಬಝ್ ವೇಗ ಪಡೆಯುತ್ತಿದೆ. ಈ ಬಾರಿ ಬಾಲಿವುಡ್ ಗಡಿ ಮೀರಿ ಟಾಲಿವುಡ್ನ ಪುಷ್ಪಾ ಸ್ಟಾರ್‌ಗಳಾದ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕರಣ್ ಜೊತೆ ಕಾಫಿ ಶೇರ್ ಮಾಡಿಕೊಳ್ಳಲಿದ್ದಾರೆ ಎಂಬ ವರದಿಗಳು ಸುದ್ದಿಯಲ್ಲಿವೆ.
ಪ್ಯಾನ್ - ಇಂಡಿಯಾದಲ್ಲಿ ಅಭಿಮಾನಿಗಳನ್ನು ಗಳಿಸಿರುವ ರಶ್ಮಿಕಾ ಮತ್ತು ಅಲ್ಲು ಅರ್ಜುನ್ ಜೋಡಿ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ತಮ್ಮ ಚೊಚ್ಚಲ ಶೋಗೆ ಪ್ರವೇಶಿಸಲು ಸಿದ್ದರಾಗಿದ್ದಾರೆ ಎಂದು ವಿವಿಧ ವರದಿಗಳು ಹೇಳುತ್ತವೆ. ಕಾಫಿ ವಿತ್ ಕರಣ್ ನಿರ್ಮಾಪಕರು ಪುಪ್ಪ ತಾರೆಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ, ಇನ್ನೂ ಇಬ್ಬರಿಂದ ಒಪ್ಪಿಗೆ ಸಿಕ್ಕಿಲ್ಲ. ರಶ್ಮಿಕಾ ಈಗಾಗಲೇ ಒಂದೆರಡು ಹಿಂದಿ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದರೆ, ಅಲ್ಲು ಅರ್ಜುನ್ ಸಂಜಯ್ ಲೀಲಾ ಬನ್ಸಾಲಿ ಅವರ ಕಚೇರಿಗೆ ಭೇಟಿ ನೀಡಿರುವುದು ಏಸ್ ಚಲನಚಿತ್ರ ನಿರ್ಮಾಪಕರೊಂದಿಗಿನ ಅವರ ಸಹಯೋಗದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ.
- " class="align-text-top noRightClick twitterSection" data="
">
ಒಟಿಟಿ ವೇದಿಕೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಮುಂಬರುವ ಕಾಫಿ ವಿತ್ ಕರಣ್ ಕಾರ್ಯಕ್ರಮ ಪ್ರಸಾರವಾಗಲಿದೆ ಎಂಬ ಪೋಸ್ಟ್ ಹಾಕಿದ ಕೆಲವೇ ಹೊತ್ತಿನಲ್ಲಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕರಣ್ ಜೋಹರ್ ಈ ಬಾರಿಯ ಹೊಸ ಶೋನಲ್ಲಿ ಭಾರತದ ಅತೀದೊಡ್ಡ ಸ್ಟಾರ್ಗಳು ಆಸನವನ್ನು ಅಲಂಕರಿಸಲಿದ್ದು, ಐಕಾನಿಕ್ ಕಾಫಿ ಹ್ಯಾಂಪರ್ಗಾಗಿ ಆಡಲಿದ್ದಾರೆ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೇ 7ರಂದು ಕಾಫಿ ವಿತ್ ಕರಣ್‌ನ ಏಳನೇ ಆವೃತ್ತಿಯ ಚಿತ್ರೀಕರಣ ಪ್ರಾರಂಭವಾಗಲಿದ್ದು, ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಹೊಸ ಸೀಸನ್ ಜೊತೆಗೆ ಈ ಹಿಂದಿನ ಸೀಸನ್ಗಳಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಸೆಗ್ಮೆಂಟ್, ರ್ಯಾಪಿಡ್ -ಫೈರ್ ರೌಂಡ್ ಕೂಡ ವೀಕ್ಷಕರನ್ನು ಮನರಂಜಿಸಲು ಪ್ರಸಾರವಾಗಲಿವೆ. ಹೊಸ ಸೀಸನ್‌ನಲ್ಲಿ ಕಾಫಿ ಬಿಂಗೋ, ಮ್ಯಾಶ್ಡ್ ಅಪ್ ಮುಂತಾದ ಹೊಸ ಆಟಗಳನ್ನು ಪರಿಚಯಿಸುತ್ತಿದ್ದು, ತಮ್ಮ ನೆಚ್ಚಿನ ನಟರಿಗೆ ವೀಕ್ಷಕರನ್ನು ಇನ್ನಷ್ಟು ಹತ್ತಿರಗೊಳಿಸುವಂತೆ ಮಾಡುತ್ತದೆ.
ಇದನ್ನೂ ಓದಿ: ಕಾಫಿ ವಿತ್ ಕರಣ್ ಟಿವಿ ಬದಲು ಒಟಿಟಿಯಲ್ಲಿ ಪ್ರಸಾರ: ಸ್ಪಷ್ಟಪಡಿಸಿದ ಕರಣ್ ಜೋಹರ್