ETV Bharat / entertainment

ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಆಗಿ ಕಿಶೋರ್ ಪಾತ್ರ ಹೇಗಿದೆ? - Kantara movie

ಸದ್ಯ ಟ್ರೈಲರ್​ನಿಂದಲೇ ಕುತೂಹಲ ಹುಟ್ಟಿಸಿರೋ ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಆಗಿ ಕಿಶೋರ್ ಅಬ್ಬರಿಸಿದ್ದಾರೆ.

Kishore as a forest officer in Kantara movie
ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಆಗಿ ಕಿಶೋರ್
author img

By

Published : Sep 27, 2022, 8:06 PM IST

ಕನ್ನಡ ಚಿತ್ರರಂಗ ಅಲ್ಲದೇ ಬಹುಭಾಷೆಯಲ್ಲಿ ಬೇಡಿಕೆ ಹೊಂದಿರುವ ನಟ ಕಿಶೋರ್. ಪುನೀತ್ ರಾಜ್​ಕುಮಾರ್, ರಜನಿಕಾಂತ್, ಮೋಹನ್ ಲಾಲ್, ಕಮಲ್ ಹಾಸನ್, ಚಿಯಾ ವಿಕ್ರಮ್ ಹೀಗೆ ಸೌತ್ ಸಿನಿಮಾ ಇಂಡಸ್ಟ್ರಿಯ ಬಹುತೇಕ ಸ್ಟಾರ್ ನಟರ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಅಪ್ಪಟ ಕನ್ನಡದ ನಟ ಕಿಶೋರ್.

ಸದ್ಯ ಟ್ರೈಲರ್​ನಿಂದಲೇ ಕುತೂಹಲ ಹುಟ್ಟಿಸಿರೋ ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಆಗಿ ಕಿಶೋರ್ ಅಬ್ಬರಿಸಿದ್ದಾರೆ. ಈ ಚಿತ್ರದಲ್ಲಿ ಮುರಳಿ ಎಂಬ ಖಡಕ್ ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮೇಕಿಂಗ್ ವಿಡಿಯೋ ಮೂಲ ಮುರಳಿ ಪಾತ್ರದ ಹಿಂದಿನ ಕಥೆಯನ್ನ ಹೇಳಲಾಗಿದೆ.

ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ ಆಗಿ ಕಿಶೋರ್

ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿರೋ ಕಾಂತಾರ ಸಿನಿಮಾದಲ್ಲಿ ಕಿಶೋರ್ ಪಾತ್ರ ಬಹಳ ಪವರ್ ಫುಲ್ ಆಗಿದೆ. ಈ ಪಾತ್ರವನ್ನು ಯಾರಿಂದ ಮಾಡಿಸಬೇಕು ಅಂದಾಗ ರಿಷಬ್ ಶೆಟ್ಟಿ ಟೀಮ್ ನೆನಪಿಗೆ ಬಂದಿದ್ದು ಕಿಶೋರ್.

ಸಹಜವಾಗಿ ಕಿಶೋರ್ ಸಿನಿಮಾ ಶೂಟಿಂಗ್ ಇಲ್ಲಾ ಎಂದರೆ, ತಮ್ಮ ತೋಟದಲ್ಲಿ ಕಾಲ ಕಳೆಯುವ ನಟ. ಹೀಗಾಗಿ ಈ ಕಾಂತಾರ ಸಿನಿಮಾ ಮಾಡೋದಿಕ್ಕೆ ಕಿಶೋರ್​ ಅವರಿಗೆ ಇಷ್ಟ ಆಗಿತ್ತು. ಏಕೆಂದರೆ ಈ ಸಿನಿಮಾ ಭೂತರಾಧನೆ, ಕಂಬಳ ಕ್ರೀಡೆ ಹೀಗೆ ಸಾಕಷ್ಟು ವಿಷ್ಯಗಳನ್ನು ಒಳಗೊಂಡಿದೆ ಅನ್ನೋದು.

ಹಾಡು ಹಾಗೂ ಟ್ರೈಲರ್​ ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಕಾಂತಾರ ಸಿನಿಮಾವನ್ನು ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದಾರೆ. ಕರಾವಳಿ ಸೊಗಡಿನ ಕಂಬಳ ಕ್ರೀಡೆ ಜೊತೆಗೆ ಊರು ಮತ್ತು ಅರಣ್ಯ ಇಲಾಖೆಯ ಬಗೆಗಿನ ಕಥೆ ಆಧರಿಸಿರೋ ಕಾಂತಾರ ಚಿತ್ರದ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

ಕಾಂತಾರ ಸಿನಿಮಾವನ್ನ ಇದೇ ಸೆಪ್ಟೆಂಬರ್ 30ಕ್ಕೆ ದೇಶಾದ್ಯಂತ ರಿಲೀಸ್ ಮಾಡಲು ಹೊಂಬಾಳೆ ಫಿಲ್ಮ್ ಸಂಸ್ಥೆ ಪ್ಲ್ಯಾನ್ ಮಾಡಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ಸಪ್ತಮಿ ಗೌಡ ಜೋಡಿಯಾಗಿದ್ದು, ಬಹುಭಾಷೆ ನಟ ಕಿಶೋರ್ ಈ ಚಿತ್ರದಲ್ಲಿ ಅರಣ್ಯ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಸಾಕಷ್ಟು ವಿಶೇಷತೆಗಳಿರೋ ಕಾಂತಾರ ಸಿನಿಮಾ ಸಹಜವಾಗಿ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.