ETV Bharat / entertainment

ರಕ್ಕಮ್ಮ ಜಾಕ್ವೆಲಿನ್​​ಗೆ ಕನ್ನಡ ಹೇಳಿಕೊಟ್ಟ ವಿಕ್ರಾಂತ್ ರೋಣ! - ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್​ ರೋಣ ಸಿನಿಮಾ

ಸ್ಟೈಲಿಷ್ ಟ್ರೆಂಡಿ ಕಾಸ್ಟೂಮ್ ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ನೂರಾರು ಜನ ಸಹ ಕಲಾವಿದರ ಜೊತೆ ಹೆಜ್ಜೆ ಹಾಕಿದ್ದಾರೆ‌. ಕಿಚ್ಚನ ಜೊತೆ ಕಿಕ್ಕೇರಿಸುವ ಲುಕ್​​​ನಲ್ಲಿ ರಕ್ಕಮ್ಮನಾಗಿ ಜಾಕ್ವೆಲಿನ್ ಫರ್ನಾಂಡಿಸ್ ಡ್ಯಾನ್ಸ್ ಮಾಡಿದ್ದಾರೆ.

ರಕ್ಕಮ್ಮ ಜಾಕ್ವೆಲಿನ್​​ಗೆ ಕನ್ನಡ ಹೇಳಿಕೊಟ್ಟ ವಿಕ್ರಾಂತ್ ರೋಣ

author img

By

Published : May 27, 2022, 7:10 PM IST

Updated : May 27, 2022, 7:27 PM IST

ಕನ್ನಡ ಚಿತ್ರರಂಗ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಟಾಕ್ ಆಗುತ್ತಿರುವ ಚಿತ್ರ ವಿಕ್ರಾಂತ್ ರೋಣ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಕ್ರಾಂತ್ ಆಗಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ. ಸದ್ಯ ಟೀಸರ್ ಹಾಗೂ ಪೋಸ್ಟರ್​​ನಿಂದಲೇ ಕ್ರೇಜ್ ಹುಟ್ಟು ಹಾಕಿರೋ ವಿಕ್ರಾಂತ್ ರೋಣ ಸಿನಿಮಾದ, ರಾ ರಾ ರಕ್ಕಮ್ಮ ಹಾಡಿನ ಲಿರಿಕಲ್ ವಿಡಿಯೋ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿ,‌ ಸಾಮಾಜಿಕ ಜಾಲತಾಣದಲ್ಲಿ ಮಿಲಿಯನ್​ಗಟ್ಟಲೆ ಜನರು ನೋಡಿ ಮೆಚ್ಚಿಕೊಂಡಿದ್ದಾರೆ‌.

ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್ ರಾ ರಾ ರಕ್ಕಮ್ಮ, ಎಂಬ ಕ್ಯಾಚೀ ನಂಬರ್ ಹಾಡಿಗೆ ಕೈಯಲ್ಲಿ ಸಾರಾಯಿ ಬಾಟಲಿ ಹಿಡಿದು, ಸೊಂಟ ಬಳಕಿಸಿದ್ದರು‌. ಸ್ಟೈಲಿಷ್ ಟ್ರೆಂಡಿ ಕಾಸ್ಟೂಮ್ ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ನೂರಾರು ಜನ ಸಹ ಕಲಾವಿದರ ಜೊತೆ ಹೆಜ್ಜೆ ಹಾಕಿದ್ದಾರೆ‌. ಕಿಚ್ಚನ ಜೊತೆ ಕಿಕ್ಕೇರಿಸುವ ಲುಕ್​​​ನಲ್ಲಿ ರಕ್ಕಮ್ಮನಾಗಿ ಜಾಕ್ವೆಲಿನ್ ಫರ್ನಾಂಡಿಸ್ ಡ್ಯಾನ್ಸ್ ಮಾಡಿದ್ದಾರೆ.

ನಿರ್ದೇಶಕ ಅನೂಪ್ ಭಂಡಾರಿ ಬರೆದಿರುವ ಸಾಹಿತ್ಯಕ್ಕೆ ನಕ್ಷಾ ಅಜೀಜ್ ಹಾಗೂ ಸುನಿಧಿ ಚೌಹಾನ್ ಸಖತ್ತಾಗಿ ಹಾಡಿದ್ದು, ಅಜನೀಶ್ ಲೋಕನಾಥ್ ಕ್ಯಾಚೀ ಟ್ಯೂನ್ಸ್ ಹಾಕಿದ್ದಾರೆ. ಇದೀಗ ರಕ್ಕಮ್ಮ ಹಾಡಿಗೆ ಕಿಚ್ಚ ಸುದೀಪ್ ಕೂಡ ಡ್ಯಾನ್ಸ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ರಕ್ಕಮ್ಮ ಡ್ಯಾನ್ಸ್ ಚಾಲೆಂಜ್ ಹಾಕಿದ್ದಾರೆ.

ರಕ್ಕಮ್ಮ ಜಾಕ್ವೆಲಿನ್​​ಗೆ ಕನ್ನಡ ಹೇಳಿಕೊಟ್ಟ ವಿಕ್ರಾಂತ್ ರೋಣ!

ಅಷ್ಟೇ ಅಲ್ಲ ಕಿಚ್ಚ ಸುದೀಪ್ ವಿಡಿಯೋ ಕಾಲ್ ಮಾಡಿ ಜಾಕ್ವೆಲಿನ್ ಫರ್ನಾಂಡೀಸ್ ಜೊತೆ ಹಾಡಿನ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಜಾಕ್ವೆಲಿನ್​ಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಸುದೀಪ್ ಹೇಳಿಕೊಟ್ಟಂತೆ ಸ್ವಲ್ಪ ದಿನಗಳಲ್ಲಿ ನಾನು ಬೆಂಗಳೂರಿಗೆ ಬರ್ತೀನಿ ಅಂತಾ ಜಾಕ್ವೆಲಿನ್​ ಹೇಳಿದ್ದಾರೆ.

ಇನ್ನು ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅವರ ಅದ್ಧೂರಿ ಬಜೆಟ್​​ನಲ್ಲಿ ಈ‌ ಸಿನಿಮಾ ನಿರ್ಮಾಣ ಆಗಿದೆ. 14 ಭಾಷೆಗಳಲ್ಲಿ ತೆರೆಗೆ ಬರಲಿರುವ ವಿಕ್ರಾಂತ್ ರೋಣ ಫ್ರೆಂಚ್, ಅರೆಬಿಕ್, ಸ್ಪ್ಯಾನಿಷ್, ಮಂಡರಿನ್ ಮತ್ತು ರಷ್ಯಾ ಭಾಷೆಗಳಿಗೂ ಕೂಡ ಡಬ್ ಆಗಲಿದೆ. ಜೂನ್ 28ಕ್ಕೆ ವಿಶ್ವಾದ್ಯಂತ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಉಡುಪಿ ಯುವತಿ ಆತ್ಮಹತ್ಯೆ ಪ್ರಕರಣ: ಇದು ಲವ್​, ಸೆಕ್ಸ್​ ಜಿಹಾದ್​ ಎಂದ ಹಿಂದೂ ಮುಖಂಡರು

Last Updated : May 27, 2022, 7:27 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.