ETV Bharat / entertainment

ಕೆಜಿಎಫ್​​ 2 ಅಬ್ಬರದ ನಡುವೆ ಮಕಾಡೆ ಮಲಗಿದ ಹಿಂದಿಯ ರನ್​ವೇ 34, ಹೀರೋಪಂತಿ 2!

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಾಫ್ಟರ್ 2 ಹಿಂದಿ ಚಿತ್ರರಂಗದ ಮಂದಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಸಿನಿಮಾ ತೆರೆ ಕಂಡು 17 ದಿನ ಕಳೆದರೂ ಬಾಕ್ಸ್​ ಆಫೀಸ್​​ನಲ್ಲಿ ಚಿತ್ರದ ಅಬ್ಬರ ಮಾತ್ರ ಕಡಿಮೆಯಾಗಿಲ್ಲ.

KGF Chapter 2 rules box office
KGF Chapter 2 rules box office
author img

By

Published : May 2, 2022, 3:09 PM IST

ಹೈದರಾಬಾದ್​: ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿರುವ ಕೆಜಿಎಫ್​ ಚಾಪ್ಟರ್​​ 2 ಎದುರು ಹಿಂದಿ ಚಿತ್ರರಂಗದ ಕೆಲವೊಂದು ಚಿತ್ರಗಳು ಮಕಾಡೆ ಮಲಗಿವೆ. ಇತ್ತೀಚೆಗೆ ತೆರೆ ಕಂಡಿರುವ ಅಜಯ್ ದೇವಗನ್ ನಟನೆಯ ರನ್​ವೇ 34 ಹಾಗೂ ಟೈಗರ್​ ಶ್ರಾಫ್​ ಅಭಿನಯದ ಹೀರೋಪಂತಿ 2 ಬಾಕ್ಸ್​ ಆಫೀಸ್​​ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿವೆ.

ಈಗಾಗಲೇ ಸಾವಿರ ಕೋಟಿ ಕ್ಲಬ್​ ಸೇರ್ಪಡೆಯಾಗಿರುವ ಕೆಜಿಎಫ್​ ಚಾಪ್ಟರ್ 2 ಹಿಂದಿ ಅವತರಣಿಕೆಯಲ್ಲೇ 369.58 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದೀಗ ಏಪ್ರಿಲ್​​ 29ರಂದು ತೆರೆ ಕಂಡಿರುವ ಅಜಯ್ ದೇವಗನ್​ ನಟನೆಯ ರನ್​ವೇ ಕೇವಲ 3 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ಮಾತು ಕೇಳಿ ಬಂದಿದೆ. ಇದರ ಜೊತೆಗೆ ಬಾಲಿವುಡ್​ ನಟ ಟೈಗರ್​​ ಶ್ರಾಫ್​ ನಟನೆಯ ಹೀರೋಪಂತಿ 2 ಮೊದಲ ದಿನ 6.50 ಕೋಟಿ ರೂಪಾಯಿ ಗಳಿಕೆ ಮಾಡಿದೆ.

  • #KGF2 remains the first choice of moviegoers, despite two new titles taking away a chunk of screens, shows and footfalls... Should cross #Dangal during #Eid holidays... [Week 3] Fri 4.25 cr, Sat 7.25 cr, Sun 9.27 cr. Total: ₹ 369.58 cr. #India biz. #Hindi pic.twitter.com/UkOLMVexSU

    — taran adarsh (@taran_adarsh) May 2, 2022 " class="align-text-top noRightClick twitterSection" data=" ">

ತಮಿಳು ಭಾಷೆಯಲ್ಲೂ ದಾಖಲೆ ಬರೆದ ಕೆಜಿಎಫ್​ 2: ರಾಕಿ ಭಾಯ್​​ ಅಭಿನಯದ ಕೆಜಿಎಫ್​ ಚಾಫ್ಟರ್​ 2 ತಮಿಳು ಬಾಕ್ಸ್​ ಆಫೀಸ್​ನಲ್ಲೂ ಹೊಸದೊಂದು ದಾಖಲೆ ಬರೆದಿದೆ. ತಮಿಳುನಾಡಿನಲ್ಲಿ 100 ಕೋಟಿ ರೂ. ಗಳಿಕೆ ಮಾಡಿರುವ ಈ ಚಿತ್ರ, ಇಷ್ಟೊಂದು ಹಣ ಗಳಿಕೆ ಮಾಡಿರುವ ಕರ್ನಾಟಕದ ಮೊದಲ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ. ಜೊತೆಗೆ ಬೀಸ್ಟ್​​ನಂತಹ ಚಿತ್ರದ ಎದುರು ಸದ್ದು ಮಾಡಿದೆ.

ಇದನ್ನೂ ಓದಿ: ಕನ್ನಡಿಗರಿಂದ ಕನ್ನಡಿಗರಿಗಾಗಿ ಸಿದ್ದವಾಗಿರೋ ಟಾಕೀಸ್​ಗೆ ಸಿಕ್ತು ಕರುನಾಡ ಚಕ್ರವರ್ತಿಯ ಅಭಯಹಸ್ತ!

ಭಾರತೀಯ ಚಿತ್ರರಂಗದಲ್ಲಿ ದಂಗಲ್​, ಬಾಹುಬಲಿ 2 ಹಾಗೂ ಆರ್​ಆರ್​ಆರ್ ಮಾತ್ರ ಸಾವಿರ ಕೋಟಿ ಕ್ಲಬ್​ ಸೇರಿದ್ದು, ಇದೀಗ ಆ ಸಾಲಿನಲ್ಲಿ ಕನ್ನಡದ ಚಿತ್ರವೊಂದು ಸೇರ್ಪಡೆಯಾಗಿದೆ. ವಿಶ್ವದಾದ್ಯಂತ ಏಪ್ರಿಲ್​ 14ರಂದು ರಿಲೀಸ್​ ಆಗಿರುವ ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್​ ಆಗಿದ್ದು, ಚಿತ್ರದಲ್ಲಿ ನಟ ಯಶ್​, ಬಾಲಿವುಡ್​ನ ಸಂಜಯ್​ ದತ್​, ನಟಿ ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್​​ ಸೇರಿದಂತೆ ಅನೇಕರು ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.