ETV Bharat / entertainment

ಸಾವಿರ ಕೋಟಿ ಕ್ಲಬ್​​ ಸೇರಿದ ಕೆಜಿಎಫ್​​ 2: ಹಿಂದಿ ಅವತರಣಿಕೆಯಲ್ಲೇ ₹416 ಕೋಟಿ ಗಳಿಕೆ

ಬಾಕ್ಸ್​ ಆಫೀಸ್​​ನಲ್ಲಿ ಭರ್ಜರಿ ಸದ್ದು ಮಾಡ್ತಿರುವ ರಾಕಿ ಭಾಯ್ ನಟನೆಯ ಕೆಜಿಎಫ್​ ಚಾಪ್ಟರ್ 2 ಸಾವಿರ ಕೋಟಿ ಕ್ಲಬ್ ಸೇರಿರುವ ಕನ್ನಡದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

KGF 2 collection
KGF 2 collection
author img

By

Published : Apr 30, 2022, 6:08 PM IST

ಬೆಂಗಳೂರು: ಕಳೆದ ಮೂರು ವಾರಗಳ ಹಿಂದೆ ಪ್ರಪಂಚದಾದ್ಯಂತ ತೆರೆ ಕಂಡಿರುವ ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಕೆಜಿಎಫ್​ ಚಾಪ್ಟರ್​ 2 ಹವಾ ಇನ್ನೂ ತಗ್ಗಿಲ್ಲ. ಎಲ್ಲ ಭಾಷೆಗಳಲ್ಲೂ ರಾಕಿ ಭಾಯ್​ ಅಬ್ಬರ ಮುಂದುವರೆದಿದ್ದು, ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಸಿನಿಮಾ ಇಂಡಸ್ಟ್ರೀಯಲ್ಲಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿರುವ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಕೆಜಿಎಫ್​ ಚಾಪ್ಟರ್​ 2 ಪಾತ್ರವಾಗಿದ್ದು, ಇಲ್ಲಿಯವರೆಗೂ ಪ್ರಪಂಚದಾದ್ಯಂತ ಸಾವಿರ ಕೋಟಿಗೂ ಅಧಿಕ ಮೊತ್ತ ಗಳಿಸಿದೆ. ಪ್ರಶಾಂತ್ ನೀಲ್​ ನಿರ್ದೇಶನದ ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಕೆಲವೇ ಚಿತ್ರಗಳ ಸಾಧನೆಯ ಪಟ್ಟಿಗೆ ಸಹ ಸೇರಿಕೊಂಡಿದೆ.

ಭಾಷಾ ವಿವಾದದ ನಡುವೆ ಹಿಂದಿಯಲ್ಲಿ ದಾಖಲೆ: ಕಳೆದ ಕೆಲ ದಿನಗಳಿಂದ ಹಿಂದಿ ಭಾಷೆ ವಿಚಾರವಾಗಿ ವಿವಾದ ಉದ್ಬವವಾಗಿದ್ದು, ಬಾಲಿವುಡ್ ನಟ ಅಜಯ್ ದೇವಗನ್​ ಮಾಡಿದ ಟ್ವೀಟ್‌ಗೆ ಇನ್ನಿಲ್ಲದ ಆಕ್ರೋಶ ವ್ಯಕ್ತವಾಗಿತ್ತು. ಇದರ ಮಧ್ಯೆ ಸ್ಯಾಂಡಲ್​ವುಡ್ ನಟ ಯಶ್ ನಟಿಸಿರುವ ಕೆಜಿಎಫ್​​ ಚಾಪ್ಟರ್​- 2 ಹಿಂದಿ ಚಿತ್ರರಂಗದಲ್ಲೇ ವಿನೂತನ ದಾಖಲೆ ನಿರ್ಮಿಸಿದ್ದು, ದಾಖಲೆಯ 416.60 ಕೋಟಿ ರೂ.ಗಳಿಸಿದೆ.

ಭಾರತೀಯ ಚಿತ್ರರಂಗದಲ್ಲಿ ದಂಗಲ್​, ಬಾಹುಬಲಿ 2 ಹಾಗೂ ಆರ್​ಆರ್​ಆರ್ ಮಾತ್ರ ಸಾವಿರ ಕೋಟಿ ಕ್ಲಬ್​ ಸೇರಿದ್ದು, ಇದೀಗ ಆ ಸಾಲಿನಲ್ಲಿ ಕನ್ನಡದ ಚಿತ್ರವೊಂದು ಸೇರ್ಪಡೆಯಾಗಿದೆ. ವಿಶೇಷವೆಂದರೆ ಈ ಚಿತ್ರ ಹಿಂದಿ ಅವತರಣಿಕೆಯಲ್ಲೇ ದಾಖಲೆಯ 416.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಸಿನಿಮಾ ವಿಶ್ಲೇಷಕ ತಾರಕ್​ ಆದರ್ಶ್​ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೆಜಿಎಫ್​-2 ಸಾವಿರ ಕೋಟಿ ಕ್ಲಬ್ ಸೇರಿದೆ ಎಂಬ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೋಟ್ಯಂತರ ಸಂಭಾವನೆಯ ಪಾನ್ ಮಸಾಲ ಜಾಹೀರಾತು ತಿರಸ್ಕರಿಸಿದ ರಾಕಿಂಗ್ ಸ್ಟಾರ್ ಯಶ್

ವಿಶ್ವದಾದ್ಯಂತ ಏಪ್ರಿಲ್​ 14ರಂದು ರಿಲೀಸ್​ ಆಗಿರುವ ಈ ಸಿನಿಮಾ ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ರಿಲೀಸ್​ ಆಗಿದ್ದು, ಚಿತ್ರದಲ್ಲಿ ನಟ ಯಶ್​, ಬಾಲಿವುಡ್​ನ ಸಂಜಯ್​ ದತ್​, ನಟಿ ರವೀನಾ ಟಂಡನ್​, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್​​ ಸೇರಿದಂತೆ ಅನೇಕರು ನಟಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.