ಕನ್ನಡ ಚಿತ್ರರಂಗಕ್ಕೆ ತುಳಸಿದಳ ಸಿನಿಮಾ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಹಿರಿಯ ನಿರ್ದೇಶಕ ವೇಮಗಲ್ ಜಗನ್ನಾಥ ರಾವ್ ಬಹಳ ದಿನಗಳ ನಂತರ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದೊಂದಿಗೆ ಮತ್ತೆ ಬಂದಿದ್ದಾರೆ. ಚಿತ್ರಕ್ಕೆ 'ನನ್ನ ಹುಡುಕಿ ಕೊಡಿ' ಎಂಬ ಟೈಟಲ್ ಇಟ್ಟಿದ್ದು, ರೇಣುಕಾಂಬ ಥಿಯೇಟರ್ನಲ್ಲಿ ಸಿನಿಮಾ ಮುಹೂರ್ತ ಸಮಾರಂಭ ನಡೆಯಿತು.
ಮೊದಲ ಸನ್ನಿವೇಶಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಕ್ಲಾಪ್ ಮಾಡಿದ್ರೆ, ನಿರ್ದೇಶಕ ಮಹೇಶ್ ಕುಮಾರ್ ಕ್ಯಾಮರಾ ಚಾಲನೆ ನೀಡಿದರು.
![nana huduki kodi](https://etvbharatimages.akamaized.net/etvbharat/prod-images/kn-bng-04-suspense-thriller-cinemadhonge-bandha-director-vemagaljagannath-7204735_24082022223653_2408f_1661360813_686.jpg)
ಬಳಿಕ ಮಾತನಾಡಿದ ನಿರ್ದೇಶಕ ವೇಮಗಲ್ ಜಗನ್ನಾಥ ರಾವ್, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಯುವ ನಟ ಧನ್ವಿತ್ ಅಭಿನಯದ ಜೊತೆ ನಿರ್ಮಾಣ ಮಾಡುತ್ತಿದ್ದಾರೆ. ಧನ್ವಿತ್ ಹುಟ್ಟುಹಬ್ಬದಂದು ಚಿತ್ರಕ್ಕೆ ಚಾಲನೆ ನೀಡಿದ್ದೀವಿ. ಮೀನಾಕ್ಷಿ ಜೈಸ್ವಾಲ್ ಹಾಗೂ ಸಾಯಿ ನಯನ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಪೋಷಕ ಪಾತ್ರಗಳಲ್ಲಿ ಕನ್ನಡದ ಪ್ರಸಿದ್ಧ ಕಲಾವಿದರು ಅಭಿನಯಿಸಲಿದ್ದಾರೆ ಎಂದರು.
ಇದನ್ನೂ ಓದಿ: ಭಾವಿ ಪತಿ ಐವರ್ ಮೆಕ್‌ಕ್ರೇ ಜೊತೆ ಎಂಜಾಯ್ ಮೂಡ್ನಲ್ಲಿ ನಟಿ ಅಲನ್ನಾ ಪಾಂಡೆ.. ತುಂಡುಡಿಗೆಯಲ್ಲಿ ತುಂಟಾಟದ ತಾರೆ
ನಟ ಧನ್ವಿತ್ ಮಾತನಾಡಿ, ನಾನು ಮೂಲತಃ ಕನಕಪುರದವನು. ಹಿಂದೆ ವೇಮಗಲ್ ಜಗನ್ನಾಥ ರಾವ್ ಅವರ ನಿರ್ದೇಶನದ 'ಆವರ್ತ' ಚಿತ್ರದಲ್ಲಿ ಒಂದು ಪಾತ್ರ ಮಾಡಿದ್ದೆ. ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಧನ್ವಿತ್ ಫಿಲಂ ಫ್ಯಾಕ್ಟರಿ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಈ ಚಿತ್ರವನ್ನು ನಾನೇ ನಿರ್ಮಾಣ ಮಾಡುತ್ತಿದ್ದೇನೆ. ವಾಸುಕಿ ಭುವನ್ ಅವರು ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ನಿರ್ದೇಶಕರು ಪೂರ್ತಿ ಕಥೆ ಹೇಳಿಲ್ಲ, ಒಂದೆಳೆ ಹೇಳಿದ್ದಾರೆ. ತುಂಬಾ ಚೆನ್ನಾಗಿದೆ ಅಭಿನಯದ ಜೊತೆಗೆ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದೇನೆ ಎಂದರು.
![nana huduki kodi](https://etvbharatimages.akamaized.net/etvbharat/prod-images/kn-bng-04-suspense-thriller-cinemadhonge-bandha-director-vemagaljagannath-7204735_24082022223653_2408f_1661360813_556.jpg)
ಮುಂದಿನ ವಾರದಿಂದ ನನ್ನ ಹುಡುಕಿ ಕೊಡಿ ಸಿನಿಮಾದ ಶೂಟಿಂಗ್ ಪ್ರಾರಂಭಿಸಲು ಚಿತ್ರತಂಡ ಪ್ಲಾನ್ ಮಾಡಿದ್ದು, ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಲು ನಿರ್ದೇಶಕರು ಸಿದ್ಧತೆ ನಡೆಸಿದ್ದಾರೆ. ಚಿತ್ರಕ್ಕೆ ಸೂರ್ಯಕಾಂತ್ ಕ್ಯಾಮರಾ ವರ್ಕ್ ಮಾಡಿದ್ದಾರೆ.
ಇದನ್ನೂ ಓದಿ: ಲೈಗರ್ ಪ್ರಚಾರಕ್ಕಾಗಿ ಲಾಸ್ ಎಂಜಲೀಸ್‌ನಿಂದ ಈ ಯುವತಿಯನ್ನು ಕರೆತಂದ ವಿಜಯ್ ದೇವರಕೊಂಡ