ETV Bharat / entertainment

ಬಿಗ್ ಬಾಸ್‌ ಕನ್ನಡ: ಟಿಶ್ಯೂ ಮೇಲೆ ಇಶಾನಿ ರ‍್ಯಾಪ್ ಲಿರಿಕ್ಸ್! - Bigg Boss kannada

ಬಿಗ್​ ಬಾಸ್​ ಮನೆಯಲ್ಲಿ ಇಶಾನಿ ರ‍್ಯಾಪ್ ಲಿರಿಕ್ಸ್ ಬರೆಯುವುದರಲ್ಲಿ ಮಗ್ನರಾಗಿದ್ದಾರೆ.

Kannada Bigg Boss
ಬಿಗ್ ಬಾಸ್‌ ಕನ್ನಡ
author img

By ETV Bharat Karnataka Team

Published : Oct 31, 2023, 5:19 PM IST

ಕಥೆ, ಕವಿತೆ, ಬರಹ ಹುಟ್ಟಲು ನಿರ್ದಿಷ್ಟ ಸ್ಥಳ ಅಥವಾ ಐಷಾರಾಮಿ ಜಾಗವೇ ಬೇಕಿಲ್ಲ. ಒಂದು ಪೆನ್ನು, ಒಂದು ಚೂರು ಖಾಲಿ ಕಾಗದ ಇದ್ದರೆ ಸಾಕು ಎಂಬ ಮಾತಿದೆ. ಇದು ಹೊರಜಗತ್ತಿನಲ್ಲಿ ಎಷ್ಟರ ಮಟ್ಟಿಗೆ ಸತ್ಯವೆಂದು ಗೊತ್ತಿಲ್ಲ. ಆದ್ರೆ ಬಿಗ್‌ ಬಾಸ್ ಮನೆಯಲ್ಲಿ ಮಾತ್ರ ಅಕ್ಷರಶಃ ಸತ್ಯವಾಗಿದೆ. ಏನಿದು ಕವಿಸಮಯ?. ಜಿಯೋ ಸಿನಿಮಾದಲ್ಲಿ ನೇರಪ್ರಸಾರ ಆಗುತ್ತಿರುವ ಬಿಗ್ ಬಾಸ್‌ ಕನ್ನಡದ 'ಅನ್‌ಸೀನ್ ಕಥೆಗಳು' ಸೆಗ್ಮೆಂಟ್‌ನಲ್ಲಿ ಈ ಪ್ರಶ್ನೆಗೆ ಉತ್ತರವಿದೆ.

Kannada Bigg Boss
ಬಿಗ್‌ ಬಾಸ್ ಸ್ಪರ್ಧಿ ಇಶಾನಿ

ಬಿಗ್‌ ಬಾಸ್‌ ಸ್ಪರ್ಧಿಗಳ ಪೈಕಿ ರ‍್ಯಾಪ್ ಸಾಹಿತ್ಯ ಬರೆಯುವ ಕೌಶಲ್ಯ ಇರುವುದು ಇಶಾನಿ ಅವರಿಗೆ. ರ‍್ಯಾಪ್ ಹಾಡುಗಳನ್ನು ಕಟ್ಟಿ, ಹಾಡುತ್ತಲೇ ಮುನ್ನಲೆಗೆ ಬಂದಿರುವ ಇಶಾನಿ ಅವರು ಬಿಗ್ ಬಾಸ್‌ ಮನೆಯೊಳಗೆ ಸದ್ದು ಮಾಡಿದ್ದು ಜೋರು ದನಿ ಮತ್ತು ನಗುವಿನಿಂದಲೇ ಹೊರತು ರ‍್ಯಾಪ್ ಮೂಲಕ ಅಲ್ಲ. ಹಿಂದೊಮ್ಮೆ ಅವರೊಂದು ಕನ್ನಡ ರ‍್ಯಾಪ್ ಸಾಂಗ್ ಕಟ್ಟಿದ್ದರಾದರೂ ಅದು ಅಷ್ಟೇನೂ ಸದ್ದು ಮಾಡಲಿಲ್ಲ. ಕಿಚನ್ ರೀಡಿಂಗ್‌ಗೇನೇ ಮುಗಿದುಹೋಯಿತು. ಆದರೆ ಇಶಾನಿ ತಮ್ಮ ಪ್ರಯತ್ನವನ್ನು ಅಷ್ಟಕ್ಕೇ ನಿಲ್ಲಿಸಿಲ್ಲ.

Kannada Bigg Boss
ಟಿಶ್ಯೂ ಮೇಲೆ ಇಶಾನಿ ರ‍್ಯಾಪ್ ಲಿರಿಕ್ಸ್

ಮತ್ತೆ ಮತ್ತೆ ಕನ್ನಡದಲ್ಲಿ ರ‍್ಯಾಪ್ ಸಾಂಗ್ ಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಬಾರಿ ಅವರಿಗೆ ಸಿಕ್ಕಿದ್ದು ಟಿಶ್ಯೂ. ಹೌದು, ಟಿಶ್ಯೂ ಪೇಪರ್ ಮೇಲೆ ಇಂಗ್ಲಿಷ್‌ ಲಿಪಿಯಲ್ಲಿ ಕನ್ನಡದ ಸಾಲುಗಳನ್ನು ಬರೆಯುತ್ತಾ ರ‍್ಯಾಪ್ ಕಟ್ಟುತ್ತಿದ್ದಾರೆ ಇಶಾನಿ. ಪದ್ಯದ ಒಂದೊಂದು ಸಾಲುಗಳೂ ಉಳಿದ ಸ್ಪರ್ಧಿಗಳನ್ನು ರೋಸ್ಟ್ ಮಾಡುವಂತಿದೆ.

ಇಶಾನಿ ರ‍್ಯಾಪ್ ಸಾಂಗ್ ಲಿರಿಕ್ಸ್ ಹೇಗಿದೆ ಗೊತ್ತಾ?

ನಾನ್ ಯಾರು ಅಂತ ನಿಮಗೆ ಗೊತ್ತಿಲ್ವಾ?

ಗೊತ್ತಿಲ್ಲ ಅಂತ ತಿಳಿಸೋಕೆ ಬಂದ್ನಲ್ವಾ

ಉಪ್ಪಿನಕಾಯಿ ಟೇಸ್ಟು ನಿಮಗೆ ಸಾಲ್ತಿಲ್ವಾ

ತಿಳ್ಕೊಳ್ರೋ ಇನ್ನು ನೀವಲ್ಲ

ಇನ್ಮುಂದೆ ನಿಮ್ದು ಏನು ನಡೆಯಲ್ಲ

ಈ ರಾಜ್ಯಕ್ಕೆ ರಾಣಿನೇ ನಾನಲ್ವಾ

ತಲೆಬಗ್ಸೀನೇ ನಡೀಬೇಕು ಈಗೆಲ್ಲ

ಸುಮ್ನಿದ್ರೆ ಮಾಡ್ತೀರಾ ಸೈಕು

ಹಿಡ್ದಿದ್ದೀನಿ ನಾನೀಗ ಮೈಕು

ಹೋಗ್ತೀನಿ ಒಂದೇ ಟೇಕು

ಮಾಡ್ತೀನಿ ನಿಮ್ ಈಗೋ ಬ್ರೇಕು

ತೋರಿಸ್ತೀನಿ ಯಾರೆಲ್ಲಾ ಫೇಕು

ತುಕಾಲಿಗೇ ಫಸ್ಟು ಸ್ಟ್ರೈಕು

ಮಾಡಿದ್ರೆ ತುಕಾಲಿ ಜೋಕು

ಪ್ರತಾಪ್‌ ನೀನಿರಲೇ ಬೇಕು

ಕ್ಯಾಮೆರಾ ಮುಂದೆ ನೀ ಬರೀ ಫೇಕು

ಇಲ್ದಿದ್ರೆ ನೀ ಸುಟ್ಟ ಕೇಕು

ಇದನ್ನೂ ಓದಿ: ಬಿಗ್​​ ಬಾಸ್​​ ಮನೆಗೆ ವಾಪಸ್​​ ಬರುತ್ತಿದ್ದಂತೆ ವರ್ತೂರು ಸಂತೋಷ್​ರನ್ನು ಹೊರ ಕಳುಹಿಸಲಿಚ್ಛಿಸಿದ ಸ್ಪರ್ಧಿಗಳು!

ಹೀಗೆ ಇಶಾನಿ ರ‍್ಯಾಪ್ ಸಾಹಿತ್ಯ ಬೆಳೆಯುತ್ತಲೇ ಇದೆ. ಅದು ಎಲ್ಲಿಗೆ ಹೋಗಿ ಮುಟ್ಟುತ್ತದೆ? ಯಾವಾಗ ಪ್ರೆಸೆಂಟ್ ಆಗುತ್ತದೆ? ಗೊತ್ತಿಲ್ಲ. ಆದ್ರೆ ಮನೆಯೊಳಗಂತೂ ಹೊಸ ಸಂಚಲನ ಹುಟ್ಟು ಹಾಕೋದು ಗ್ಯಾರೆಂಟಿ. ಎಲ್ಲಾ ಸ್ಪರ್ಧಿಗಳಿಗೂ ರ‍್ಯಾಪ್ ಮೂಲಕವೇ ಟಾಂಗ್ ಕೊಡಲು ಸಜ್ಜಾಗುತ್ತಿರುವ ಇಶಾನಿ ತಮ್ಮ ಯತ್ನದಲ್ಲಿ ಯಶಸ್ವಿಯಾಗ್ತಾರಾ? ತಿಳಿದುಕೊಳ್ಳಲು ನೋಡ್ತಾ ಇರಿ ಜಿಯೋ ಸಿನಿಮಾ. ಜಿಯೋ ಸಿನಿಮಾದಲ್ಲಿ 'ಬಿಗ್‌ ಬಾಸ್‌ ಕನ್ನಡ' ಸೀಸನ್​ 10 ಉಚಿತವಾಗಿ ಪ್ರಸಾರ ಆಗುತ್ತಿದೆ. ದಿನನಿತ್ಯದ ಎಪಿಸೋಡ್‌ಗಳು ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.

ಇದನ್ನೂ ಓದಿ: ಶಾರುಖ್​ ಬರ್ತ್​ಡೇ: ಅದ್ಧೂರಿ ಸಂತೋಷಕೂಟಕ್ಕೆ ಸಿದ್ಧತೆ; ಅಭಿಮಾನಿಗಳಿಂದ ವಿವಿಧ ಸಮಾಜಸೇವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.