ETV Bharat / entertainment

ಸಲ್ಮಾನ್​ ಖಾನ್​ಗೆ​ 'ಫ್ಲರ್ಟಿಂಗ್ ಸ್ಕಿಲ್'​​ ಪ್ರದರ್ಶಿಸಲು ಹೇಳಿದ ಕಂಗನಾ ರಣಾವತ್- ವಿಡಿಯೋ ನೋಡಿ! - bigg boss

ಸಲ್ಮಾನ್​ ಖಾನ್ ಮತ್ತು ಕಂಗನಾ ರಣಾವತ್ ಅವರ ಫನ್​ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

Salman Khan Kangana Ranaut
ಸಲ್ಮಾನ್​ ಖಾನ್​​ ಕಂಗನಾ ರಣಾವತ್
author img

By ETV Bharat Karnataka Team

Published : Oct 22, 2023, 6:50 PM IST

ಬಾಲಿವುಡ್​ ಕ್ವೀನ್​ ಖ್ಯಾತಿಯ ಕಂಗನಾ ರಣಾವತ್ ಅಭಿನಯದ ಮುಂಬರುವ ಸಿನಿಮಾ 'ತೇಜಸ್' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ನಾಯಕ ನಟಿ ಸೇರಿದಂತೆ ಚಿತ್ರತಂಡ ಈಗಾಗಲೇ ಪ್ರಚಾರ ಪ್ರಾರಂಭಿಸಿದೆ. ಇತ್ತೀಚೆಗೆ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

'ತೇಜಸ್' ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಂಗನಾ ಬಿಗ್ ಬಾಸ್ 17ರ ಇಂದಿನ (ಅಕ್ಟೋಬರ್ 22) ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್‌ಬಾಸ್​ ಮನೆಯೊಳಗೆ ಹೋಗಿ ಸ್ಪರ್ಧಿಗಳಿಗೆ ಟಾಸ್ಕ್ ಕೂಡಾ ಕೊಟ್ಟಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪ್ರೋಮೋದಲ್ಲಿ ಜನಪ್ರಿಯ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ಅವರೊಂದಿಗೆ ಮೋಜು ಮಸ್ತಿ ಮಾಡಿರೋದನ್ನು ಕಾಣಬಹುದು. ಉತ್ಸಾಹಭರಿತ ಸಂವಾದ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ವಿಡಿಯೋದಲ್ಲಿ, ಕಂಗನಾ ತಮ್ಮನ್ನು ತಾವೇ (ಸಲ್ಮಾನ್​ ಶೈಲಿಯಲ್ಲಿ) ಇಂಟ್ರೊಡ್ಯೂಸ್ ಮಾಡಿಕೊಳ್ಳುತ್ತಾರೆ. ಸಲ್ಮಾನ್​ ಬಳಿ ಫ್ಲರ್ಟಿಂಗ್ ಸ್ಕಿಲ್ ಪ್ರದರ್ಶಿಸುವಂತೆ ತಮಾಷೆಗೆ ಸವಾಲು ಹಾಕಿದ್ದಾರೆ. ಸಲ್ಲು ಸಹ ಒಂದೆರಡು ಡೈಲಾಗ್​ ಬಿಟ್ಟರು.

ಬಿಗ್‌ಬಾಸ್ ವೇದಿಕೆಯಲ್ಲಿ ಇಬ್ಬರು ತೇಜಸ್ ಸಿನಿಮಾ ಬಗ್ಗೆ ಮಾತನಾಡುತ್ತಾರೆ. ಅಕ್ಟೋಬರ್ 27ರಂದು ಬಿಡುಗಡೆಯಾಗಲಿರುವ ಸಿನಿಮಾ ಪ್ರಚಾರದ ಸಲುವಾಗಿ ಕಂಗನಾ ಬಿಗ್‌ಬಾಸ್​ಗೆ ಆಗಮಿಸಿದ್ದಾರೆ. ಸಿನಿಮಾ ಟ್ಯಾಗ್​ಲೈನ್​​ ಬಗ್ಗೆ ಸಲ್ಮಾನ್ ಕಂಗನಾ ಅವರಲ್ಲಿ ಪ್ರಶ್ನಿಸಿದ್ದಾರೆ. ಅದಕ್ಕೆ, "ಚೆಡೋಗೆ ತೋ ಚೋಡೆಂಗೆ ನಹಿ" (ನೀವು ನಮ್ಮನ್ನು ಪ್ರಚೋದಿಸಿದರೆ, ನಾವು ನಿಮ್ಮನ್ನು ಬಿಡುವುದಿಲ್ಲ) ಎಂದು ಕಂಗನಾ ಡೈಲಾಗ್​ ಹೊಡೆದಿದ್ದಾರೆ. ಸಹನಟರು ನಿಮ್ಮೊಂದಿಗೆ ಫ್ಲರ್ಟ್ ಮಾಡಿದ್ರೆ ಹೇಗೆ ಪ್ರತಿಕ್ರಿಯಿಸಿಸುತ್ತೀರಿ ಎಂದು ನಟಿ ಬಳಿ ಸಲ್ಮಾನ್​ ಪ್ರಶ್ನಿಸಿದ್ದಾರೆ. ನಿಮ್ಮಂತೆ ಸುಂದರವಾಗಿದ್ದರೆ, ನಾನು ನನ್ನ ಹೃದಯದಿಂದ ಪ್ರತಿಕ್ರಿಯಿಸುತ್ತೇನೆಂದು ಕಂಗನಾ ಉತ್ತರಿಸಿದರು. ನಂತರ ಕಂಗನಾ ಅವರು ಸಲ್ಮಾನ್ ಬಳಿ ನಿಮ್ಮ ಫ್ಲರ್ಟಿಂಗ್ ಸ್ಕಿಲ್ ಪ್ರದರ್ಶಿಸಲು ತಮಾಷೆಯಾಗಿಯೇ ಕೇಳಿದ್ದಾರೆ. ಫ್ಲರ್ಟಿಂಗ್​ಗೆ ಇಳಿದು ಸಲ್ಲು, ನೀವು ಬಹಳ ಸುಂದರವಾಗಿದ್ದೀರಿ, ಮುಂದಿನ ಹತ್ತು ವರ್ಷಗಳಲ್ಲಿನ ನಿಮ್ಮ ಪ್ಲ್ಯಾನ್ಸ್ ಏನು? ಎಂದು ಡೈಲಾಗ್ಸ್ ಹೊಡೆದಿದ್ದಾರೆ.

ಇದನ್ನೂ ಓದಿ: ನಾಳೆ ಪ್ರಭಾಸ್​ ಜನ್ಮದಿನ: ಹೈದರಾಬಾದ್‌ನಲ್ಲಿ ಅತಿ ದೊಡ್ಡ ಕಟೌಟ್‌ಗೆ ಸಿದ್ಧತೆ, 'ಸಲಾರ್' ಟ್ರೇಲರ್ ರಿಲೀಸ್ ನಿರೀಕ್ಷೆ

ಬಳಿಕ ಕಂಗನಾ ಹಾಗೂ ಸಲ್ಮಾನ್ ಇಬ್ಬರೂ ದೀಪಿಕಾ ಪಡುಕೋಣೆ-ರಣ್​​ವೀರ್ ಸಿಂಗ್ ಅಭಿನಯದ ಗೋಲಿಯೋನ್ ಕಿ ರಾಸ್ಲೀಲಾ ರಾಮ್-ಲೀಲಾ ಸಿನಿಮಾದ ಸೂಪರ್‌ಹಿಟ್ ಗರ್ಬಾ ಸಾಂಗ್ ನಗಾಡಾ ಸಂಗ್ ದೋಲ್​ಗೆ ಮೈ ಕುಣಿಸಿದರು.

ಇದನ್ನೂ ಓದಿ: ಅಲ್ಲು ಅರ್ಜುನ್​ಗೆ ರಾಷ್ಟ್ರ ಪ್ರಶಸ್ತಿ: 'ಪುಷ್ಪ' ನಿರ್ಮಾಪಕರಿಂದ ಸಕ್ಸಸ್ ಪಾರ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.