ETV Bharat / entertainment

ಜೂನಿಯರ್ ಅಪ್ಪು ಅಭಿನಯದ 'ಮಾರಕಾಸ್ತ್ರ' ಬಿಡುಗಡೆಗೆ ಸಜ್ಜು - ನಟ ಆನಂದ್ ಆರ್ಯ

ಯುವ ನಟ ಆನಂದ್ ಆರ್ಯ ಅಭಿನಯದ 'ಮಾರಕಾಸ್ತ್ರ' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್, ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್ ಹಾಗೂ, ಖಜಾಂಚಿ ಟಿ.ಪಿ ಸಿದ್ಧರಾಜು ಈ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

Anand arya starrer marakastra film
ಮಾರಕಾಸ್ತ್ರ ಸಿನಿಮಾದ ಪೋಸ್ಟರ್​​
author img

By

Published : Jun 7, 2022, 9:32 AM IST

ಕನ್ನಡ ಚಿತ್ರರಂಗದ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹೋಲಿಕೆ ಇರುವ ಯುವ ನಟ ಆನಂದ್ ಆರ್ಯ ಸಿನಿಮಾ ಇಂಡಸ್ಟ್ರಿಗೆ ಬಂದಿರುವುದು ಗೊತ್ತಿರುವ ವಿಚಾರ. ದೇಶದ ರಕ್ಷಣೆಗಾಗಿ ಅಂತಾ ಟ್ಯಾಗ್​ಲೈನ್ ಹೊಂದಿರುವ 'ಮಾರಕಾಸ್ತ್ರ' ಸಿನಿಮಾದಲ್ಲಿ, ಆನಂದ್ ಆರ್ಯ ಡಿಟೆಕ್ಟಿವ್‌ ಪಾತ್ರದಲ್ಲಿ, ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರ ತಂಡ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

Anand arya starrer marakastra film
ಮಾರಕಾಸ್ತ್ರ ಚಿತ್ರಕ್ಕೆ ಶುಭ ಹಾರೈಯಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್, ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್ ಹಾಗೂ ಖಜಾಂಚಿ ಟಿ.ಪಿ ಸಿದ್ಧರಾಜು ಆಗಮಿಸಿ ಮಾರಕಾಸ್ತ್ರ ಚಿತ್ರಕ್ಕೆ ಶುಭ ಹಾರೈಯಿಸಿದರು. ಆನಂದ್ ಆರ್ಯಗೆ ಜೋಡಿಯಾಗಿ ಬಳ್ಳಾರಿ ಹುಡುಗಿ ಮಾಧುರ್ಯ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಶಿವಪ್ರಸಾದ್ ಹಾಗೂ ಪುರುಷೋತ್ತಮ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

Anand arya
ನಟ ಆನಂದ್ ಆರ್ಯ

ಈ ಹಿಂದೆ ಹಲವಾರು ಕಿರುಚಿತ್ರಗಳನ್ನ ನಿರ್ದೇಶನ ಮಾಡಿರುವ ಗುರುಮೂರ್ತಿ ಸುನಾಮಿ, ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ‌. ನಿರ್ದೇಶಕ ಗುರುಮೂರ್ತಿ ಹೇಳುವ ಹಾಗೆ ದೇಶದ ದುಷ್ಟಶಕ್ತಿಗಳನ್ನು ಮಟ್ಟ ಹಾಕುವ ಶಕ್ತಿ ಪತ್ರಕರ್ತರ ಲೇಖನಿಗಿದೆ. ಕೆಟ್ಟದ್ದನ್ನು ಕಂಡರೆ ಸಿಡಿದೇಳುವ ಅಸ್ತ್ರವೇ ಈ ಮಾರಕಾಸ್ತ್ರ ಎಂದು ಹೇಳಬಹುದು. ಈ ವಿಷಯದ ಕುರಿತು ಚಿತ್ರದ ಕಥೆ ಸಾಗುತ್ತದೆ. ಇದಕ್ಕೆ ದೇಶದ ರಕ್ಷಣೆಗಾಗಿ ಎಂಬ ಅಡಿಬರಹವನ್ನ ಇಟ್ಟುಕೊಂಡು ಒಂದು ಸಂದೇಶ ಕೊಡಲು ಹೊರಟಿದ್ದಾರೆ ನಿರ್ದೇಶಕರು.

Anand arya starrer marakastra film
ಮಾರಕಾಸ್ತ್ರ ಚಿತ್ರ ತಂಡ

ಈ ಚಿತ್ರಕ್ಕೆ ಮಿರಾಕಲ್ ಮಂಜು ಸಂಗೀತ ನೀಡಿದ್ದು, ಆರು ಹಾಡುಗಳಿವೆ. ಈ ಚಿತ್ರದ ಮೂರು ಹಾಡುಗಳನ್ನ, ನಿರ್ಮಾಪಕ ನಟರಾಜ್ ಹಾಡಿದ್ದಾರೆ. ಶ್ರಾವ್ಯ ಕಂಬೈನ್ಸ್ ಲಾಂಛನದಲ್ಲಿ, ಬಿಬಿಎಂಪಿ ನಿವೃತ್ತ ಎಂಜಿನಿಯರ್ ನಟರಾಜ್ ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ನಿರ್ಮಾಪಕ ನಟರಾಜ್ ಇತ್ತೀಚೆಗೆ ಡಾಕ್ಟರೇಟ್‌ ಪಡೆದ ಖುಷಿಯಲ್ಲಿದ್ದು, ಸದ್ಯದಲ್ಲೇ ಸಿನಿಮಾ ಬಿಡುಗಡೆಗೆ ಪ್ಲಾನ್ ಮಾಡಿದ್ದಾರೆ‌.

ಇದನ್ನೂ ಓದಿ: 'ಮಾರಕಾಸ್ತ್ರ' ಡಿಟೆಕ್ಟಿವ್ ಪಾತ್ರದಲ್ಲಿ ಅಪ್ಪು ಹೋಲಿಕೆ ಇರುವ ಯುವ ನಟ ಚಿತ್ರರಂಗಕ್ಕೆ ಎಂಟ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.