Jawan collection: ಜವಾನ್ ಮೊದಲ ದಿನ 100 ಕೋಟಿ ದಾಟುತ್ತಾ - ಪಠಾಣ್ ದಾಖಲೆ ಪುಡಿಗಟ್ಟುತ್ತಾ? - ವಿಜಯ್ ಸೇತುಪತಿ
SRK Jawan Collection Predictions: ಜವಾನ್ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಲಿದೆ ಎಂದು ಸಿನಿಮಾ ವಿಶ್ಲೇಷಕರು ಅಂದಾಜಿಸಿದ್ದಾರೆ.
Published : Sep 7, 2023, 12:42 PM IST
ಅಭಿಮಾನಿಗಳ ಕಾಯುವಿಕೆ ಕೊನೆಗೊಂಡಿದೆ. ಬಹುನಿರೀಕ್ಷಿತ 'ಜವಾನ್' ಸಿನಿಮಾ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಅಭಿಮಾನಿಗಳು ಬಹಳ ಉತ್ಸಾಹದಿಂದ ಮೆಚ್ಚಿನ ನಟನ ಸಿನಿಮಾ ಸ್ವಾಗತಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಶಿಳ್ಳೆ, ಚಪ್ಪಾಳೆ ಜೋರಾಗಿದೆ. ಎಸ್ಆರ್ಕೆ ತಮ್ಮ ಕನಸಿನ ಓಟ ಪ್ರಾರಂಭಿಸಿದ್ದಾರೆ.
ಜವಾನ್ ಸಿನಿಮಾ ಕ್ರೇಜ್ ನೋಡಿದ್ರೆ, ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಮತ್ತೊಮ್ಮೆ ಬಿಗ್ ಬ್ಲಾಕ್ಬಸ್ಟರ್ ಸಿನಿಮಾ ನೀಡುವಂತೆ ತೋರುತ್ತಿದೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಜವಾನ್ ಟ್ರೆಂಡಿಂಗ್ನಲ್ಲಿದೆ. ಅಭಿಮಾನಿಗಳ ಉತ್ಸಾಹ ನೋಡಿದ್ರೆ ಸಿನಿಮಾ ಮೊದಲ ದಿನವೇ 100 ಕೋಟಿ ದಾಟೋದು ಪಕ್ಕಾ ಎಂಬಂತೆ ತೋರುತ್ತಿದೆ.
- " class="align-text-top noRightClick twitterSection" data="">
ಅಡ್ವಾನ್ಸ್ ಟಿಕೆಟ್ ಬುಕಿಂಗ್ ಭರ್ಜರಿಯಾಗಿ ನಡೆದಿದ್ದು, ಕಲೆಕ್ಷನ್ ಮೇಲೆ ಎಲ್ಲರ ಗಮನ ಹರಿದಿದೆ. ಸಿನಿಮಾ ವಿಶ್ಲೇಷಕರು, ಜವಾನ್ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 70 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಿದ್ದಾರೆ. ಆದ್ರೆ ಸದ್ಯದ ಸಿನಿಮಾ ಕ್ರೇಜ್ ಗಮನಿಸಿದ್ರೆ ಬಾಕ್ಸ್ ಆಫೀಸ್ ಲೆಕ್ಕಾಚಾರ ಮತ್ತಷ್ಟು ಏರುವ ಸಾಧ್ಯತೆ ಇದೆ.
-
Bhuvaneshwar SRK Universe showcasing their love for King Khan in style! 🔥❤️ The #JawanFDFS celebration is a testament to the bond between fans and their favorite superstar! 🌟🎉
— Shah Rukh Khan Universe Fan Club (@SRKUniverse) September 7, 2023 " class="align-text-top noRightClick twitterSection" data="
Jawan in cinemas now! 🔥@iamsrk @RedChilliesEnt @Atlee_dir #Jawan #JawanFDFS… pic.twitter.com/PnETf1hpf2
">Bhuvaneshwar SRK Universe showcasing their love for King Khan in style! 🔥❤️ The #JawanFDFS celebration is a testament to the bond between fans and their favorite superstar! 🌟🎉
— Shah Rukh Khan Universe Fan Club (@SRKUniverse) September 7, 2023
Jawan in cinemas now! 🔥@iamsrk @RedChilliesEnt @Atlee_dir #Jawan #JawanFDFS… pic.twitter.com/PnETf1hpf2Bhuvaneshwar SRK Universe showcasing their love for King Khan in style! 🔥❤️ The #JawanFDFS celebration is a testament to the bond between fans and their favorite superstar! 🌟🎉
— Shah Rukh Khan Universe Fan Club (@SRKUniverse) September 7, 2023
Jawan in cinemas now! 🔥@iamsrk @RedChilliesEnt @Atlee_dir #Jawan #JawanFDFS… pic.twitter.com/PnETf1hpf2
ಸಿನಿ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಜವಾನ್ ಸಿನಿಮಾ ಭಾರತದಲ್ಲಿ 75 ಕೋಟಿ ರೂ. ದಾಟುವ ಸಾಧ್ಯತೆ ಇದೆ. ಸೌತ್ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶನದಲ್ಲಿ ಮೂಡಿ ಬಂದಿರುವ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವು, ಹಿಂದಿ ಚಿತ್ರರಂಗದಲ್ಲೇ ದಿ ಬೆಸ್ಟ್ ಓಪನರ್ ಸಿನಿಮಾವಾಗಿ (ತೆರೆ ಕಂಡ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ) ಹೊರಹೊಮ್ಮಿರುವ ಪಠಾಣ್ ದಾಖಲೆಯನ್ನು ಪುಡಿಗಟ್ಟಲಿದೆ ಎಂದು ಸಿನಿ ವಿಶ್ಲೇಷಕರು ಅಂದಾಜಿಸಿದ್ದಾರೆ. ಗಮನಾರ್ಹ ವಿಷಯವೆಂದರೆ ಪಠಾಣ್ ಕೂಡ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಸಿನಿಮಾವೇ. ಪಠಾಣ್ ತೆರೆಕಂಡ ಮೊದಲ ದಿನ ದೇಶೀಯ ಮಾರುಕಟ್ಟೆಯಲ್ಲಿ 67 ಕೋಟಿ ರೂ. ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 105 ಕೋಟಿ ರೂ. ಕಲೆಕ್ಷನ್ ಮಾಡಿತ್ತು.
ಇದನ್ನೂ ಓದಿ: ಬಹುನಿರೀಕ್ಷಿತ 'ಜವಾನ್' ರಿಲೀಸ್: ಎಸ್ಆರ್ಕೆ ಸಿನಿಮಾ ಸ್ವಾಗತಿಸಲು ಥಿಯೇಟರ್ ಮುಂದೆ ಅಭಿಮಾನಿಗಳ ದಂಡು
ಪಠಾಣ್ ಸಿನಿಮಾ ಸುಮಾರು 60 ಕೋಟಿ ರೂ. ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ ದೇಶೀಯ ಮಾರುಕಟ್ಟೆಯಲ್ಲೇ ಸರಿಸುಮಾರು 67 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವಲ್ಲಿ ಯಶಸ್ವಿ ಆಯಿತು. ಸದ್ಯ ಜವಾನ್ ದೇಶಿಯ ಮಾರುಕಟ್ಟೆಯಲ್ಲಿ 75 ಕೋಟಿ ರೂ.ಗೂ ಅಧಿಕ ಮತ್ತು ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡುವ ಗುರಿ ಹೊಂದಿದೆ. ಸಿನಿ ವಿಶ್ಲೇಷಕರ ಪ್ರಕಾರ, ಜವಾನ್ 100 ರಿಂದ 125 ಕೋಟಿ ರೂ. ಕಲೆಕ್ಷನ್ ಮಾಡಲಿದೆ. ಒಟ್ಟಾರೆ ವಿಶ್ವದಾದ್ಯಂತ ಜವಾನ್ ಸಿನಿಮಾ ಎಷ್ಟು ರೂಪಾಯಿ ಕಲೆಕ್ಷನ್ ಮಾಡಲಿದೆ ಅನ್ನೋದರ ಮೇಲೆ ಎಲ್ಲರ ಗಮನ ಹರಿದಿದೆ.
-
Looks Like, #Jawan 4 days weekend advance is more than #Pathaan 5 days weekend.💥💥#Pathaan was 68.18 Cr Gross; Now #Jawan is estimated 70+ Cr Gross;
— Sacnilk Entertainment (@SacnilkEntmt) September 6, 2023 " class="align-text-top noRightClick twitterSection" data="
Exact data in the morning!!✅
All Time Highest For Bollywood!!✅
">Looks Like, #Jawan 4 days weekend advance is more than #Pathaan 5 days weekend.💥💥#Pathaan was 68.18 Cr Gross; Now #Jawan is estimated 70+ Cr Gross;
— Sacnilk Entertainment (@SacnilkEntmt) September 6, 2023
Exact data in the morning!!✅
All Time Highest For Bollywood!!✅Looks Like, #Jawan 4 days weekend advance is more than #Pathaan 5 days weekend.💥💥#Pathaan was 68.18 Cr Gross; Now #Jawan is estimated 70+ Cr Gross;
— Sacnilk Entertainment (@SacnilkEntmt) September 6, 2023
Exact data in the morning!!✅
All Time Highest For Bollywood!!✅
ಇದನ್ನೂ ಓದಿ: 'Jawan fever': ಪತ್ನಿ ಪ್ರಿಯಾರೊಂದಿಗೆ ದೊಡ್ಡ ಪರದೆಯಲ್ಲಿ 'ಜವಾನ್' ವೀಕ್ಷಿಸಿದ ನಿರ್ದೇಶಕ ಅಟ್ಲೀ
ಮೊದಲ ದಿನ ಸಿನಿಮಾ ವೀಕ್ಷಿಸುವ ಸಲುವಾಗಿ, 14 ಲಕ್ಷಕ್ಕೂ ಹೆಚ್ಚು ಟಿಕೆಟ್ಸ್ ಮಾರಾಟ ಆಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಜೋರಾಗೇ ನಡೆದಿದೆ. ಜೈಪುರ, ಮುಂಬೈ, ಕೋಲ್ಕತ್ತಾ ಸೇರಿದಂತೆ ಹಲವೆಡೆ ಮುಂಜಾನೆಯೇ ಶೋಗಳನ್ನು ಏರ್ಪಡಿಸಲಾಗಿತ್ತು. ಸಿಂಗಲ್ ಸ್ಕ್ರೀನ್ ಮಾತ್ರವಲ್ಲದೇ ಮಲ್ಟಿಫ್ಲೆಕ್ಸ್ಗಳಲ್ಲೂ ಪ್ರೇಕ್ಷಕರು ತುಂಬಿದ್ದಾರೆ. ಸಂಪೂರ್ಣ ಆಸನಗಳು ಭರ್ತಿ ಆಗಿವೆ. ಇವೆಲ್ಲವನ್ನೂ ಗಮನಿಸಿದರೆ ಸಿನಿಮಾ ಸೂಪರ್ ಹಿಟ್ ಆಗಲಿದೆ ಎಂದನಿಸುತ್ತಿದ್ದು, ನಾಳೆ ಮುಂಜಾನೆ ಹೊರ ಬೀಳಲಿರುವ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಸಿನಿಮಾದ ಯಶಸ್ಸನ್ನು ನಿರ್ಧರಿಸಲಿದೆ.