ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಆಗಾಗ್ಗೆ ಈ ಹಿಂದಿನ ನಟಿಮಣಿಯರಿಗೆ ಗೌರವ ಸಲ್ಲಿಸುತ್ತಾರೆ. ಈ ಹಿಂದೆ ಸ್ಮಿತಾ ಪಾಟೀಲ್ ಅವರಿಗೆ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದ ನಟಿ ಇದೀಗ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಜೀನತ್ ಅಮನ್ ಆಗಿ ರೂಪಾಂತರಗೊಂಡಿರುವ ವಿಡಿಯೋ ಶೇರ್ ಮಾಡಿದ್ದಾರೆ.
ಸಿನಿಮಾ ಜೊತೆ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಬವಾಲ್ ನಟಿ ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬವಾಲ್ ನಟಿ, ಜೀನತ್ ಅಮನ್ ಆಗಿ ರೂಪಾಂತರಗೊಂಡಿರುವುದನ್ನು ಕಾಣಬಹುದು. ಈ ಪೋಸ್ಟ್ ಇಂಟರ್ನೆಟ್ನಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಸ್ವತಃ ಹಿರಿಯ ನಟಿ ಜೀನತ್ ಅಮನ್ ಪ್ರತಿಕ್ರಿಯಿಸಿದ್ದಾರೆ.
ವೈಟ್ ಬ್ಯೂಟಿಫುಲ್ ಔಟ್ಫಿಟ್, ಅದಕ್ಕೆ ಹೊಂದಿಕೆಯಾಗುವ ಹೇರ್ ಬ್ಯಾಂಡ್ ಧರಿಸಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಜೀನತ್ ಅಮನ್ ಅವರ ಸೂಪರ್ ಹಿಟ್ ಸಾಂಗ್ "ಲೈಲಾ ಮೈನ್ ಲೈಲಾ"ದ ಸಾಲನ್ನು ಸಹ ಜಾನ್ವಿ ಹೇಳಿದ್ದಾರೆ. ಅಲ್ಲದೇ ತಮ್ಮ ಅಭಿಮಾನಿಗಳಲ್ಲಿ, ತಮ್ಮನ್ನು 'Gen Z-eenat' ಎಂದು ಕರೆಯುವಂತೆ ತಿಳಿಸಿದ್ದಾರೆ.
ದಿ. ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಪೋಸ್ಟ್ ಶೇರ್ ಮಾಡುತ್ತಿದ್ದಂತೆ, ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಕ್ಷಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಜೀನತ್ ಅಮನ್ ಅಮನ್ ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ಜಾನ್ವಿಯ ಅಭಿಮಾನಿಗಳನ್ನು ಕದಿಯುವುದಾಗಿ ತಿಳಿಸಿದ್ದಾರೆ. ಜಾನ್ವಿ ಕಪೂರ್ ಕಾಮೆಂಟ್ ಸೆಕ್ಷನ್ಗೆ ಬಂದು ಸೇರಿದ ಜೀನತ್ ಅವರು, ''ನೀವು ನನ್ನ ಸ್ಟೈಲ್ ಅನ್ನು ಕದ್ದಿದ್ದೀರಿ, ನಾನು ನಿಮ್ಮ ಅಭಿಮಾನಿಗಳನ್ನು ಕದಿಯುತ್ತೇನೆ'' ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಹಿರಿಯ ನಟ ಜಾಕಿ ಶ್ರಾಫ್, ಚಿತ್ರರಂಗಕ್ಕೆ ಮರಳುವಂತೆ ಜೀನತ್ ಅವರನ್ನು ಪ್ರೋತ್ಸಾಹಿಸಿದರು.
ನಟಿ ಜೀನತ್ ಅಮನ್ ಇನ್‌ಸ್ಟಾಗ್ರಾಮ್‌ನಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗಳನ್ನು ಮಾಡುತ್ತಿದ್ದ ಅವಧಿಯಲ್ಲಿನ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದ್ರೆ ನಟಿ ಇನ್ನೂ ಸಿನಿಮಾ ಅಥವಾ ಯಾವುದೇ ಟಿವಿ ಕಾರ್ಯಕ್ರಮಗಳ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಬಗ್ಗೆ ಘೋಷಿಸಿಲ್ಲ. ಜೀನತ್ ಅವರು ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿ ಎಂಬುದು ಹೆಚ್ಚಿನ ಸಂಖ್ಯೆಯ ಅಭಿಮಾನಿಗಳ ಆಸೆ.
ಇದನ್ನೂ ಓದಿ: ಬಿಗ್ ಬಾಸ್ ಸೀಸನ್ 10: ಗ್ರ್ಯಾಂಡ್ ಈವೆಂಟ್ಗೆ ಕ್ಷಣಗಣನೆ - ಸ್ಪರ್ಧಿಗಳ್ಯಾರಿರಬಹುದು?
ಇನ್ನು ನಟಿ ಜಾನ್ವಿ ಕಪೂರ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ದೇವರ' ಮುಂದಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಇದೇ ಮೊದಲ ಬಾರಿ ಜೂನಿಯರ್ ಎರನ್ಟಿಆರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂದು ಚಿತ್ರತಂಡ ಇತ್ತೀಚೆಗಷ್ಟೇ ಘೋಷಿಸಿದ್ದು, ಈ ಚಿತ್ರದ ಮೇಲಿನ ಕುತೂಹಲ ಹೆಚ್ಚಾಗಿದೆ.
ಇದನ್ನೂ ಓದಿ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯದ 'ತೇಜಸ್' ಟ್ರೇಲರ್ ಅನಾವರಣ