ಬಾಲಿವುಡ್ ನಟ ಹೃತಿಕ್ ರೋಷನ್ 2022ರ ನವೆಂಬರ್ನಲ್ಲಿ ತೆಗೆದ ಫೋಟೋವೊಂದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ದೇಹವನ್ನು ಸ್ಥಿರವಾಗಿ ಕಾಪಾಡಿಕೊಳ್ಳುವ ಅವರ ಫಿಟ್ನೆಸ್ ಗುಟ್ಟನ್ನು ಬಹಿರಂಗಪಡಿಸುವ ಸುದೀರ್ಘ ಶೀರ್ಷಿಕೆಯ ಜೊತೆಗಿನ ಬೈಸಿಪ್ಸ್ ಪ್ರದರ್ಶಿಸುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಹಲವಾರು ತಿಂಗಳುಗಳ ಅವಧಿಯಲ್ಲಿ ಅವರು ತಮ್ಮ ದೇಹವನ್ನು ಸ್ಥಿರವಾಗಿರುವಂತೆ ನೋಡಿಕೊಂಡಿದ್ದಾರೆ. ಅದು ಹೇಗೆ ಸಾಧ್ಯವಾಯಿತು? ಎಂಬುದರ ಕುರಿತು ಹೇಳಿದ್ದಾರೆ.
- " class="align-text-top noRightClick twitterSection" data="
">
ನಟ ಇನ್ಸ್ಟಾಗ್ರಾಮ್ನಲ್ಲಿ ಬೈಸಿಪ್ಸ್ ಪ್ರದರ್ಶಿಸುವ ಪೋಟೋವನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್ ಸೇರಿದಂತೆ ಅನೇಕರು ಸ್ಟೈಲಿಶ್ ಸ್ಟಾರ್ ಪೋಸ್ಟ್ಗೆ ಕಮೆಂಟ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹೃತಿಕ್ ಶಕ್ತಿ ಪ್ರದರ್ಶಿಸುವುದನ್ನು ಕಾಣಬಹುದು. ಜೊತೆಗೆ ತಮ್ಮ ದೇಹವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಅನುಸರಿಸುವ ಕೆಲವು ಮಾರ್ಗಸೂಚಿಗಳನ್ನು ಫೋಟೋ ಕೆಳಗೆ ಬರೆದುಕೊಂಡಿದ್ದಾರೆ. ಪೌಷ್ಠಿಕ ಆಹಾರ ಮತ್ತು ನಿದ್ದೆ ಇವೆರಡು ಸರಿಯಾಗಿದ್ದರೆ ಮಾತ್ರ ನಮ್ಮ ದೇಹವನ್ನು ಸ್ಥಿರವಾಗಿ ಕಾಯ್ದಿರಿಸಲು ಸಾಧ್ಯ ಎಂದು ಹೇಳಿದ್ದಾರೆ.
"ನಾನು ಈ ಫೋಟೋವನ್ನು 2022ರ ನವೆಂಬರ್ನಲ್ಲಿ ತೆಗೆದುಕೊಂಡಿದ್ದೇನೆ. ಆದರೆ, ಸರಿಯಾದ ನಿದ್ರೆ ಮತ್ತು ಪೌಷ್ಠಿಕ ಆಹಾರದಿಂದ ಈ ದೇಹವನ್ನು ನಾನು ಇಂದಿಗೂ ಸ್ಥಿರವಾಗಿರಿಸಿದ್ದೇನೆ. ಕೆಲವರಿಗೆ ಆಹಾರ ಮತ್ತು ನಿದ್ರೆ ತಮಾಷೆಯೆನಿಸಬಹುದು. ಆದರೆ, ಇದು ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ಸಹಾಯಕವಾಗಿದೆ. ಜೊತೆಗೆ ವ್ಯಾಯಾಮ ಮಾಡುವುದು ಮತ್ತು ಜಿಮ್ಗೆ ಹೋಗುವುದು ಕೂಡ ಒಳ್ಳೆಯದು. ಅದರೊಂದಿಗೆ ಧ್ಯಾನ ಕೂಡ ನಮ್ಮ ಸಂತೋಷವನ್ನು ದುಪ್ಪಟ್ಟು ಮಾಡಲು ಸಹಕಾರಿಯಾಗುತ್ತದೆ. ಆದರೆ, ಇದೆಲ್ಲವೂ ನಿಮಗೆ ನೀರಸ ಎನಿಸಬಹುದು. ಈ ರೀತಿಯ ಪರಿಶ್ರಮದಿಂದ ವಿಸ್ಮಯ ಸಂಭವಿಸಬಹುದು" ಎಂದು ಬರೆದಿದ್ದಾರೆ.
ಇದನ್ನೂ ಓದಿ: ಸಬಾ ಆಜಾದ್ ಜೊತೆ ಹೃತಿಕ್ ರೋಷನ್ ಸುಂದರ ಕ್ಷಣ: ನೆಟ್ಟಿಗರಿಗೆ ನೆನಪಾದ ಕಂಗನಾ ರಣಾವತ್
ನಟನ ಪೋಸ್ಟ್ಗೆ ಅವರ ತಾಯಿ ಪಿಂಕಿ ರೋಷನ್ ಪ್ರತಿಕ್ರಿಯಿಸಿ, 'ಚೆನ್ನಾಗಿದೆ, ವೆಲ್ ಡನ್' ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ಬಾಲಿವುಡ್ ನಟಿ ಪ್ರೀತಿ ಜಿಂಟಾ, 'ವಾವ್! ನೀವು ನನಗೆ ಧ್ಯಾನ ಮಾಡುವುದು ಮತ್ತು ಮಸಲ್ಸ್ ಮೇಂಟೇನ್ ಮಾಡುವುದು ಹೇಗೆ ಹೇಳಿಕೊಡಿ" ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಹೃತಿಕ್ ಅಭಿಮಾನಿಗಳು ಕೆಂಪು ಹೃದಯಗಳು ಮತ್ತು ಫೈರ್ ಎಮೋಜಿನೊಂದಿಗೆ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ. ಇನ್ನು ಕೆಲವು ನೆಟ್ಟಿಗರು, "ಸರಿಯಾದ ಸಮತೋಲನವನ್ನು ಸ್ಥಿರವಾಗಿ ಕಾಪಾಡುವುದು ಖಂಡಿತವಾಗಿಯೂ ಕಷ್ಟ. ಆದರೂ ಮುಂದುವರೆಸಿ" ಎಂದು ಸಲಹೆ ನೀಡಿದ್ದಾರೆ.
ಬಾಲಿವುಡ್ ನಟರಲ್ಲಿ ಹೃತಿಕ್ ರೋಷನ್ ಮಾತ್ರ ನೋಟ, ಫಿಟ್‌ನೆಸ್, ನಟನೆ, ನೃತ್ಯ ಮತ್ತು ಆಕ್ಷನ್‌ನಲ್ಲಿ ಯಾವುದೇ ಹಾಲಿವುಡ್ ನಟರನ್ನಾದರೂ ಸೋಲಿಸಲು ಸಮರ್ಥರಾಗಿದ್ದಾರೆ. ಸಿನಿಮಾ ವಿಚಾರವಾಗಿ ನೋಡುವುದಾದರೆ, ಹೃತಿಕ್ ರೋಷನ್ ಅವರು ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕಾಗಿ ಹೃತಿಕ್ ರೋಷನ್ ಖ್ಯಾತ ಫಿಟ್ನೆಸ್ ತರಬೇತುದಾರ ಕ್ರಿಸ್ ಗೆಥಿನ್ (Kris Gethin) ಅವರ ಬಳಿ 12 ವಾರಗಳ ಕಾಲ ತರಬೇತಿ ಪಡೆದಿದ್ದಾರೆ. 2024ರ ಜನವರಿ 25 ರಂದು ಈ ಚಿತ್ರ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ನಟ ಸತೀಶ್ ಚಂದ್ರ ಕೌಶಿಕ್ ತಂಗಿದ್ದ ಫಾರ್ಮ್ಹೌಸ್ ಪರಿಶೀಲನೆ: ನಿಷೇಧಿತ ಔಷಧಿ ಪತ್ತೆ!